Site icon TUNGATARANGA

ಪಿಂಚಣಿಗೆ ಸಂಬಂಧಿಸಿದ ಅರ್ಜಿ ಅವಧಿ ವಿಸ್ತರಣೆ

ಇಪಿಎಫ್‍ಒ ಹೆಚ್ಚಿನ ವೇತನದ ಮೇಲೆ ಪಿಂಚಣಿಗೆ ಸಂಬಂಧಿಸಿದ ಅರ್ಜಿ ಅವಧಿಯನ್ನು ಮೇ 03 ರವರೆಗೆ ವಿಸ್ತರಿಸಲಾಗಿದೆ.
     2014 ರ ಸೆಪ್ಟೆಂಬರ್ 01 ರ ಮೊದಲು ನಿವೃತ್ತರಾದ ಮತ್ತು ನಿವೃತ್ತಿಯ ಮೊದಲು ಪ್ಯಾರಾಗ್ರಾಫ್ 11(3) ಅಡಿಯಲ್ಲಿ ಆಯ್ಕೆಯನ್ನು ಚಲಾಯಿಸಿದ ನೌಕರರು ಹೆಚ್ಚಿನ ವೇತನದ ಮೇಲೆ ಪಿಂಚಣಿಗೆ ಅರ್ಹರಾಗಿರುತ್ತಾರೆ

ಎಂದು ಸುಪ್ರೀಂ ಕೋರ್ಟ್ ಹೇಳಿರುವನ್ವಯ ದಿನಾಂಕ: 29-12-2022 ಮತ್ತು 05-01-2023 ರ ಸುತ್ತೋಲೆ ಮೂಲಕ ಸೂಚನೆಗಳನ್ನು ನೀಡಲಾಗಿದೆ.


     ದಿನಾಂಕ:01-09-2014 ರ ಮೊದಲು ನಿವೃತ್ತರಾದ ಮತ್ತು ಅವರ ನಿವೃತ್ತಿಯ ಮೊದಲು ಜಂಟಿ ಆಯ್ಕೆಗಳನ್ನು ಚಲಾಯಿಸಿದ ಉದ್ಯೋಗಿಗಳಿಗೆ ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಆನ್‍ಲೈನ್ ಸೌಲಭ್ಯವನ್ನು ಇಪಿಎಫ್‍ಓ ವೆಬ್‍ಸೈಟ್‍ನಲ್ಲಿ ದಿನಾಂಕ: 03-03-2023 ರವರೆಗೆ ಒದಗಿಸಲಾಗಿದೆ.


    ಈಗ ಉದ್ಯೋಗಿಗಳ/ಉದ್ಯೋಗದಾತರ ಸಂಘಗಳ ಬೇಡಿಕೆಯ ಮೇರೆಗೆ ಗೌರವಾನ್ವಿತ ಅಧ್ಯಕ್ಷರು, ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಅಂತಹ ಉದ್ಯೋಗಿಗಳಿಂದ ಜಂಟಿ ಆಯ್ಕೆಗಳನ್ನು ಊರ್ಜಿತಗೊಳಿಸುವುದಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಸಮಯವನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Exit mobile version