Site icon TUNGATARANGA

ಪವರ್ ಕಪ್ ಟೂರ್ನಿಯಲ್ಲಿ ತೀರ್ಥಹಳ್ಳಿ ಪ್ರಥಮ, ಹೊಸನಗರ ದ್ವಿತೀಯ, ಕುಂಸಿ ತೃತೀಯ, ನಿತ್ಯ ವಿದ್ಯತ್ ಕಾರ್ಯದಲ್ಲಿ ಬಿಜಿಯಾಗಿದ್ದವರಿಗೊಂದು ರಿಲೀಫ್ ನೋಡಿ

ಕಾರ್ಯಕ್ರಮದ ರೂವಾರಿಗಳಿಗೆ ಅಭಿನಂದನೆ

ಹೆಚ್.ಬಿ.ಈರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಎಜುಕೇಷನ್ ಟ್ರಸ್ಟ್, ತುಂಗಾ ತರಂಗ ಸಹಯೋಗ



ಶಿವಮೊಗ್ಗ, ಮಾ.13:
ಸದಾ ಕಾಲ ಕರೆಂಟ್ ಕಟ್, ಲೈನ್ ಪ್ರಾಬ್ಲಂ, ವಿದ್ಯುತ್ ಬಿಲ್ ವಸೂಲಾತಿ ಸೇರಿದಂತೆ ದಿನವೀಡಿ ದುಡಿಯುವ ಶ್ರಮ ಜೀವಿಗಳ ತಂಡವಾದ ಶಿವಮೊಗ್ಗ ಮೆಸ್ಕಾಂ ಉದ್ಯೋಗಿಗಳ ಹಾಗೂ ಅಧಿಕಾರಿಗಳು ಎರಡು ದಿನಗಳ ಕಾಲ ಒಂದೆಡೆ ಸೇರಿ ಅರ್ಥಪೂರ್ಣವಾದ ಕಾರ್ಯಕ್ರಮದೊಂದಿಗೆ ಕ್ರಿಕೆಟ್ ಪಂದ್ಯದಲ್ಲಿ ಮುಳುಗಿದ್ದು ವಿಶೇಷ.


ಶಿವಮೊಗ್ಗ ಹೆಚ್.ಬಿ.ಈರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಎಜುಕೇಷನ್ ಟ್ರಸ್ಟ್, ತುಂಗಾ ತರಂಗ ದಿನಪತ್ರಿಕೆ ಆಶ್ರಯದಲ್ಲಿ ಆಕಸ್ಮಿಕ ಅವಘಡಗಳಿಂದ ನಿಧನ ಹೊಂದಿದ ಪವರ್ ಮ್ಯಾನ್‌ಗಳ ಸ್ಮಾರಣಾರ್ಥ ಜೆಎನ್‌ಎನ್‌ಸಿಸಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪವರ್ ಕಪ್ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಧನ ಹೊಂದಿದ 9 ಪವರ್ ಮ್ಯಾನ್ ಹಾಗೂ ಗುತ್ತಿಗೆ ಉದ್ಯೋಗಿಗಳ ಕುಟುಂಬದವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.


ಶಿವಮೊಗ್ಗ ಜಿಲ್ಲೆಯ 18 ವಲಯಗಳ ತಂಡಗಳು ಈ 2 ದಿನಗಳ ಕಾಲ ರೋಚಕ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ತೀರ್ಥಹಳ್ಳಿ ಸರ್ಕಿಟ್ ಬ್ರೇಕರ‍್ಸ್ ತಂಡ ಪ್ರಥಮ ಬಹುಮಾನವಾಗಿ 15 ಸಾವಿರ ನಗದು ಹಾಗೂ ಟ್ರೋಫಿಯನ್ನು ಬಾಚಿಕೊಂಡಿತು. ಅಂತೆಯೇ ರಿಯಲ್ ಫೈಟರ್ ಹೊಸನಗರ ತಂಡ ದ್ವಿತೀಯ ಬಹುಮಾನವಾಗಿ 10 ಸಾವಿರ ನಗದು ಹಾಗೂ ಟ್ರೋಫಿಯನ್ನು ಗೆದ್ದುಕೊಂಡಿತ್ತು.


ಕಡೆಯ ಹಂತದ ವರೆಗೂ ಬಿಗ್ ಫೈಟ್ ನೀಡಿದ ಕುಂಸಿ ಪವರ್ ಹಿಟ್ಟರ‍್ಸ್ ತಂಡ 3ನೇ ಬಹುಮಾನವಾಗಿ 5 ನಗದು ಹಾಗೂ ಟ್ರೋಫಿಯನ್ನು ಗೆದ್ದುಕೊಂಡಿತು. ಅತ್ಯುತ್ತಮ ಸರಣಿ ಶ್ರೇಷ್ಠರಾಗಿ ತೀರ್ಥಹಳ್ಳಿಯ ಅರುಣ್, ಅತ್ಯುತ್ತಮ ಬ್ಯಾಟ್ಸ್‌ಮೆನ್ ಆಗಿ ಕುಂಸಿಯ ಲಿಂಗೇಶ್, ಅತ್ಯುತ್ತಮ ಬೌಲರ್ ಆಗಿ ಹೊಸನಗರದ ದಿನೇಶ್ ಆಯ್ಕೆಯಾದರು.
ಟ್ರಸ್ಟ್‌ನ ಅಧ್ಯಕ್ಷ ಸುರೇಶ್ ಹಾಗೂ ತುಂಗಾ ತರಂಗ ದಿನಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರ ಸ್ವಾಮಿ ಸಾರಥ್ಯದಲ್ಲಿ ನಡೆದ ಇಡೀ ಪಂದ್ಯಾವಳಿಯನ್ನು ಹೆಚ್.ಬಿ.ಮಂಜುನಾಥ್ ಹಾಗೂ ಅವರ ತಂಡ ನಡೆಸಿಕೊಟ್ಟಿತು.


ಬಹುಮಾನ ವಿತರಣಾ ಸಮಾರಂಭದಲ್ಲಿ ಕಾ.ವಿ.ಪ್ರಾ.ನಿ.ನಿ. ೬೫೯ ಉಪಾಧ್ಯಕ್ಷ ಮೋಹನ್ ಕುಮಾರ್, ಇಂಜಿನಿಯರಿಂಗ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಸುರೇಶ್, ಹಾರ‍್ನಹಳ್ಳಿ ಜೆ.ಇ. ಜಗದೀಶ್, ಪ್ರಾಥಮಿಕ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ್, ಕೆಂಪರಾಜ್, ಅಶೋಕನಗರದ ಅಶೋಕ್, ಕಲ್ಯಾಣ ಸಮಿತಿಯ ಸಹಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಹೆಚ್.ಬಿ. ಮಂಜುನಾಥ್, ರಾಜೀವ, ಕೃಷ್ಣಮೂರ್ತಿ, ನಂದೀಶ, ಶಿವಕುಮಾರ, ಹಾಲಸ್ವಾಮಿ, ರಾಜೇಂದ್ರನಾಯ್ಕ, ಸಂಜಯ್, ರಾಜಿಕ್‌ಅಹಮ್ಮದ್ ಹಾಗೂ ಇತರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

Exit mobile version