2023ನೇ ಸಾಲಿನ ಬೃಹತ್ ಬೇಸಿಗೆ ಶಿಬಿರ “ರಜಾ ವಿತ್ ಮಜಾ” ಎಂಬ ಶೀರ್ಷಿಕೆಯಡಿ ಮತ್ತು “ಟಿವಿ ಮೊಬೈಲ್ ಬಿಡಿ ಬೇಸಿಗೆ ಶಿಬರಕ್ ನಡಿ” ಎಂಬ ಟ್ಯಾಗ್ ಲೈನೊಂದಿಗೆ ಈ ಬಾರಿ ವಿಶೇಷವಾಗಿ ಈ ಶಿಬಿರ ನಡೆಯುತ್ತಿದೆ.
ಹಾಗಾದರೆ ಬನ್ನಿ ಈ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ
ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ 15ನೇ ವರ್ಷದ ಯಶಸ್ವಿ ವಾರ್ಷಿಕೋತ್ಸವ ಮತ್ತು ಬೃಹತ್ ಬೇಸಿಗೆ ಶಿಬಿರ ಈ ಬಾರಿ ಅಧ್ದೂರಿಯಾಗಿ ಶಿವಮೊಗ್ಗದ ಲಕ್ಷ್ಮೀ ಗೆಲಾಕ್ಸಿ ಗೋಪಿಸರ್ಕಲ್ ಬಳಿ ಇರುವ ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥೆಯಲ್ಲಿ ಇದೇ ಏಪ್ರಿಲ್ 2 ರಿಂದ ಮೇ 19ರವರೆಗೂ ನಡೆಯುತ್ತಿದೆ. ಮೇ 20 ಈ ಶಿಬಿರದ ಮುಕ್ತಾಯ ಸಮಾರಂಭವೂ ಸಹ ನಡೆಯಲಿದೆ. ನಿಮಗೆ ಅನುಕೂಲಕರವಾದ ಸಮಯ,ಪ್ರತ್ಯೇಕ ಮನರಂಜನಾ ತರಗತಿಗಳು ,ತಣ್ಣನೆಯ ವಾತಾವರಣ ಎಲ್ಲವನ್ನು ಈ ಶಿಬಿರ ಒಳಗೊಂಡಿದೆ.
ಈ ಶಿಬಿರದಲ್ಲಿ ಏನೇನಿದೆ ?
ಈ ವರ್ಷ ವಿವಿಧ ಬಗೆಯ ನೃತ್ಯಗಳು,ಸಂಗೀತ ಅಭ್ಯಾಸ ,ದೇಸಿ ಆಟಗಳು,ನಮ್ಮ ಆಚಾರ ವಿಚಾರ ಸಂಪ್ರದಾಯ, ಸಿನಿಮಾ ಮತ್ತು ಧಾರಾವಾಹಿಗಳ ಆಡಿಷನ್ ಮಾಹಿತಿಗಳು, ಸ್ಟೇಜ್ ಫಿಯರ್ ಹೋಗಿಸುವ ಕಲೆಗಳು, ಡ್ರಾಮ ತರಬೇತಿ, ಟೆಂಟ್ ಸಿನಿಮಾ, ಚಿತ್ರಕಲೆ, ನಿರೂಪಣೆ, ಅಜ್ಜಿಕಥೆಗಳು, ಜಿಮ್ನಾಸ್ಟಿಕ್ ,ಫ್ಯಾಷನ್ ಷೋ, ಇನ್ನೂ ಹಲವಾರು ತರಬೇತಿಗಳು ಈ ಶಿಬಿರದಲ್ಲಿದೆ ನಿಮಗಾಗಿ ಕಾಯುತ್ತಿವೆ.
ಇದನ್ನೂಓದಿ…ಶಿವಮೊಗ್ಗ/ ಸ್ಪಾ ಹೆಸರಿನಲ್ಲಿ ಕೆಲವೆಡೆ SEX ದಂಧೆ…, ಏನಿದು ಒಳದಂದೆಯ ಮುಕ್ತ ಗುಪ್ತ ವ್ಯವಹಾರ https://tungataranga.com/?p=18918 ತುಂಗಾತರಂಗ ದಿನಪತ್ರಿಕೆ ಸ್ಪೆಷಲ್ ಸುದ್ದಿಯನ್ನು ಸಂಪೂರ್ಣ ಓದಲು ಮೇಲಿನ ಲಿಂಕ್ ಬಳಸಿ…👆
ಮಕ್ಕಳನ್ನು ಪೋಷಣೆ ಮಾಡುವ ವಿಶೇಷ ಸೌಲಭ್ಯ : ಪೋಷಕರು ಮಕ್ಕಳನ್ನು ಶಿಬಿರಕ್ಕೆ ಬಿಟ್ಟಾದ ಮೇಲೆ ಇತರೇ ಕೆಲಸದಲ್ಲಿ ಅಥವಾ ಸರ್ಕಾರಿ ಕೆಲಸದಲ್ಲಿ ಇದ್ದರೆ ನೀವೂ ಬ್ಯುಸಿಯಾಗಿರುತ್ತೀರಿ ? ಈ ಸಂದರ್ಭದಲ್ಲಿ ಪೋಷಕರಿಗೆ ಸಹಾಯವಾಗಲೆಂದು ಶಿಬಿರದಲ್ಲಿ ಭಾಗವಹಿಸುವ ನಿಮ್ಮ ಮಕ್ಕಳನ್ನು ನಿಮ್ಮ ಒಪ್ಪಿಗೆ ಮೇರೆಗೆ ಶಿಬಿರದ ನಂತರ ಅವರನ್ನು ಸಂಜೆ ವರೆಗೆ ನಾವೇ ಕುದ್ದಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಳ್ಳುತ್ತದೆ.( ನಿಯಮಗಳ ಅನ್ವಯ )
ಬೃಹತ್ ವೇದಿಕೆ ಅವಕಾಶ ಮತ್ತು ಪ್ರಶಸ್ತಿ ಪ್ರಧಾನ : ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಆಕರ್ಷಕ ಬಹುಮಾನವಾಗಿ ಡಾನ್ಸಿಂಗ್ ಸ್ಟಾರ್ ಅವಾರ್ಡ್ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು ಮತ್ತು ಬೃಹತ್ ವೇದಿಕೆಯಲ್ಲಿ ನೃತ್ಯಪ್ರದರ್ಶನಕ್ಕೆ ಅವಕಾಶ ಕೊಡಲಾಗುವುದು.
ಬೇಸಿಗೆ ಶಿಬಿರಕ್ಕೆ ಯಾರೆಲ್ಲಾ ಬರಬಹುದು : ಈ ಶಿಬಿರಕ್ಕೆ ವಯಸ್ಸಿನ ಮಿತಿ ಇಲ್ಲ ಹಾಗೆ ಈ ಶಿಬಿರಲ್ಲಿ 2ವರ್ಷದ ಪುಟಾಣಿ ಮಕ್ಕಳಿಂದ ಪ್ರಾರಂಭವಾಗಿ ,ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ವಿಶೇಷ ಸಮಯಗಳ ಬ್ಯಾಚ್ ಸೌಲಭ್ಯ ಲಭ್ಯವಿದೆ
ಪ್ರತಿದಿನ ಶಿಬಿರದ ವೇಳಾಪಟ್ಟಿ :
ಬೆಳಗಿನ ಬ್ಯಾಚ್ : ಬೆಳಿಗ್ಗೆ 10 ರಿಂದ ಮದ್ಯಾಹ್ನ 1ರವರೆಗೆ
ಮದ್ಯಾಹ್ನ ಬ್ಯಾಚ್ : ಮದ್ಯಾಹ್ನ 2.30 ರಿಂದ ಸಂಜೆ 5.15ರವರೆಗೆ
ಸಂಜೆ ಬ್ಯಾಚ್ : ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರದಲ್ಲಿ 3ದಿನಗಳು ವಿಶೇಷ ತರಬೇತಿ ನಡೆಯಲಿದೆ ಸೋಮವಾರ ,ಮಂಗಳವಾರ, ಬುಧವಾರ ಸಂಜೆ 5.45 ರಿಂದ 8ರವರೆಗೆ ನಡೆಯಲಿದೆ.
ಮಹಿಳೆಯರಿಗಾಗಿ ವಾರದಲ್ಲಿ 3ದಿನಗಳು ವಿಶೇಷ ತರಬೇತಿ ನಡೆಯಲಿದೆ.
ಶುಕ್ರವಾರ ಸಂಜೆ 6 ರಿಂದ 7 , ಶನಿವಾರ ಸಂಜೆ 4ರಿಂದ 6 , ಭಾನುವಾರ ಬೆಳಿಗ್ಗೆ 11ರಿಂದ 1ರವರೆಗೆ ನಡೆಯಲಿದೆ.
ಈ ಬೇಸಿಗೆ ಶಿಬಿರದಲ್ಲಿ ಸೀಮಿತ ಸೀಟುಗಳು ಮಾತ್ರ ಅವಕಾಶ ಇರುವುದರಿಂದ ಪೋಷಕರು ಈ ಕೂಡಲೇ ನಮ್ಮ ನೃತ್ಯ ಕಛೇರಿಗೆ ಕರೆ ಮಾಡಿ ,ನಿಮ್ಮ ಮಗುವಿನ ಹೆಸರು,ನಿಮಗೆ ಬೇಕಾದ ಬ್ಯಾಚ್ ಗಳನ್ನು ಆಯ್ಕೇ ಮಾಡಿ ,ನಿಮ್ಮ ಸೀಟನ್ನು ಕಾಯ್ದಿರಿಸಿಕೊಳ್ಳಲು ಮನವಿ…..!
ಶಿಬಿರದ ಸ್ಥಳ : ಸ್ಟೈಲ್ ಡಾನ್ಸ್ ಕ್ರಿವ್ ಸ್ಟುಡಿಯೋ, ಶ್ರೀ ಲಕ್ಷ್ಮಿ ಗೆಲಾಕ್ಸಿ, 3ನೇ ಮಹಡಿ, ಗೋಪಿ ಸರ್ಕಲ್ ಹತ್ತಿರ,ಮಲ್ಲಿಕಾರ್ಜುನ ಟಾಕೀಸ್ ಪಕ್ಕ, ಶಿವಮೊಗ್ಗ.
ನೃತ್ಯ ಸಂಸ್ಥೆ ಮತ್ತು ಶಿಬಿರದ ಬಗ್ಗೆ ವಿಡಿಯೋ ಮೂಲಕ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು : “ಸ್ಟೈಲ್ ಡಾನ್ಸ್ ಕ್ರಿವ್ ಕರ್ನಾಟಕ” ಎಂದು ಗೂಗಲ್ ಅಥವಾ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ವಿಡೀಯೋ ಮುಖಾಂತರ ಈ ನೃತ್ಯ ಸಂಸ್ಥೆಯ ಬಗ್ಗೆ ನೋಡಬಹುದು,ತಿಳಿಯಬಹುದು
ಬೇಸಿಗೆ ಶಿಬಿರಕ್ಕೆ ಈ ಕೂಡಲೇ ಕರೆ ಮಾಡಿ ಹೆಸರು ನೊಂದಾಯಿಸಿ : 9845388028