ಆನವಟ್ಟಿ-ಹಾನಗಲ್-ಶಿರಾಳಕೊಪ್ಪ ಮುಖ್ಯರಸ್ತೆ ಸರ್ವೆ ನಂ.೬೦ರಲ್ಲಿ ವಾಸವಾಗಿರುವ ನಿರಾಶ್ರಿತರಿಗೆ ಯಾವುದೇ ನೋಟೀಸ್ ಮುನ್ಸೂಚನೆ ನೀಡದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಏಕಾಏಕಿ ಬಂದು ಮನೆಗಳನ್ನು ಧ್ವಂಸಗೊಳಿಸಿದ್ದು, ಮನೆಯಲ್ಲಿ
ವಾಸವಾಗಿದ್ದ ಹೆಣ್ಣುಮಕ್ಕಳು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರನ್ನೂ ಪೊಲೀಸರು ಹೊರಗೆ ಹಾಕಿರುತ್ತಾರೆ. ಆದ್ದರಿಂದ ಬಡವರು ಬೀದಿಪಾಲಾಗಿದ್ದು ಕೂಡಲೇ ಸೂಕ್ತ ಪರಿಹಾರ ಮಾರ್ಗ ತೋರಿಸಬೇಕೆಂದು ಆನವಟ್ಟಿ ನಿರಾಶ್ರಿತರು ಮಾನವ ಹಕ್ಕು ಹೋರಾಟ ಸಮಿತಿಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
೧೯೯೫ನೇ ಸಾಲಿನವರೆಗೆ ಸ್ಥಳೀಯ ನಿವಾಸಿಗಳು ಕಂದಾಯ ಸಲ್ಲಿಸುತ್ತಾ ಬಂದಿದ್ದು, ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಹೆಸರು ನಮೂದಾಗಿರುತ್ತದೆ. ಮತ್ತು ಇಲ್ಲಿನ ನಿವಾಸಿಗಳಿಗೆ ಚುನಾವಣಾ ಗುರುತಿನ ಚೀಟಿ ಇದ್ದು, ವಿದ್ಯುತ್ ಸಂಪರ್ಕ ನೀಡಲಾಗಿದೆ.
ಆದ್ದರಿಂದ ಮಾನಸಿಕವಾಗಿ ನೊಂದಿರುವ ಬಡ ಕುಟುಂಬಗಳು ದಾರಿ ಕಾಣದೆ ಬೀದಿ ಬದಿಯ ಮರದ ಕೆಳಗೆ ಜೀವನ ಸಾಗಿಸುತ್ತಿದ್ದು, ಅಮಾಯಕರಾದ ನಮಗೆ ಸೂರು ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾನವ ಹಕ್ಕು ಹೋರಾಟ ಸಮಿತಿಯ ಉಪವಾಸ ಸತ್ಯಾಗ್ರಹ ೨ನೇ ದಿನಕ್ಕೆ ಕಾಲಿಟ್ಟಿದ್ದು, ಈ ಹೋರಾಟಕ್ಕೂ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಬೆಂಬಲ