Site icon TUNGATARANGA

ಬಿಸ್ಕೇಟ್ ಗಿರಾಕಿಗಳ ಕಾಮೆಂಟ್ ಗಳಿಗೆ ಆಯನೂರು ಮಂಜುನಾಥ್ ಗರಂ/ ನನ್ನ ಹೋರಾಟದ ಬದುಕಿನ ಸಾಧನೆ ನೋಡಿ ಕಾಮೆಂಟ್ ಮಾಡಿ ಎಂದದ್ದೇಕೆ ಗೊತ್ತಾ?

ನನ್ನ ಹೋರಾಟ ತಿಳಿಯದ ಬಿಸ್ಕೇಟ್ ಗಿರಾಕಿಗಳಿಂದ ತೇಜೋವಧೆ ಯತ್ನ : ಆಯನೂರು     #shimoga #bjp #ayanurumanjunath

ಶಿವಮೊಗ್ಗ,ಮಾ.22:
ನನಗೆ ಬಿಜೆಪಿ ಟಿಕೆಟ್ ಸಿಗುವುದು ಖಚಿತ. ಶಿವಮೊಗ್ಗ ನಗರ ಶಾಂತವಾಗಿ ಇರಬೇಕೆಂಬ, ನೆಮ್ಮದಿ ಕಾಪಾಡಬೇಕೆಂಬ ನನ್ನ ನನ್ನ ಕೋರಿಕೆಯ ಫ್ಲೆಕ್ಸಿಗೆ ಸಾಕಷ್ಟು ಜನ ಬೆಂಬಲಿಸಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿದ್ದಾರೆ. ಅವರಿಗೆಲ್ಲಾಗೆ ಧನ್ಯವಾದಗಳು. ಅದಕ್ಕೆ ಕೆಲವರು ಅತ್ಯಂತ ಅಸಹ್ಯವಾದ ಕಾಮೆಂಟ್ ಮಾಡಿದ್ದಾರೆ. ಅವರು ಬಿಸ್ಕೆಟ್ ನಾಯಿಗಳು ಎಂದು ವಿಧಾನಪರಿಷತ್ ಶಾಸಕ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಇಂದಿಲ್ಲಿ ಹೇಳಿದರು.


ಅವರಿಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕಡಿಮೆ ಅವಧಿಯಲ್ಲಿ ಲೋಕಸಭಾ ಸದಸ್ಯನಾಗಿ ಹಾಗೂ ಮೊಟ್ಟಮೊದಲ ಬಾರಿ ಹೊಸನಗರದಲ್ಲಿ ಬಿಜೆಪಿ ಬಾವುಟ ಬಾರಿಸಿ ಶಾಸಕನಾಗಿದ್ದ ಅವಧಿಯಲ್ಲಿ ಇದ್ದ ಕಡಿಮೆ ಅವಧಿಯಲ್ಲಿಯೇ ಅತ್ಯುತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿ ಪಡೆದಿದ್ದನ್ನು ಗಮನಿಸದ ಕೆಲವರು ಇಲ್ಲಿ ಮಾಡಿರುವ ಅಸಭ್ಯ ಹಾಗೂ ಅಶ್ಲೀಲ ಪದಗಳು ಟೀಕೆಗೆ ಯೋಗ್ಯವಾಗಿಲ್ಲ. ಕೆಲವರು ಹಾಸ್ಯ ನಾಟಕಕ್ಕೆ ಹೋಲಿಸುವ ಪ್ರಯತ್ನ ಮಾಡಿದ್ದಾರೆ. ಶಿವಮೊಗ್ಗ ನಗರದ ನೆಮ್ಮದಿ ಕಾಪಾಡುವಂತಹ ಉದ್ದೇಶ ಇವರಿಗೆ ಮನೋರಂಜನೆಯಂತೆ ಕಾಣುತ್ತದೆ ಎಂದರೆ ಇವರು ಎಂತಹ ವ್ಯಕ್ತಿಗಳಿರಬಹುದು. ಇಂತಹವರನ್ನು ಸಾಮಾಜಿಕ ವ್ಯವಸ್ಥೆಯಿಂದ ಹೊರಗೆಡಬೇಕಾಗಿದೆ ಎಂದು ಒತ್ತಾಯಿಸಿದರು.


ನಿತ್ಯ ಸುಮಂಗಲಿ ಎನ್ನುವ ಪದವನ್ನು ಕೆಲವರು ಬಳಸಿರುವುದು ಅವರ ಮೌಲ್ಯತೆಯನ್ನು ಎತ್ತಿ ತೋರಿಸುತ್ತದೆ. ತಮ್ಮ ನಾಯಕನ ಮನವೊಲಿಸಲು ಬೇಕಾಬಿಟ್ಟಿ ಮೆಸೇಜ್ ಮಾಡಿರುವುದು ಇಡೀ ವ್ಯವಸ್ಥೆಯ ದುರದೃಷ್ಟಕರ ಸಂಗತಿ. ನಾಯಿಗಳಂತೆ ಬಾಲ ಅಲ್ಲಾಡಿಸುವುದನ್ನು ಇವರು ಬಿಡಬೇಕು ಎಂದರು.
ನಾನು ಒಬ್ಬ ಆಟೋ ಡ್ರೈವರ್ ಆಗಿ ಶಿವಮೊಗ್ಗದಲ್ಲಿ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಸಮಾಜದ ಉದ್ದೇಶಕ್ಕಾಗಿ ಒಂದೂವರೆ ವರ್ಷಗಳ ಕಾಲ ಜೈಲಲ್ಲಿದ್ದಂತಹವನು. ಮೂರು ಸೆಂಟ್ರಲ್ ಜೈಲ್ ಗಳಲ್ಲಿ ನಾನು ಇದ್ದೆ. ಈ ಸಂದರ್ಭದಲ್ಲಿ ಇದ್ದ ಶಂಕರ್ ಮೂರ್ತಿ ಅವರು ಈಗ ರಾಜಕೀಯದಿಂದ ದೂರವಿದ್ದಾರೆ.ಈಗ ಉಳಿದಿರುವುದು ನಾನು ಮಾತ್ರ ಎಂದು ಹೇಳಿದರು.


ಅಂದಿನ ಜೈಲು ಅವಧಿಯ ಉದ್ದೇಶದಿಂದಾಗಿ ನನ್ನ ವಿದ್ಯಾರ್ಥಿ ಜೀವನವನ್ನು, ವಿದ್ಯಾಭ್ಯಾಸವನ್ನು ಕಳೆದುಕೊಂಡಿದ್ದೇನೆ. ಇವರಿಗೆ ನಾನು ಸುಮಂಗಲಿಯೆನಿಸಿದರೆ ಅದು ನನ್ನ ಅದೃಷ್ಟವೇ ಹೌದು ಎಂದರು.
ಇಷ್ಟೊಂದು ಕೆಳಮಟ್ಟದ ಕಾಮೆಂಟ್ ಗಳನ್ನು ಕೆಲವರು ನೀಡುವುದು ಸರಿಯೇ? ಪಕ್ಷ ನನಗೆ ಎಲ್ಲ ಅವಕಾಶಗಳ ನೀಡಿದೆ. ಅಂತೆಯೇ ಈಶ್ವರಪ್ಪ ಅವರು 32 ವರ್ಷಗಳಿಂದ ಶಿವಮೊಗ್ಗದಲ್ಲಿ ಶಾಸಕರಾಗಿ, ಸಚಿವರಾಗಿ, ನಿಗಮ ಮಂಡಳಿ ಅಧ್ಯಕ್ಷರಾಗಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಮಗನಿಗೆ ಟಿಕೆಟ್ ಕೇಳಿದಾಕ್ಷಣ ಅದು ನನಗೆ ಸಹಿಸಲಾಗಲಿಲ್ಲ. ಶಿವಮೊಗ್ಗ ಕಾರ್ಯಕ್ಷೇತ್ರದ ಕಾರ್ಮಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹೋರಾಟಗಳ ಮೂಲಕ ಬೆಳೆದಂತಹ ನಾನು ಸೇರಿದಂತೆ ನನ್ನ ಸಮಾನವಾಗಿ ಪಕ್ಷಕ್ಕಾಗಿ ದುಡಿದ ಇನ್ನೂ ಹಲವರಿದ್ದಾರೆ. ಅವರನ್ನು ಬಿಟ್ಟು ಅವರ ಮಗನಿಗೆ ಟಿಕೆಟ್ ಕೇಳುವುದು ಎಚ್ಚರ ಮಟ್ಟಿಗೆ ಸರಿ? ಹಾಗಾಗಿ ನಾನು ಎಲ್ಲ ನಾಯಕನನ್ನು ಈಗಾಗಲೇ ಭೇಟಿ ಮಾಡಿ ಟಿಕೆಟ್ ಗಾಗಿ ವಿನಂತಿಸಿದ್ದೇನೆ ಎಂದು ಹೇಳಿದರು.


ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ನಾನು ಬೇರೆಯವರ ತರ ಲಜ್ಜೆ, ನಾಚಿಕೆ, ಸಂಕೋಚವನ್ನು ಬಿಡದೆ ಎಲ್ಲಿಯೂ ಕಪ್ಪು ಚುಕ್ಕೆಯನ್ನು ಹೊಂದದಂತಹ ರಾಜಕಾರಣಿ ನಾನು. ನಮ್ಮದೇ ಸರ್ಕಾರ ಇದ್ದಾಗಲೂ ಬಡವರ ದೀನ ದಲಿತರ, ಶಿಕ್ಷಕರ ಕಾರ್ಮಿಕರ ವಿಶೇಷವಾಗಿ ಪೌರಕಾರ್ಮಿಕರ ಬದುಕಿನ ಪಗಾರ ಹೆಚ್ಚಿಸಲು ಕೊನೆಯ ತನಕ ಹೋರಾಟ ಮಾಡಿ ಗೆದ್ದಿದ್ದೇನೆ. ಹಿಂದೆ ಹೊಸನಗರ ಭಾಗದಲ್ಲಿ ವ್ಯಾಪಕವಾಗಿದ್ದ ಗುಂಡಾಗಿರಿಯನ್ನು ಮಟ್ಟಾ ಹಾಕಿದ್ದೇನೆ. ಶಿವಮೊಗ್ಗದ ಪ್ರಮುಖ ಹೈವೇಗಳು, ಶಿವಮೊಗ್ಗ ನಗರ ಆದುನೀಕರಣಕ್ಕೆ ಹಿಂದೆ ನಾನು ಲೋಕಸಭಾ ಸದಸ್ಯನಾಗಿದ್ದಾಗ ಮಂಜೂರಾತಿ ಪಡೆದಿರುವಂತಹ ಕಾರ್ಯಗಳು ಕಾರಣ. ಸಿಕ್ಕ ಕಡಿಮೆ ಅವಧಿಯಲ್ಲಿ ವಿಮಾನ ನಿಲ್ದಾಣದ ಈಗಿನ ಮನಸ್ಸು ಅಂದು ಕನಸಾಗಿದ್ದು ಸಚಿವ ಅನಂತ್ ಕುಮಾರ್ ಅವರ ತಂಡವನ್ನು ಕರೆಸಿದ್ದೆ ಎಂದರು.
ಕಾರ್ಮಿಕರ, ಮಾವುತರ, ಅತಿಥಿ ಶಿಕ್ಷಕರ ವೇತನವನ್ನು ಹೆಚ್ಚಿಸಲು ನ್ಯಾಯಯುತವಾಗಿ ಹೋರಾಟ ಮಾಡಿದ್ದೇನೆ. ನನ್ನ ಸರ್ಕಾರ ಇದ್ದಾಗ ಎಂಬುದು ನೆನಪಿರಲಿ. ಈ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದ ಕೆಲವರು ಅದರಲ್ಲೂ ಬಿಸ್ಕೆಟ್ ಗಾಗಿ ಬದುಕುವ ಕೆಲವರ ಅಶ್ಲೀಲ ಮಾತುಗಳಿಗೆ ಹೋರಾಟದ ಹಿನ್ನೆಲೆಯಲ್ಲಿ ಬಂದ ನಾನು ನನ್ನ ಕಾರ್ಯ ಕ್ಷೇತ್ರದಲ್ಲಿ ಶಾಂತಿ ತರಲು ಬಯಸಿದ್ದು ತಪ್ಪೇ?,


ಮೋದಿಯವರ ಕನಸಿನಂತೆ ಶಾಂತಿ ನೆಮ್ಮದಿ ಕಾಪಾಡುವುದು ಮುಖ್ಯವಲ್ಲವೇ? ಅದನ್ನು ವಿರೋಧಿಸುವವರು ಪಕ್ಷ ವಿರೋಧಿಗಳಲ್ಲವೇ? ಮೋದಿ ಅವರ ವಿರೋಧಿಗಳಲ್ಲವೇ? ಕೆಲವರ ಇಂತಹ ವರ್ತನೆಯನ್ನು ಆರ್ ಎಸ್ ಎಸ್ ನಾಯಕರು ಸಹ ಖಂಡಿಸಿದ್ದಾರೆ. ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂಬ ಎಲ್ಲಾ ನಂಬಿಕೆ ಇದೆ. ಹಾಗಾಗಿ ಶಿವಮೊಗ್ಗದ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಸತ್ಯ.
ನಾನೊಬ್ಬ ಒಳ್ಳೆಯ ಹಿಂದೂ, ಎಂದರೆ ಹಿಂದೂ ಧರ್ಮವನ್ನು ನ್ಯಾಯಯುತವಾಗಿ ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ. ಮುಸ್ಲಿಮರು ಅವರ ಧರ್ಮವನ್ನು ನ್ಯಾಯಯುತವಾಗಿ ಬಳಸಿಕೊಳ್ಳಬೇಕು. ಆಜಾನ್ ಪದವನ್ನು ಎಲ್ಲಿ ಬೇಕೆಂದರಲ್ಲಿ ಕೂಗಬಾರದು. ಎಲ್ಲಾ ಹಿಂದೂಗಳು ಕೆಟ್ಟವರಲ್ಲ ಎಲ್ಲಾ ಮುಸ್ಲಿಂರೂ ಕೆಟ್ಟವರಲ್ಲ. ನಾನು ಒಳ್ಳೆಯ ಹಿಂದೂ ಎಂದರು.

Exit mobile version