ಆರ್‌ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆರ್‌ಟಿಒ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಆರ್‌ಟಿಓ ಕಚೇರಿಯಲ್ಲಿ ಬಹಿರಂಗ ಬ್ರಷ್ಟಾಚಾರ- ವೀಡಿಯೋ ನೋಡಿ
ಎಸ್‌ಡಿಸಿ ಹುದ್ದೆಯಲ್ಲಿರುವ ಸವಿತಾ ಎಂಬುವರು ಕಚೇರಿಗೆ ಬರುವ ಜನರಿಂದ ಬಹಿರಂಗವಾಗಿಯೇ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಧೋರಣೆಯಿಂದ ಜನತೆ ಬೇಸತ್ತು ಹೋಗಿದ್ದಾರೆ. ಅಲ್ಲದೆ ಈ ಹಿಂದೆ ಇಂತಹುದೇ ಭ್ರಷ್ಟಾಚಾರ ಆರೋಪದಡಿ ಇವರನ್ನು ಅಮಾನತು ಮಾಡಲಾಗಿತ್ತು. ಬೇರೆಡೆಗೆ ವರ್ಗಾವಣೆಗೊಂಡಿದ್ದ ಇವರು, ಪುನಃ ಶಿವಮೊಗ್ಗ ಆರ್‌ಟಿಒ ಕಚೇರಿಗೆ ಬಂದಿದ್ದಾರೆ.
ಪ್ರಸ್ತುತ ಕಚೇರಿಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಜವಾಬ್ದಾರಿ ಹೊತ್ತಿರುವ ಇವರು ಬಹಿರಂಗವಾಗಿಯೇ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಕಾರ್ಯಕರ್ತರು ದೂರಿದರು.
ಇಂತಹ ಭ್ರಷ್ಟ ಅಧಿಕಾರಿಯನ್ನು ಕೇವಲ ಅಮಾನತು ಮಾಡುವುದಲ್ಲದೆ ಕೆಲಸದಿಂದಲೇ ವಜಾಗೊಳಿಸಬೇಕು. ಅಲ್ಲದೆ ಇವರೇ ಹೇಳಿರುವಂತೆ ಲಂಚದ ಪಾಲು ಮೇಲಧಿಕಾರಿಗಳಿಗೂ ಕೊಡಬೇಕು ಎಂದುಹೇಳಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಕೂಡಲೇ ಇವರನ್ನು ಅಮಾನತು ಮಾಡಬೇಕು ಇಲ್ಲದಿದ್ದಲ್ಲಿ ಆರ್‌ಟಿಒ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಆಪ್ ಜಿಲ್ಲಾಧ್ಯಕ್ಷ ಕಿರಣ್ ಕೆ. ನೇತ್ರಾವತಿ ಗೌಡ, ನಜೀರ್ ಅಹ್ಮದ್, ಸುರೇಶ್ ಕೋಟೇಕಾರ್, ಶ್ರೀನಿವಾಸ್, ಮನೋಹರ ಗೌಡ, ಏಳುಮಲೈ, ಮಾಲತೇಶ್ ಮೊದಲಾದವರಿದ್ದರು.