Site icon TUNGATARANGA

ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ಯುವನಿಧಿ ಅಡಿಯಲ್ಲಿ ನಿರುದ್ಯೋಗ ಭತ್ಯೆ / ಎನ್.ಎಸ್.ಯು.ಐ. ಕಾರ್ಯಕರ್ತರು ಸಂಭ್ರಮ

ಕಾಂಗ್ರೆಸ್‌ನ ೪ನೇ ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ಯುವನಿಧಿ ಅಡಿಯಲ್ಲಿ ಯುವಕರಿಗಾಗಿ ರಾಹುಲ್ ಗಾಂಧಿಯವರು ನಿರುದ್ಯೋಗ ಭತ್ಯೆ ಘೋಷಿಸಿರುವುದಕ್ಕೆ ಎನ್.ಎಸ್.ಯು.ಐ. ಕಾರ್ಯಕ ರ್ತರು ಇಲ್ಲಿನ ಭಗವಾನ್ ಮಹಾವೀರ ವೃತ್ತದಲ್ಲಿ ಇಂದು ಸಂಜೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.


ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಎಸ್.ಪಿ. ದಿನೇಶ್ ಮಾತನಾಡಿ, ಬಿಜೆಪಿಯ ಭ್ರಷ್ಟ ಆಡಳಿತದಿಂದಾಗಿ ಇಂದು ದೇಶಾದ್ಯಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಬಿಜೆಪಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸುತ್ತಿದೆ. ಕಾಂಗ್ರೆಸ್ ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತದೆ. ಯುವಜನತೆ ಬಿಜೆಪಿಯ ದುರಾಡಳಿತವನ್ನು ಖಂಡಿಸಬೇಕೆಂದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ವಿಧಾನಸಭೆ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿದರು.


ಸಂಭ್ರಮಾಚರಣೆಯ ನೇತೃತ್ವವನ್ನು ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ವಿಜಯ್ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಕಲೀಂ ಪಾಶಾ, ವಿಜಯಕುಮಾರ್ (ದನಿ), ಜಿ. ಪಲ್ಲವಿ, ವಿಶ್ವನಾಥ್ ಕಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ

ದೀಪಕ್ ಸಿಂಗ್, ಕಲೀಮ್ ಪಾಷಾ, ಎನ್.ಎಸ್. ಯು.ಐ. ಜಿಲ್ಲಾಧ್ಯಕ್ಷ ವಿಜಯ್, ಹರ್ಷಿತ್, ಕಾಟಿಕೆರೆ ರವಿ, ಅಬ್ದುಲ್, ವರುಣ್ ವಿ ಪಂಡಿತ್, ಕುಮಾರ್, ಟೋಫಿಕ್, ಅಭಿ, ಚಂದ್ರ ಜಿ ರಾವ್, ಚರಣ್, ಏ.ಚೇತನ್, ಸಿ.ಜಿ. ಮಧುಸೂದನ್ ಇದ್ದರು.

Exit mobile version