Site icon TUNGATARANGA

ರಾಹುಲ್ ಗಾಂಧಿ ಸದಸ್ಯತ್ವ ರದ್ದು ಘೋರ ಅನ್ಯಾಯ: ವೈ ಹೆಚ್.ನಾಗರಾಜ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹ ಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅನ್ಯಾಯ ಎಂದು ಕೆಪಿಸಿಸಿ ಸದಸ್ಯ ವೈಎಚ್ ನಾಗರಾಜ್ ತಿಳಿಸಿದ್ದಾರೆ.


ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಅಡಗಿರುವುದು ಈಗ ಸ್ಪಷ್ಟವಾಗಿದೆ ವಿರೋಧ ಪಕ್ಷಗಳನ್ನು ಬಗ್ಗು ಬಡಿಯುವ, ದ್ವೇಷ ಸಾಧಿಸುವ ಇಂತಹ ಕೆಲಸಗಳು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ರಾಹುಲ್ ಅಂತಹ ತಪ್ಪನ್ನು ಮಾಡಿಲ್ಲ ಈ ದೇಶದಲ್ಲಿ ಎಂತೆಂತಹ ತಪ್ಪುಗಳನ್ನು ಮಾಡುತ್ತಲೇ ಇರುವವರು ಅತ್ಯಂತ ಸುರಕ್ಷಿತವಾಗಿ ಇದ್ದಾರೆ.+


ದೇಶದ ವಿರೋಧ ಪಕ್ಷದ ನಾಯಕ ರೊಬ್ಬರನ್ನು ಈ ರೀತಿ ವಜಾ ಮಾಡಿರುವ ಕ್ರಮವನ್ನು ಇಡೀ ವಿಶ್ವವೇ ನೋಡುತ್ತಿದೆ ರಾಹುಲ್ ಚುನಾವಣೆಯಲ್ಲಿ ಸ್ಪರ್ಧೆ ಮಾಡ ಬಾರದು ಎಂಬ ದೂರದ ದುರಾಲೋಚನೆ ಯೂ ಇದರ ಹಿಂದೆ ಅಡಗಿದೆ ಎಂದಿದ್ದಾರೆ. ದುರುದ್ದೇಶದ ಇಂತಹ ರಾಜಕೀಯ ತೀರ್ಮಾ ನಗಳು ಈ ದೇಶಕ್ಕೆ ದೊಡ್ಡ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದಿದ್ದಾರೆ.


ಸರ್ವಾಧಿಕಾರ ಇರುವ ದೇಶಗಳಿಯೇ ಈ ರೀತಿಯ ಘಟನೆಗಳು ನಡೆಯುದಿಲ್ಲ ಆದರೆ ಭಾರತದಂತಹ ಬಹು ದೊಡ್ಡ ಗಟ್ಟಿ ಪ್ರಜಾಪ್ರಭುತ್ವ ದೇಶದಲ್ಲಿ ಈ ರೀತಿ ನೆಡೆಯುತ್ತಿರುವುದು ದುರ ದೃಷ್ಟಕರ.ಇಂದು ಇಡೀ ದೇಶ ಆತಂಕ, ತಲ್ಲಣ ದಲ್ಲಿದೆ ಉದ್ಯೋಗಗಳು ನಶಿಸಿ ಹೋಗುತ್ತಿವೆ, ಬೆಲೆ ಏರಿಕೆಯಿಂದ ಬಡವರು ತತ್ತರಿಸಿ ಹೋಗಿ ದ್ದಾರೆ, ಒಂದು ಸಣ್ಣ ಕಾರಣಕ್ಕೆ ಅನರ್ಹ ಗೊಳಿಸುವುದೇ ಆದರೆ ಸಂಸತ್ತಿನಲ್ಲಿ ಇಂದು ಬಹು ಪಾಲು ಸಂಸದರು ಅನರ್ಹ ಗೊಳ್ಳ ಬೇಕಿತ್ತು. ಶಿವಮೊಗ್ಗವನ್ನೇ ಉದಾಹರಣೆಗೆ ತೆಗೆದುಕೊಂಡರೆ ಕೆ ಎಸ್ ಈಶ್ವರಪ್ಪನಂತವರು ಎಷ್ಟೊಂದು ಮಾತನಾಡಿದ್ದಾರೆ ನಗರದ ಶಾಂತಿಯನ್ನು ಕದಡಿದ್ದಾರೆ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿದ್ದಾರೆ ಆದರೆ ಅವರನ್ನು ಏನು ಮಾಡಿಕೊಳ್ಳಲಾಗಿಲ್ಲ ಮನುಷ್ಯ ಪ್ರೀತಿ ಮರೆತ ವರನ್ನು ಮತ್ತೆ ಮತ್ತೆ ವಿಜೃಂಬಿಸುತ್ತಿರುವುದು


ಅಧರ್ಮ, ಅನ್ಯಾಯ, ಅನೀತಿ, ಅಕ್ರಮ, ಆಸೆ, ಅಹಂಕಾರ, ಅತಿರೇಕ, ಅದ್ವಾನ ,ಅಶಿಸ್ತುಗಳೆ ಬಿಜೆಪಿಯ ತತ್ವ ಸಿದ್ಧಾಂತಗಳಾಗಿವೆ. ಪ್ರಜಾ ಪ್ರಭುತ್ವವನ್ನು ಕಸಿದುಕೊಂಡಿರುವ ಬಿಜೆಪಿಯ ವರಿಷ್ಠರಿಗೆ ಬಡವರ ವೋಟನ್ನು ಕಸಿದು ಕೊಳ್ಳುವುದು ಯಾವ ಲೆಕ್ಕ? ಉಸಿರುಗಟ್ಟು ತ್ತಿರವ ಪ್ರಜಾಪ್ರಭುತ್ವಕ್ಕೆ ಆಮ್ಲಜನಕ ನೀಡಿ ಬದುಕಿಸಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದಿದ್ದಾರೆ.

Exit mobile version