Site icon TUNGATARANGA

ಡಾ: ಕಸ್ತೂರಿ ರಂಗನ್ ವರದಿಯ ಬಗ್ಗೆ ಸುಳ್ಳು ಮಾಹಿತಿ ಅರಗ ಜ್ಞಾನೇಂದ್ರ ವಿರುದ್ದ ಕೆಪಿಸಿಸಿ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಆರೋಪ

ಶಿವಮೊಗ್ಗ :  ಡಾ: ಕಸ್ತೂರಿ ರಂಗನ್ ವರದಿ ಜಾರಿಯಾಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸುಳ್ಳು ಹೇಳಿಕೆ ನೀಡಿ ಮಲೆನಾಡಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ನಗರ ಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ  ಹೇಳಿದರು.


ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಸಭೆಯಲ್ಲಿ ತಾವು ಮಂಡಿಸಿದ  ವಾದದಿಂದಾಗಿ ಕಸ್ತೂರಿ ರಂಗನ್ ವರದಿ ತಡೆ ಹಿಡಿಯಲಾಗಿದೆ ಎಂದು ರೈತರ ಸಭೆಯಲ್ಲಿ ಆರಗ ಜ್ಞಾನೇಂದ್ರ ಅವರು ಜ್ಞಾನ ಇಲ್ಲದವರಂತೆ ಹೇಳಿಕೆ ನೀಡಿದ್ದಾರೆ.  ಚುನಾವಣಾ ಸಂದರ್ರ್ದಭಲ್ಲಿ ಮಾತ್ರ ಕಸ್ತೂರಿ ರಂಗನ್ ವರದಿ ಹಾಗೂ ಅಡಿಕೆ ಬಗ್ಗೆ ಇವರಿಗೆ ಎಚ್ಚರವಾಗುತ್ತದೆ ಎಂದು ಹರಿಹಾಯ್ದರು.


ಜಿಲ್ಲೆಯ 475 ಹಳ್ಳಿಗಳಲ್ಲಿ ಕಸ್ತೂರಿ ವರದಿ ಜಾರಿಯಾಗಲಿದೆ. ಆದರೂ ಆರಗ ತಮ್ಮ ವಾದದಿಂದಾಗಿ ಈ ವರದಿ ತಡೆ ಹಿಡಿಯಲಾಗಿದೆ ಎಂದು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ  ಸೋಲಿನ ಭೀತಿಯಿಂದ ಕ್ಷೇತ್ರದ ಜನರ ಅನುಕಂಪ ಪಡೆಯುವ ಸಲುವಾಗಿ ಈ ರೀತಿ ಹೇಳುತ್ತಿದ್ದಾರೆ. 1472 ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮ  ಪ್ರದೇಶ ಘೋಷಣೆಯಾಗಲಿದೆ. ಇದು ಅರಣ್ಯ ಭಾಗದಲ್ಲಿ ವಾಸ ಇರುವವರಿಗೆ ಕಂಟಕವಾಗಲಿದೆ ಎಂದರು.
ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಾಗಿ ನರೇಂದ್ರ ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಹಾಕಿದೆ.

ಇದು ಗೊತ್ತಿಲ್ಲದವರಂತೆ ಜ್ಞಾನೇಂದ್ರ ಹೇಳಿಕೆ ನೀಡುತ್ತಿದ್ದಾರೆ. ನಾಲ್ಕು ಬಾರಿ ಕರಡು ಅಸೂಚನೆಯನ್ನು ಹೊರಡಿಸಿದ್ದು ಕೇಂದ್ರ ಬಿಜೆಪಿ ಸರ್ಕಾರ. ಇದಕ್ಕೆಲ್ಲಾ ಅಂದು ಸಂಸತ್ ಸದಸ್ಯರಾಗಿದ್ದ ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಪಾಲು ಕೂಡ ಇದೆ. ಇವರು ಪ್ರಬಲವಾಗಿ ಸಂಸತ್ತಿನಲ್ಲಿ ವಿರೋ‘ ಮಾಡಿಲ್ಲ. ಅವರ ನಿರ್ಲಕ್ಷ್ಯದಿಂದಾಗಿ ಈ ವರದಿ ಜಾರಿಯಾಗುತ್ತಿದೆ ಎಂದರು.


ಡಬಲ್ ಇಂಜಿನ್ ಸರ್ಕಾರ ಮಲೆನಾಡಿನ ನಿವಾಸಿಗಳಿಗೆ ಮೋಸ ಮಾಡಲು ಹೊರಟಿದೆ. ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದರೂ ಕಾನೂನು ಜ್ಞಾನ ಇಲ್ಲದವರಂತೆ ಮಾತನಾಡುತ್ತಿದ್ದಾರೆ. ಈ ವರದಿ ಜಾರಿಯಾಗುವುದಿಲ್ಲ ಎಂಬುದನ್ನು ಮೋದಿಯವರಿಂದಲೇ ಹೇಳಿಕೆ ಕೊಡಿಸಲಿ. ಗೋವಾ ೌಂಡೆಶನ್ ಪ್ರಕರಣದಲ್ಲಿ ಇನ್ನು ಜಾರಿ ಮಾಡುವುದಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿ‘ಾಗದ ಅಧ್ಯಕ್ಷ ರಮೇಶ್ ಇಕ್ಕೇರಿ, ಧರ್ಮರಾಜ್, ಜಿ.ಡಿ. ಮಂಜುನಾಥ, ದೀಪಕ್ ಸಿಂಗ್ ಇದ್ದರು.

Exit mobile version