ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಮೆಟ್ಟಿಲ ಮೇಲೆ ಮೊನ್ನೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆಜಾನ್ ಕೂಗಿದ್ದ ಸ್ಥಳವನ್ನು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಇಂದು ಗೋ ಮೂತ್ರ ಸಿಂಪಡಿಸಿ ಶುದ್ಧೀಕರಣ ಮಾಡಿದರು.
ಪೊಲೀಸರ ಪ್ರತಿರೋಧದ ನಡುವೆಯು ಗೋ ಮೂತ್ರ ಸಿಂಪಡನೆ ಮಾಡಲಾಯಿತು. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಮೂತ್ರ ಸಿಂಪಡಣೆ ಮಾಡಲು ಮುಂದಾದರು.
ಹಿಂದೂ ಕಾರ್ಯಕರ್ತರು ಬಾಟಲಿಯಲ್ಲಿ ಗೋ ಮೂತ್ರ ತಂದಿದ್ದರು. ಆಜಾನ್ ಕೂಗಿದ್ದ ಸ್ಥಳದಲ್ಲಿ ಗೋ ಮೂತ್ರ ಸಿಂಪಡಣೆ ಮಾಡಿದರು.
ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗೋ ಮೂತ್ರ ಸಿಂಪಡಣೆ ಮಾಡದಂತೆ ತಡೆಯಲು ಮುಂದಾದರು. ಆದರೂ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ, ಘೋಷಣೆ ಕೂಗಿದರು.
ಪ್ರತಿಭಟನೆ ಸಂದರ್ಭ ಮತಾಂಧತೆ ಮೆರೆಯಲಾಗಿದೆ. ಸಂವಿಧಾನದ ಪ್ರಕಾರ ಜಿಲ್ಲಾಧಿಕಾರಿ ಕಚೇರಿ ಪವಿತ್ರ ಕ್ಷೇತ್ರ. ಇಲ್ಲಿ ಪ್ರತಿಭಟಿಸಲು ಎಲ್ಲರಿಗು ಹಕ್ಕಿದೆ. ಆದರೆ ಆಜಾನ್ ಕೂಗಿ ಮತಾಂಧತೆ ಮರೆದಿದ್ದು ಸರಿಯಲ್ಲ. ಇದು ಆಜಾನ್ ಕೂಗುವ ಸ್ಥಳವಲ್ಲ. ಹಾಗಾಗಿ ಆಜಾನ್ ಕೂಗಿದ್ದ ಸ್ಥಳವನ್ನು ಪವಿತ್ರಗೊಳಿಸಿದ್ದೇವೆ. ಈಗ ಈ ಸ್ಥಳ ಶುದ್ಧವಾಗಿದೆ ಎಂದರು.
ಬಜರಂಗದಳ ವಿಭಾಗ ಸಂಯೋಜಕ ರಾಜೇಶ್ ಗೌಡ, ರಮೇಶ್ ಬಾಬು ಜಾದವ್, ದಿನದಯಾಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ReplyForward |