ಶಿವಮೊಗ್ಗ, ಮಾ.08:
ಹೆಂಡತಿಯನ್ನ ಅನುಮಾನಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಗಂಡ ಮತ್ತು ಅವರಿಬ್ಬರ ನಡುವಿನ ಸಂಬಂಧವನ್ನ ಪ್ರಚಾರ ಪಡಿಸಿದ ಯೂಟ್ಯೂಬ್ ಚಾನೆಲ್ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗದ ಗೋಪಾಳದ ನಿವಾಸಿ ಮಹಿಳೆಯೋರ್ವರು 2015 ರಲ್ಲಿ ದಾವಣಗೆರೆಯ ಚಂದ್ರಶೇಖರ್ ಎಂಬುವರೊಂದಿಗೆ ಮದುವೆಯಾಗಿತ್ತು. ಮದುವೆಯಾಗಿ ಕೆಲ ದಿನಗಳ ವರೆಗೆ ಮಾತ್ರ ಚೆನ್ನಾಗಿದ್ದ ದಾಂಪತ್ಯ ಜೀವನ ಮುಂದೆ ಹಾಳಾಗುತ್ತಾ ಬಂದಿತ್ತು.
ಪತಿಯೊಂದಿಗೆ ಇದ್ದ ಖಾಸಗಿ ವಿಡಿಯೋಗಳನ್ನ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಸಿ ಪತಿಯ ತವರಿನಿಂದ ಹಣ ವಸೂಲಿ ಮಾಡಿದ್ದಾನೆ. ಈತನ ವರ್ತನೆಯಿಂದ ಬೇಸತ್ತ ಪತಿ ನ್ಯಾಯಾಲಯದಲ್ಲಿ ವಿಚ್ಚೇಧನದ ಅರ್ಜಿ ಹಾಕಿಕೊಂಡಿರುತ್ತಾರೆ. ಪ್ರಕರಣ ವಿಚಾರಣ ಹಂತದಲ್ಲಿರುತ್ತದೆ.
ಇವೆಲ್ಲದರ ನಡುವೆ ಪತ್ನಿ ಸ್ವಾಮೀಜಿಯೊಬ್ಬರೊಂದಿಗೆ ಭೇಟಿ ಯಾಗಿ ಸಂಸಾರದ ಬಗ್ಗೆ ಹೇಳಿಕೊಂಡಿದ್ದ ಸನ್ನಿವೇಶವನ್ನೂ ದುರುಪಯೋಗ ಪಡಿಸಿಕೊಂಡು ತಪ್ಪು ಸಂಬಂಧ ಕಲ್ಪಿಸಿ ವಿಡಿಯೋ ಫೊಟೊ ತೆಗೆದುಕೊಂಡು ಯೂಟ್ಯೂಬ್ ಗೆ ಕೊಟ್ಟಿದ್ದು ಯೂಟ್ಯೂಬ್ ಚಾನೆಲ್ ನ ಮುಂದೆ ಪತಿ ಪತ್ನಿಯ ಖಾಸಗಿ ವಿಡಿಯೋಗಳನ್ನ ನೀಡಿ ತೇಜೋವಧೆ ಮಾಡಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ5 ಲಕ್ಷ ರೂ ಬೇಡಿಕೆ ಇಟ್ಟಿರುವುದಾಗಿ ಪತ್ನಿ ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.
ಯಾರೊಂದಿಗೂ ಮಾತನಾಡಿದರೂ ತಪ್ಪು ಸಂಬಂಧ ಕಲ್ಪಿಸಿ ಹಣದ ಬೇಡಿಕೆ ಇಡುವುದು ಪತಿಯ ಹವ್ಯಾಸವಾಗಿದೆ. ಹಾಗಾಗಿ ಮಾನಸಿಕ ಕಿರುಕುಳದಿಂದ ಬೇಸತ್ತ ಪತ್ನಿ ಯೂಟ್ಯೂಬ್ ಚಾನೆಲ್ ಮತ್ತು ಪತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.