Site icon TUNGATARANGA

ಜೂ.15 ರಿಂದ ದೇಶಾದ್ಯಂತ ಮತ್ತೆ ಲಾಕ್ ಡೌನ್..?


ನವದೆಹಲಿ : ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಮಾರ್ಚ್ 25 ರಿಂದ ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ಗೆ ಸರ್ಕಾರ ಕ್ರಮೇಣ ವಿನಾಯಿತಿ ನೀಡುತ್ತಾ ಕೊರೊನಾ ತಡೆಯ ಜೊತೆ ಜನರ ಬದುಕಿಗೆ ಅವಕಾಶ ನೀಡುತ್ತಾ ಬಂದಿರುವುದು ಸರಿಯಷ್ಟೆ.
ಈ ವಿನಾಯಿತಿ ನಡುವೆ ದೇಶಾದ್ಯಂತ ಹಬ್ಬುತ್ತಿರುವ ಕೊರೊನಾ ಅಬ್ಬರಕ್ಕೆ ತಕ್ಕ ಉತ್ತರ ನೀಡಲಾಗದ ಪರಿಸ್ಥಿತಿಗೆ ಬಂದಿರುವ ಹಿನ್ನೆಲೆಯಲ್ಲಿ ಬರು ಜೂನ್ 15 ರಿಂದ ದೇಶಾದ್ಯಂತ ಮತ್ತೆ ಪೂರ್ಣ ಲಾಕ್‌ಡೌನ್ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತದೆ.
ಇಂತಹ ಒಂದಿಷ್ಟು ಹೇಳಿಕೆಗಳು ಹಾಗೂ ಅದಕ್ಕೆ ಪುಷ್ಟಿಕರಿಸುವ ಸರ್ಕಾರದ ನಿಯಮಗಳು ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಿವೆ.
ಕೊರೊನಾ ವೈರಲ್ ದೇಶಾದ್ಯಂತ ಹೆಚ್ಚಾತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಲಾಕ್‌ಡೌನ್‌ ಮತ್ತೆ ಹೇರಲಾಗುತ್ತಿದೆ ಎನ್ನುವ ಹೇಳಿಕೆಗಳನ್ನು ತಿಳಿಸುವುದನ್ನು ಕಾಣಬಹುದಾಗಿದೆ. ಈ ನಡುವೆ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಈ ಸಂದೇಶವನ್ನು ಅವಲೋಕಿಸಿ ವೈರಲ್ ಆಗಿರುವುದನ್ನು ನಕಲಿ ಎಂದು ತಿಳಿಸಿ ಟ್ವೀಟ್‌ ಮಾಡಿದೆ. ಸಾಮಾಜಿಕ ಮಾಧ್ಯಮವೊಂದರಲ್ಲಿ ಪ್ರಸಾರವಾಗುತ್ತಿರುವ ಫೋಟೋವೊಂದರಲ್ಲಿ, ದೇಶದಲ್ಲಿ ಜೂನ್ 15 ರಿಂದ ರೈಲು ಮತ್ತು ವಿಮಾನ ಪ್ರಯಾಣವನ್ನು ನಿಷೇಧಿಸುವುದರೊಂದಿಗೆ ಗೃಹ ಸಚಿವಾಲಯವು ಮತ್ತೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಬಹುದು ಎಂದು ಹೇಳಲಾಗಿದೆ. ಒಟ್ಟಾರೆ ಕೊರೊನಾ ಕಿರಿಕ್ ಗೆ ಅಂತ್ಯ ಹಾಡಲು ಇನ್ನೇನೇನು ಮಾಡಬೇಕೋ ಎಂಬುದೇ ಗೊತ್ತಾಗದೇ ಸಾರ್ವಜನಿಕರು ವ್ಯವಸ್ಥೆಗೆ ಹೊಂದಿಕೊಳ್ಳುವುದು ಅನಿವಾರ್ಯ ಎನ್ನುವ ಹಂತಕ್ಕೆ ಬಂದಿದ್ದಾರೆನ್ನಲಾಗಿದೆ.

Exit mobile version