ಈಗಿನ ಚಿತ್ರಣವಿದು
ಶಿವಮೊಗ್ಗ, ಮಾ.25:
ನಿನ್ನೆ ಇದೇ ಹೊತ್ತಿನಲ್ಲಿ ನಿಮ್ಮ ತುಂಗಾ ತರಂಗ ವೆಬ್ ಜಾಲದಲ್ಲಿ ಸುದ್ದಿ ಬರೆದ ಐದೇ ನಿಮಿಷದಲ್ಲಿ ಪುರುಷರು ಮಹಿಳೆಯರಿಗೆ ಇಬ್ಬರಿಗೂ ಇದ್ದ ಒಂದೇ ಬಾಗಿಲ ಶೌಚಾಲಯ ಪುರುಷರಿಗಷ್ಟೇ ಸೀಮಿತವಾಯ್ತು.
ಸಾಕಷ್ಟು ವೈರಲ್ ಆದ ಸುದ್ದಿ ಹರಡಿದ್ದು ಅತ್ಯಂತ ವೇಗವಾಗಿ. ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಕ್ಷಣ ಶೇರ್ ಆದ ನೂರಾರು ಮೂಲಗಳ ಮಾಹಿತಿಗೆ ಬೆಚ್ಚಿಬಿದ್ದ ಆ ಇಲಾಖೆಯವರು ಸದ್ದು ಮಾಡದೇ ಮಹಿಳೆಯರ ಬೋರ್ಡ್ ಕಿತ್ತುಕೊಂಡು ಹೋಗಿದ್ದಾರೆ. ಸುದ್ದಿಯಲ್ಲಿ ಒಂದಿಷ್ಟು ವ್ಯಂಗ್ಯ, ಹಾಸ್ಯ ಮಿಶ್ರಣವಾಗಿದ್ದಕ್ಕೆ ಸಾಕಷ್ಟು ಓದುಗರು ಒಳ್ಳೆಯ ಕಾಮೆಂಟ್ ಮಾಡಿದ್ದಾರೆ. ಶೇರ್ ಮಾಡಿದ್ದಾರೆ. ಆ ಸುದ್ದಿ ಇಂತಿತ್ತು ನೋಡಿ
ಶಿವಮೊಗ್ಗದಲ್ಲೊಂದು ಅಪರೂಪ ನಿಮಗೆ ಗೊತ್ತೇ….? ಪುರುಷರು ಮಹಿಳೆಯರ “ಕಾಮನ್ ಟಾಯ್ಲೆಟ್”
ಶಿವಮೊಗ್ಗದಲ್ಲೊಂದು ಅಪರೂಪದಲ್ಲೇ ಅಪರೂಪ ಎನ್ನುವ ಇಡೀ ಜಗತ್ತಿನಲ್ಲಿ ಎಲ್ಲೂ ಇಲ್ಲ ಎನ್ನುತ್ತಿರುವ ವಿಶೇಷದ ಪುರುಷ ಮತ್ತು ಮಹಿಳೆಯರ ಕಾಮನ್ ಟಾಯ್ಲೆಟ್ ಪತ್ತೆಯಾಗಿದೆ.
ಇದನ್ನು ಮಾಡಿದವರು ಯಾರು? ಯಾಕೆ ಎಂಬುದು ಇಲ್ಲಿ ಬೇಕಿಲ್ಲ. ಶಿವಮೊಗ್ಗ ನೆಹರು ರಸ್ತೆಯ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು ಏಳೆಂಟು ವರ್ಷಗಳ ಹಿಂದೆ ಕಟ್ಟಿದ್ದ ಶೌಚಾಲಯವನ್ನು ಈಗ ಪುಣ್ಯಾತ್ಮರು ಉದ್ಘಾಟಿಸಿದ್ದಾರೆ.
ಬಹುದಿನಗಳ ಮೂರನೇ ತಿರುವು ಹಾಗೂ ನೆಹರು ರಸ್ತೆಯ ಬಹಳಷ್ಟು ಸಾರ್ವಜನಿಕರಿಗೆ ಈ ಶೌಚಾಲಯ ಆರಂಭ ಮಾಡಿರುವುದು ಸಂತಸ ತಂದಿರುವುದು ಸರಿಯಷ್ಟೇ. ಆದರೆ ಇದಕ್ಕೆ ಇರುವುದು ಒಂದೇ ಬಾಗಿಲು. ಬಾಗಿಲ ಪ್ರವೇಶಿಸಿದರೆ ಪುರುಷರು ಶೌಚಕ್ಕೆ ಬಳಸುವ 3 ಕಮೋಡ್ ಗಳಿವೆ.
ನಂತರ ಒಂದು ರೂಮಿದೆ. ಇದರ ಮುಂದೆ ಸಾಮಾನ್ಯ ಶೌಚಾಲಯ ಎಂದು ಹಾಕಿದ್ದರೆ ಯಾರು ಕೇಳುತ್ತಿರಲಿಲ್ಲ. ಆದರೆ ಈ ಅಧಿಕಾರಿ ಮಹಾಶಯರು ಅದ್ಯಾವ ರೀತಿ ಹೇಳಿದರೋ ಗೊತ್ತಿಲ್ಲ.
ತಲೆ ಇಲ್ಲದ ಇಂಜಿನಿಯರ್ ಮಹಾಶಯ ಇಲ್ಲಿ ಎರಡು ಬೋರ್ಡ್ ಹಾಕಿಸಿದ್ದಾನೆ. ಶಿವಮೊಗ್ಗ ವಷ್ಟೇ ಅಲ್ಲ ರಾಜ್ಯದಲ್ಲಿ ಎಲ್ಲೂ ಇಲ್ಲದ ಕಾಮನ್ ಶೌಚಾಲಯ ಎಂಬ ಪ್ರಖ್ಯಾತಿಗೆ ಸದ್ದು ಗದ್ದಲವಿಲ್ಲದೆ ಪಾತ್ರವಾಗುತ್ತಿದೆ ಅಲ್ಲವೇ? ಯಾರನ್ನು ತೆಗಳಿ, ಯಾರನ್ನೋ ಹೊಗಳಿ ಯಾವ ಪ್ರಯೋಜನ? ಸಾರ್ವಜನಿಕರಿಗೆ ಇದನ್ನು ನೋಡಿ ಬಿದ್ದು ಬಿದ್ದು ನಗುವುದಷ್ಟೇ ಶಿವಮೊಗ್ಗ ಜನರ ಪುಣ್ಯ.