ಶಿವಮೊಗ್ಗ,ಮಾ.25:
ತೀರ್ಥಹಳ್ಳಿ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಮಾನತುಗೊಂಡಿದ್ದ ಪೊಲೀಸ್ ಕಾನ್ಸ್ಟೆಬಲ್ ಪೂರ್ಣೇಶ್ (35) ಎಂಬುವರ ಶವ ಪತ್ತೆಯಾಗಿದೆ ಎಂದು ಗುರುತಿಸಲಾಗಿದೆ.
ಇವರು ಮದ್ಯ ವ್ಯಸನಿಯಾಗಿದ್ದು, ಇವರು ಆಗುಂಬೆ, ತೀರ್ಥಹಳ್ಳಿ, ಮಾಳೂರು, ಕುಂಸಿಯಲ್ಲಿ ಪೂರ್ಣೇಶ್ ಸೇವೆ ಸಲ್ಲಿಸಿದ್ದರು. ಕೆಲ ದಿನಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದರು. ಪೂರ್ಣೇಶ್ ಅವರ ತಲೆಯ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಗುಂಬೆ, ತೀರ್ಥಹಳ್ಳಿ, ಮಾಳೂರು, ಕುಂಸಿಯಲ್ಲಿ ಪೂರ್ಣೇಶ್ ಸೇವೆ ಸಲ್ಲಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತೀರ್ಥಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ. ತನಿಖೆ ನಂತರ ಸಮಗ್ರ ಮಾಹಿತಿಗಳು ಹೊರ ಬರಬೇಕಿದೆ.
ಸುದ್ದಿ ಬಂದ “ಐದೇ” ನಿಮಿಷದಲ್ಲಿ ಕಾಮನ್ ಟಾಯ್ಲೆಟ್ ಪುರುಷರಿಗೆ ಸೀಮಿತವಾಯ್ತು/ ಇದು ತುಂಗಾ ತರಂಗ ಇಂಪ್ಯಾಕ್ಟ್ https://tungataranga.com/?p=19109 ಸಂಪೂರ್ಣ ಸುದ್ದಿ ಮತ್ತು ನಿನ್ನೆಯ ಸುದ್ದಿಯನ್ನು ಓದಲು ಲಿಂಕ್ ಬಳಸಿ