Site icon TUNGATARANGA

ಬಿಜೆಪಿಯ ನಾಲ್ಕೈದು ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ: ಬಿಎಸ್ ವೈ ಹೇಳಿಕೆಗೆ ಹಲವರ ಎದೆಯಲ್ಲಿ ಡವಡವ….!


ಕಲಬುರ್ಗಿ,ಮಾ.08:
ನಾಲ್ಕೈದು ಶಾಸಕರಿಗೆ ಟಿಕೆಟ್ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದು ಅವರು ಟಿಕೆಟ್ ಕುರಿತು ಕೊಟ್ಟ ಸುಳಿವಿನಿಂದಾಗಿ ಆಕಾಂಕ್ಷಿಗಳಿಗೆ ಶಾಕ್ ಜೊತೆಗೆ ಆ ಟಿಕೆಟ್ ವಂಚಿತರು ಯಾರು ಎಂಬ ಪ್ರಶ್ನೆ ಮೂಡಿದೆ. ಹಲವರ ಎದೆಯಲ್ಲಿ ಡವಡವ ಎನ್ನುತ್ತಿದೆ.


ನಿಕಟಪೂರ್ವ ಸಿಎಂ, ಪಕ್ಷದ ರಾಷ್ಟೀಯ ಪ್ರಮುಖರಾದ ಯಡಿಯೂರಪ್ಪ ಕಲಬುರ್ಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಬಿಜೆಪಿ ಪಕ್ಷಕ್ಕೆ ಯಾರು ಬರುತ್ತಾರೆ ಅವರಿಗೆ ಸ್ವಾಗತ. ಯಾರು ಪಕ್ಷ ಬಿಟ್ಟು ಹೋಗ್ತಾರೆ ಅವರು ಬಿಟ್ಟು ಹೋಗಬಹುದು. ನಾಲ್ಕೈದು ಹಾಲಿ ಶಾಸಕರನ್ನು ಬಿಟ್ಟು ಉಳಿದ ಎಲ್ಲಾ ಬಿಜೆಪಿ ಶಾಸಕರಿಗೆ ಟಿಕೆಟ್ ಕೊಡಲಾಗುವುದು. ಆದಷ್ಟು ಬೇಗ ಬಿಜೆಪಿ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಟೀಕೆ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕದ 41 ರಲ್ಲಿ 30 ಸೀಟ್ ನಾವು ಗೆದ್ದೇ ಗೆಲ್ಲುತ್ತೇವೆ. ರಮೇಶ್ ಕುಮಾರ್ ನಾವು ಸಾಕಷ್ಟು ಮಾಡಿಕೊಂಡು ತೃಪ್ತಿಯಲ್ಲಿದ್ದೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ ಎಸ್ ವೈ ಇದಕ್ಕೆ ಡಿಕೆಶಿ ಮತ್ತು ಸಿದ್ದರಾಮಯ್ಯನವರು ಉತ್ತರಿಸಬೇಕು. ಕಾಂಗ್ರೆಸ್ ಪ್ರಜಾದ್ವನಿಗೆ ಜನ ಸೇರುತಿಲ್ಲ. ನಮ್ಮ ಯಾತ್ರೆಗೆ ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಹೀಗಾಗಿ ವಾತಾವರಣವು ಬಿಜೆಪಿ ಪರವಿದ್ದು 140 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಬಿಜೆಪಿ ನಾಯಕರಿಲ್ಲ, ಅದಕ್ಕಾಗಿ ಕೇಂದ್ರ ನಾಯಕರನ್ನು ಕರೆಸುವ ಕುರಿತು ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್ ವೈ ಅವರು ರಾಹುಲ್ ಗಾಂಧಿ ಅವರನ್ನು ಯಾಕೆ ಕರೆಸುತ್ತಿಲ್ಲ? ಅವರು ಬೇಕಾದ್ರೆ ಅವರ ಪಕ್ಷದ ನಾಯಕರನ್ನು ಕರೆಸಿಕೊಳ್ಳಲಿ. ಯಾರು ಹೊರದೇಶಕ್ಕೆ ಹೋಗಿ ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದು ಹೇಳಿದರು.
ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭವು ದಾವಣಗೆರೆಯಲ್ಲಿ ನಡೆಯಲಿದೆ. ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಬಸವಕಲ್ಯಾಣ ಈ ದೇಶ ಗಮನ ಸೆಳೆಯುವ ಸ್ಥಳ ಆಗಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ಕುರಿತು ಕಲ್ಯಾಣ ಕರ್ನಾಟಕದಲ್ಲಿ ಪ್ರತ್ಯೇಕ ಸಚಿವಾಲಯದ ಬಗ್ಗೆ ಚರ್ಚೆ ಮಾಡುವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ 2023ರ ವಿಧಾನಸಭೆಗೆ ವಿಜಯೇಂದ್ರ ಸ್ಪರ್ಧೆ ವಿಚಾರದ ಕುರಿತು ಮಾತನಾಡಿದ ಬಿಎಸ್ ವೈ, ಕೇಂದ್ರದ ನಾಯಕರು ಎಲ್ಲಿ ಹೇಳುತ್ತಾರೆ ಅಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ. ಶಿಕಾರಿಪುರ ಆಗಬಹುದು ಬೇರೆ ಯಾವುದೂ ಆಗಬಹುದು, ಶಿಕಾರಿಪುರದಲ್ಲಿ ನಿಲ್ಲಬಹುದು ಅಂತ ನನ್ನ ಅನಿಸಿಕೆ ಎಂದು ಹೇಳಿದರು.

Exit mobile version