Site icon TUNGATARANGA

ರಾಜ್ಯದಲ್ಲಿ ಹೆಚ್3ಎನ್2ಗೆ “ಮೊದಲ ಬಲಿ”, ಜನರಲ್ಲಿ ಭಯ ಹುಟ್ಟಿಸಿತೇ ಈ ಇಲಾಖಾ ಮಾಹಿತಿ?

ಸುದ್ದಿ, ಮತ್ತು ಜಾಹೀ944825683183


ಬೆಂಗಳೂರು,ಮಾ.10:
ಕೊರೊನಾ ಬಳಿಕ ರಾಜ್ಯದಲ್ಲಿ ಹೆಚ್ 3ಎನ್ 2 ವೈರಲ್​ ಆತಂಕ ಮೂಡಿಸಿದ್ದು, ಇದೀಗ ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು ಸಂಭವಿಸಿದೆ.
H​​3N​​2 ವೈರಸ್​ನಿಂದ ಬಳಲುತ್ತಿದ್ದ ಹಾಸನ(Hassan) ಮೂಲದ ವೃದ್ಧ ಮೃತಪಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾದ್ಯಮಗಳಿಗೆ ಖಚಿತಪಡಿಸಿದ್ದಾರೆ.


ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಈಗಾಗಲೇ ರಾಜ್ಯದ ಜಿಲ್ಲೆಗಳಲ್ಲಿ ಹೆಚ್3ಎನ್2 ವೈರಸ್ ಹೆಚ್ಚಾಗಿದೆ. ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿದ್ದು, ಹಾಸನದಲ್ಲಿ ಆರು ಜನರಿಗೆ ಹೆಚ್3ಎನ್2 ವೈರಸ್ ತಗುಲಿರುವುರು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೊಮಾರ್ಬಿಡಿಟಿ ಮತ್ತು 60 ವರ್ಷ ಮೇಲ್ಪಾಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಮೊದಲ ಸಾವಿನ ಬಗ್ಗೆ ಆಡಿಟ್ ಮಾಡಲು ಮುಂದಾಗಿದ್ದು, ಯಾರು ಸೆಲ್ಪ್ ಟ್ರಿಟ್ಮೆಂಟ್ ತೆಗೆದುಕೊಳ್ಳದೇ ವೈದ್ಯರನ್ನು ಸಂಪರ್ಕಿಸಲು ಆಯುಕ್ತ ರಂದೀಪ್ ಸಲಹೆ ನೀಡಿದ್ದಾರೆ.


ಜ್ಚರ, ಗಂಟಲುನೋವು, ಕೆಮ್ಮಿನಿಂದ ಬಳಲುತ್ತಿದ್ದ ಹಾಸನ ಜಿಲ್ಲೆ ಆಲೂರು ಮೂಲದ ವೃದ್ದ ಮಾರ್ಚ್ 1 ರಂದು ಆಲೂರಿನಲ್ಲಿ ಮೃತಪಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮಾವಾಗಿ ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲ‌ಹಳ್ಳಿಯಲ್ಲಿ ಅರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅನಾರೋಗ್ಯ ಪೀಡಿತ ಜನರನ್ನು ವೈದ್ಯರ ತಂಡ ತಪಾಸಣೆ ಮಾಡುತ್ತಿದೆ. ಎಲ್ಲರ ಅರೋಗ್ಯ ತಪಾಸಣೆ ನಡೆಸಿ ಪರೀಕ್ಷೆಗಾಗಿ ಗಂಟಲು ದೃವವನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಡಿಎಚ್ ಓ ಡಾ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.
ಕೊವಿಡ್ ಬಳಿಕ ಇನ್ಪಾಯಾನ್ಜಾ ವೈರಸ್ ಉಪತಳಿ ಆತಂಕ ಹೆಚ್ಚಿಸಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ H3N2 ವೈರಸ್ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದ್ದು, ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.


ಎಚ್3ಎನ್2 ವೈರಸ್​​ನಿಂದ ಹರಡಿರುವ ಸೋಂಕು ಕನಿಷ್ಠ 5ರಿಂದ 7 ದಿನಗಳ ವರೆಗೆ ಇರುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ಧರಿಗೆ ಬೇಗ ಸೋಂಕು ಹರಡುತ್ತದೆ. 15 ವರ್ಷದಿಂದ 65 ವರ್ಷದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ವಯೋಮಾನದವರು ಹಾಗೂ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಂ- tv9

Exit mobile version