–
ಸಾಗರ: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಗಾಗಿ ಪಕ್ಷದ ವರಿ?ರ ಮೇಲೆ ಒತ್ತಡ ಹಾಕುವ ಕೆಲಸ ಆಕಾಂಕ್ಷಿಗಳಿಂದ ನಡೆಯುತ್ತಿದ್ದರೆ, ಬಿಜೆಪಿಯಲ್ಲಿಯಲ್ಲಿ ಪಕ್ಷದಲ್ಲಿನ ಭಿನ್ನಮತ ತಾರಕಕ್ಕೇರಿದೆ. ಅದರಲ್ಲೂ ಹಾಲಿ ಶಾಸಕ ಹರತಾಳು ಹಾಲಪ್ಪ ವಿರುದ್ಧವೇ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಮುಖಂಡರು ತಿರುಗಿಬಿದ್ದಿದ್ದಾರೆ. ಹೀಗಾಗಿ ಸಾಗರದಲ್ಲಿ ಈ ಬಾರಿಯೂ ತಾವೇ ಸ್ಪರ್ಧಿಸಬೇಕು ಎಂಬ ಉಮೇದಿನಲ್ಲಿದ್ದ ಹಾಲಪ್ಪ ಅವರಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಸೊರಬ ಕ್ಷೇತ್ರದಿಂದ ಸಾಗರಕ್ಕೆ ವಲಸೆ ಬಂದಿದ್ದ ಹರತಾಳು ಹಾಲಪ್ಪ ಅವರು ಪಕ್ಷ ಹಾಗೂ ಸಂಘ ಪರಿವಾರದ ಮುಖಂಡರ ವಿಶ್ವಾಸ ಪಡೆದು ಚುನಾವಣೆಯಲ್ಲಿ ಗೆಲುವನ್ನು ಪಡೆದಿದ್ದರು. ಆದರೆ ಕಳೆದ ಚುನಾವಣೆ ವೇಳೆ ಹಾಲಪ್ಪ ಅವರ ಕೈಹಿಡಿದು ಮೇಲೆತ್ತಿದವರು ಇಂದು ಹಾಲಪ್ಪ ಅವರಿಂದ ದೂರವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಯಾವುದೇ ಕಾರಣಕ್ಕೂ ಹಾಲಪ್ಪ ಅವರಿಗೆ ಟಿಕೆಟ್ ನೀಡಬಾರದು. ಒಂದು ವೇಳೆ ಹಾಲಪ್ಪ ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ತಾವು ತಟಸ್ಥರಾಗಿ ಉಳಿಯುವ ಎಚ್ಚರಿಕೆಯನ್ನೂ ಬಿಜೆಪಿಗೆ ಮುಖಂಡರು ನೀಡಿದ್ದಾರೆ. ಇದಲ್ಲದೆ ಯಡಿಯೂರಪ್ಪ ಅವರ ಬಳಿ ನಿಯೋಗ ಹೋಗಿ ಹಾಲಪ್ಪ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಾಗರ ತಾಲೂಕಿನಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಹೆಸರಿನಲ್ಲಿ ಹಾಲಪ್ಪ ವಿರುದ್ಧ ವಿವಿಧೆಡೆ ಬಂಡಾಯದ ಸಭೆಗಳೂ ನಡೆಯಲಾರಂಭಿಸಿರುವುದು ಹಾಲಪ್ಪ ಅವರ ನಿದ್ದೆಗೆಡಿಸಿದೆ.
ಒಂದು ವೇಳೆ ಹಾಲಪ್ಪ ಅವರಿಗೆ ಟಿಕೆಟ್ ತಪ್ಪಿದ್ದೇ ಆದಲ್ಲಿ ಮುಂದೆ ಯಾರು ಸಾಗರದ ಅಭ್ಯರ್ಥಿ ಎಂಬ ಪ್ರಶ್ನೆಗೆ ಇದೀಗ ಬಂಡಾಯ ಎದ್ದಿರುವ ನಾಯಕರುಗಳೇ ನೀವು ಯಾರಿಗಾದರೂ ಟಿಕೆಟ್ ನೀಡಿ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂಬ ಉತ್ತರವನ್ನು ಪಕ್ಷದ ಮುಖಂಡರ ಬಳಿ ಹೇಳಿದ್ದಾರೆ.
ಸಾಗರಕ್ಕೆ ಮುಂದೆ ಯಾರು ಅಭ್ಯರ್ಥಿ ಎಂಬ ಪ್ರಶ್ನೆಗೆ ಮೊದಲ ಹೆಸರು ಕೆ.ಎಸ್.ಪ್ರಶಾಂತ್ ಕೇಳಿ ಬರುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಪ್ರಶಾಂತ್ ಬಿಜೆಪಿಯ ಯೂತ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಪಕ್ಷದಲ್ಲಿ ಸಕ್ರಿಯರಾಗಿ ಪಕ್ಷ ಸಂಘಟಿಸುತ್ತಿರುವ ಜೊತೆಗೆ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು ಅವರು ನೀಡುವ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ. ಸರಳ ವ್ಯಕ್ತಿತ್ವ ಹೊಂದಿರುವ ಪ್ರಶಾಂತ್ ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮುಖಂಡರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸಾಗರ ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರು ಜನಸಾಮಾನ್ಯರ ಬಾಯಿಯಲ್ಲಿಯೂ ಪ್ರಶಾಂತ್ ಹೆಸರು ಹರಿದಾಡುತ್ತಿದೆ. ಇದಲ್ಲದೆ ಈಡಿಗ ಸಮುದಾಯ ಪ್ರಾಬಲ್ಯ ಹೊಂದಿರುವ ಸಾಗರ ಕ್ಷೇತ್ರದಲ್ಲಿ ಈಡಿಗರ ಮತ ಸೆಳೆಯಲು ಪ್ರಶಾಂತ್ ಸೂಕ್ತ ವ್ಯಕ್ತಿ. ಈಡಿಗರ ಜೊತೆಗೆ ಬ್ರಾಹ್ಮಣ ಹಾಗೂ ಲಿಂಗಾಯತ ಮತಗಳನ್ನೂ ಪ್ರಶಾಂತ್ ಸೆಳೆಯುವ ಹಿನ್ನೆಲೆಯಲ್ಲಿ ಪ್ರಶಾಂತ್‌ಗೆ ಟಿಕೆಟ್ ನೀಡಿದಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲಲಿದೆ ಎಂಬುದು ಬಿಜೆಪಿ ನಾಯಕರ ಒಮ್ಮತದ ಅಭಿಪ್ರಾಯವಾಗಿದೆ.
ಪ್ರಶಾಂತ್ ಹೊರತುಪಡಿಸಿ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್‌ರಾಜ್ ಕಣ್ಣೂರು ಹಾಗೂ ಬಿಜೆಪಿ ಮುಖಂಡ ಪ್ರಸನ್ನ ಕೆರೆಕೈ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರೂ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಾಗಿದ್ದು, ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡವರು. ಹೀಗಾಗಿ ನಮಗೇ ಟಿಕೆಟ್ ನೀಡಬೇಕು ಎಂದು ಈ ಇಬ್ಬರು ನಾಯಕರು ಪಕ್ಷದ ವರಿ?ರಲ್ಲಿ ಮನವಿ ಮಾಡಿಕೊಂಡು ಟಿಕೆಟ್ ಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಶಾಸಕ ಹಾಲಪ್ಪ ಅವರಿಗೆ ಮಾಡು ಇಲ್ಲವೆ ಮಡಿ ಪರಿಸ್ಥಿತಿ:
ಪಕ್ಷದಲ್ಲಿ ತಮ್ಮ ವಿರುದ್ಧವೇ ಎದ್ದಿರುವ ಬಂಡಾಯಕ್ಕೆ ಹಾಲಪ್ಪ ಅಕ್ಷರಶಹ ರೋಸಿ ಹೋಗಿದ್ದಾರೆ. ಈಗಾಗಲೇ ಬ್ರಾಹ್ಮಣರು ಹಾಗೂ ಲಿಂಗಾಯತರ ವಿರೋಧ ಕಟ್ಟಿಕೊಂಡಿರುವ ಹಾಲಪ್ಪ ಈಗಾಗಲೇ ಈ ಎರಡು ಸಮುದಾಯಗಳಿಂದ ದೂರವಾಗಿದ್ದಾರೆ. ಇನ್ನು ಈಡಿಗ ಜನಾಂಗವೂ ಹಾಲಪ್ಪ ಅವರನ್ನು ಒಪ್ಪುವ ಪರಿಸ್ಥಿತಿಯಿಲ್ಲ. ಹೀಗಿರುವಾಗ ಪಕ್ಷದಲ್ಲೇ ತಮ್ಮ ವಿರುದ್ಧ ಬಂಡಾಯ ಶಮನಗೊಳ್ಳದಿದ್ದಲ್ಲಿ ಹಾಲಪ್ಪ ಇನ್ನ? ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಯಿದೆ.
ಕಾಂಗ್ರೆಸ್‌ನಲ್ಲಿಯೂ ಮಾಜಿ ಶಾಸಕ ಬೇಳೂರು ಗೋಪಾಲಕೃ? ಹಾಗೂ ರಾಜನಂದಿನಿ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದೆ. ತಮ್ಮ ತಂದೆಯ ಜೊತೆಗೆ ಬೆಂಗಳೂರಿಗೆ ತೆರಳಿ ಪಕ್ಷದ ಪ್ರಮುಖರನ್ನು ಭೇಟಿ ಮಾಡಿರುವ ರಾಜನಂದಿನಿ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನಲ್ಲಿಯೂ ಟಿಕೆಟ್ ಗಾಗಿ ಭಾರಿ ಫೈಪೋಟಿ ನಡೆಯುತ್ತಿರುವುದು ವಿಶೇ?.