ಶಿವಮೊಗ್ಗ,ಮಾ.17:
ರಾಜ್ಯದಲ್ಲಿ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರವನ್ನು ಶಿವಮೊಗ್ಗ ಜಿಪಂ ಮತ್ತು ಅತ್ಯುತ್ತಮ ತಾಲೂಕು ಪಂಚಾಯತ್ ಪುರಸ್ಕಾರವನ್ನ ಭದ್ರಾವತಿ ತಾಲೂಕ್ ಪಂಚಾಯಿತಿ ತನ್ನದಾಗಿಸಿಕೊಂಡಿದೆ.
ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾವನದಿನಗಳ ಸೃಜನೆ, ಕಾಮಗಾರಿ ಮುಕ್ತಾಯ, ಜಿಯೋಟ್ಯಾಗ್, ಮಹಿಳೆಯರ ಭಾಗವಹಿಸುವಿಕೆ, ಸಾಮಾಜಿಕ ಲೆಕ್ಕಾ ತಪಾಸಣೆ, ಕಡತ ನಿರ್ವಹಣೆ ಮತ್ತು ಇತರೆ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯತ್ತಮ ತಾಲ್ಲೂಕು ಪಂಚಾಯತಿ ಪುರಸ್ಕಾರದಲ್ಲಿ ತೃತಿಯ ಪುರಸ್ಕಾರ ಭದ್ರಾವತಿ ತಾಲ್ಲೂಕಿಗೆ ಲಭಿಸಿದೆ.
ಇದಕ್ಕೆ ಸಹಕರಿಸಿದ ಸಹಾಯಕ ನಿರ್ದೇಶಕರು(ಗ್ರಾ.ಉ) ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್.ಡಿ.ಎ.ಎ ಡಿ.ಇ.ಓ ಗಳು, ಗ್ರಾ.ಪಂ.ಸಿಬ್ಬಂಧಿಗಳು, ತಾಂತ್ರಿಕ ಸಹಾಯಕರು, ಬಿ.ಎಫ್.ಟಿ.ಗಳು, ಕಾಯಕ ಮಿತ್ರ ಹಾಗೂ ಎಲ್ಲಾ ಸಿಬ್ಬಂಧಿ ವರ್ಗದವರಿಗೆ ತಾಪಂ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ಅಭಿನಂದನೆಗಳನ್ನ ತಿಳಿಸಿದ್ದಾರೆ.
ಅದರಂತೆ ಶಿವಮೊಗ್ಗ ಜಿಲ್ಲಾಪಂಚಾಯತ್ ಅತ್ತುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರದ ಪ್ರಶಸ್ತಿಯಲ್ಲಿ ದ್ವೀತೀಯ ಸ್ಥಾನ ವಪಡೆದುಕೊಂಡಿದೆ. ಮುಖ್ಯ ಕಾರ್ಯನಿರ್ವಾಹಕಧಿಕಾರಿ ಪ್ರಕಾಶ್ ಸಮಸ್ತರನ್ನು ಅಭಿನಂದಿಸಿದ್ದಾರೆ.