Site icon TUNGATARANGA

ಡಿಸಿ ಕಚೇರಿ ಮುಂದೆ ಆಜಾನ್ ಕೂಗಿದವರ ವಿರುದ್ದ ಕ್ರಮಕ್ಕೆಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹ

ಶಿವಮೊಗ್ಗ: ಡಿಸಿ ಕಚೇರಿಯ ಮುಂದೆ ಆಜಾನ್ ಕೂಗಿ ಸೊಕ್ಕಿನಿಂದ ಮೆರೆದಿರುವ ಸಮುದಾಯದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿ ಕಚೇರಿ ಮುಂದೆ ಆಜಾನ್ ಕೂಗಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅಷ್ಟಲ್ಲದೇ ವಿಧಾನಸೌಧದಲ್ಲೂ ಆಜಾನ್ ಕೂಗುತ್ತೇವೆ ಎಂದಿದ್ದಾರೆ. ಇದನ್ನು ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸೌಂಡ್ ಎಷ್ಟು ಇಟ್ಟುಕೊಳ್ಳಬೇಕು ಎಂದು ಹೇಳಿದೆ. ಮಂಗಳೂರಿನಲ್ಲಿ ನಾನು ಭಾಷಣ ಮಾಡುವ ಸಮಯದಲ್ಲಿ ಆಜಾನ್ ಕೂಗಲಾಯಿತು. ಅಲ್ಲಿನವರಿಗೆ ಸ್ಪಷ್ಟವಾಗಿ ಸುಪ್ರೀಂ ತೀರ್ಪಿನ್ನು ಪಾಲಿಸಬೇಕೆಂದು ಹೇಳಿದ್ದೇನೆ. ಅಂಜುಮಾನ್, ಎಸ್.ಡಿ.ಪಿ.ಐ. ಮತ್ತು ಪಿಎಫ್ಐ ಮೂರು ಸಂಸ್ಥೆಗಳ ಕೆಲ ಸದಸ್ಯರು ಒಂದೇ ಆಗಿದ್ದು, ಡಿಸಿ ಕಚೇರಿಯ ಮುಂದೆ ಆಜಾನ್ ಕೂಗಿದ್ದರ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದ ಅವರು, ಎಸ್.ಡಿ.ಪಿ.ಐ. ವಿರುದ್ಧ ಕ್ರಮಕೈಗೊಳ್ಳಬೇಕು. ಆಜಾನ್ ಕೂಗಿದ ಯುವಕ ಈ ಹಿಂದೆ ಪಿಎಸ್ಐ ನಲ್ಲಿದ್ದ ನಂತರ ಎಸ್.ಡಿ.ಪಿ.ಐ. ಸಂಘಟನೆಗೆ ಬಂದಿದ್ದಾನೆ ಎಂದರು..

ಮಾ.17 ರಂದು ಅಂಜುಮಾನ್ ಸಂಸ್ಥೆ ನಡೆಸಿದ ಪ್ರತಿಭಟನೆ ವೇಳೆ ಆಜಾನ್ ಕೂಗಿದ ಯುವಕನ ವಿರುದ್ಧ ಸೆಕ್ಷನ್ 107 ಹಾಕಿ ಬಿಡುಗಡೆ ಮಾಡಲಾಗಿದೆ. ಸ್ಟೇಷನ್ ಬೇಲ್ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ. ಡಿಸಿ ಕಚೇರಿಯ ಮುಂದೆ ಕೋಮು ಸೌಹಾರ್ದತೆ ಹಾಳು ಮಾಡಿದ್ದಾನೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಜಾನ್ ವಿಚಾರದಲ್ಲಿ ಪೊಲೀಸ್ ಬಿಗಿ ಕ್ರಮ ಕೈಗೊಳ್ಳಬೇಕಿತ್ತು ಎಂದರು.

ಅಲ್ಲಾಹುವಿಗೆ ನಾನು ಅಪಮಾನ ಮಾಡಿಲ್ಲ. ಅವರೇ ಅಪಮಾನ ಮಾಡಿದ್ದಾರೆ. ನಾಲ್ಕು ಮೈಕ್ ನಲ್ಲಿ ಕೂಗಿ ದೇವರನ್ನ ತೃಪ್ತಿಪಡಿಸುತ್ತೀರಾ? ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆಜಾನ್ ಕೂಗಬೇಕು ಎಂಬುದು ನನ್ನ ಹೇಳಿಕೆಯಾಗಿದೆ. ಆಜಾನ್ ಕೂಗಲು ಕಾನೂನು ಇದೆ. ಅದೇ ರೀತಿ ಕೂಗಬೇಕು ಎಂಬುದು ನನ್ನ ನಿಲುವು ಎಂದು ಹೇಳಿದರು.

ನಾನು ಹಿಂದುತ್ವವಾದಿ,  ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ನ್ಯಾಯಾಲಯದ ಆದೇಶ ಮೀರಿ ಆಜಾನ್ ಕೂಗಿರುವ ಬಗ್ಗೆ ಕುಮಾರ ಸ್ವಾಮಿ ನಿಲುವೇನು? ನನ್ನ ತಪ್ಪು ಏನಿದೆ ಹೇಳಲಿ? ವಿಧಾನ ಸೌಧದಲ್ಲಿ ಆಚಾನ್ ಕೂಗುತ್ತೇವೆ ಎಂದರೆ ಸುಪ್ರೀಂ ತೀರ್ಪಿನ ವಿರುದ್ಧ ಅಲ್ಲವೇ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಎನ್. ಚನ್ನಬಸಪ್ಪ, ಸಂತೋಷ್ ಬಳ್ಳೆಕೆರೆ, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.

Exit mobile version