ಭದ್ರಾವತಿ, ಅ.01:
ಭದ್ರಾವತಿಯ ರೌಡಿ ಶೀಟರ್ ಶಾರೂ ಅಲಿಯಾಸ್ ಶಾರೂಖ್ ಖಾನ್ ನ ಕೊಲೆ ನಡೆದಿದ್ದು ಈ ಪ್ರಕರಣದಲ್ಲಿ ನಾಲ್ಕೈದು ಜನ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ನಿನ್ನೆ ರಾತ್ರಿ ರೌಡಿ ಶೀಟರ್ ಶಾರೂಖ್ ಮನೆ ನಿವಾಸದ ಬಳಿಯೇ ಕೊಲೆ ನಡೆದಿದೆ. ಹಳೇಯ ದ್ವೇಷ, ಹಣಕಾಸಿನ ವಿಚಾರ ಹಾಗೂ ಅತಿಯಾದ ಗಾಂಜಾ ಸೇವನೆಯಲ್ಲಿ ತೊಡಗಿದ್ದ ಶಾರೂಖ್ ನನ್ನ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆತನ ಕೊಲೆಯಲ್ಲಿ ನಾಲ್ಕೈದು ಜನ ಯುವಕರು ಭಾಗಿಯಾಗಿರುವುದಾಗಿ ಕೇಳಿಬಂದಿದ್ದು ಆರೋಪಿಗಳ ಬಂಧನಕ್ಕೆ ಭದ್ರಾವತಿ ಪೇಪರ್ ಟೌನ್ ಪೊಲೀಸರು ಭರ್ಜರಿಯಾಗಿಯೇ ಬಲೆ ಬೀಸಿದ್ದಾರೆ.
ನಿನ್ನೆ ರಾತ್ರಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಬಡಾವಣೆ ಹನುಮಂತ ನಗರದ ಬಳಿ ಶಾರೂ ಅಲಿಯಾಸ್ ಶಾರೂಖ್ ಖಾನ್ ನನ್ನ ಮರ್ಡರ್ ಮಾಡಲಾಗಿದೆ.
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ, ಭದ್ರಾವತಿಯ ಹಳೇಯ ನಗರ, ಕಾಗದ ನಗರದ ಪೊಲೀಸ್ ಠಾಣೆ ತಿಪಟೂರಿನ ಪೊಕೀಸ್ ಠಾಣೆಗಳಲ್ಲಿ ಶಾರೂಖ್ ವಿರುದ್ಧ ದರೋಡೆ, ಹಾಫ್ ಮರ್ಡರ್, ಸುಲಿಗೆ ಮೊದಲಾದ ಕಾನೂನು ಬಾಹಿರ ಚಟುವಟಿಕೆಯ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಕುರಿತು ಪ್ರಕರಣ ದಾಖಲಾಗಿದ್ದವು.
ಈ ಎಲ್ಲಾ ಪ್ರಕರಣದಲ್ಲಯೂ ಜಾಮೀನಿನ ಮೇಲೆ ಶಾರೂಖ್ ಹೊರಗಡೆ ಇದ್ದನೆಂದು ಹಲವು ಮೂಲಗಳು ತಿಳಿಸಿವೆ.