Site icon TUNGATARANGA

ಮಾಸ್ಕಿಗೆ ಹೆದರಲೇಬೇಕು…., ಇಲ್ಲದಿರೆ ಸಾವಿರ ಸಾಕು!

ಬೆಂಗಳೂರು, ಸೆ.30:

ಮಾಸ್ಕಿಗೊಂದು ಗುದ್ದು ಕೊಟ್ಟ ಸರಕಾರ ಕೊರೊನಾ ಹೆಸರಲ್ಲಿ ಜನರ ದಂಡ ವಸೂಲಿಗೆ ಬರ್ಜರಿ ಪ್ಲಾನ್ ಹಾಕಿದೆ.


ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರಕಾರ ಹೊಸ ನಿಯಮಾವಳಿ ಜಾರಿಗೆ ತಂದಿದೆ.
ನಗರ ಪ್ರದೇಶದಲ್ಲಿ ಮಾಸ್ಕ್ ಹಾಕದೆ ಹೊರಗೆ ಹೋದರೆ ಒಂದು ಸಾವಿರ ರೂ. ದಂಡ. ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ. 2 ಬಾರಿಗಿಂತ ಹೆಚ್ಚು ಮಾಸ್ಕ್ ಇಲ್ಲದೆ ಸಿಕ್ಕಿಬಿದ್ದರೆ ಒಂದು ವರ್ಷ ಜೈಲು.
10 ರೂ. ಮಾಸ್ಕ್ ಹಾಕದೆ ನಿರ್ಲಕ್ಷ್ಯ ಮಾಡಿದರೆ ಸಾವಿರ ರೂ ಕಟ್ಟಲೇ ಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಗೊತ್ಗುಗ ಹಾಕದೆ ಬಂದರೆ ಕಚೇರಿ ಒಳಗೆ ಪ್ರವೇಶಿವಿಲ್ಲ. ಹಂಗೆ ಬಂದರೆ ಅವರಿಗೆಂಥ ಗೊತ್ಗು್್ತಿಲ್ಲ

ವಾರದಿಂದಲೇ ಈ ನಿಯಮ ಜಾರಿ.
ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇದ್ದರೆ ಅಂಗಡಿ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಧ್ಯಕ್ಕೆ ಕೊರೋನಾಕ್ಕೆ ಇರುವುದು ಮಾಸ್ಕ್ ಒಂದೇ ಔಷಧ. ಹಾಗಾಗಿ ಇದನ್ನು ಪಾಲಿಸಲೇಬೇಕು ಎನ್ನುವುದು ಸರಕಾರದ ಸೂಚನೆ.
ಮದುವೆ ಮನೆಗಳಲ್ಲಿ, ಸಭೆಸಮಾರಂಭಗಳಲ್ಲಿ ನಿಯಮಾವಳಿ ಮೀರಿ ಗುಂಪುಗೂಡಿದರೂ ದಂಡ ವಿಧಿಸಲು ನಿರ್ಧರಿಸಲಾಗಿದೆ.

Exit mobile version