ಲಖನೌ, ಸೆ.೩೦:
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕೇಸಿನಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ ಎಲ್ಲಾ ೩೨ ಮಂದಿ ಆರೋಪಿಗಳಿಗೆ ಲಖನೌ ವಿಶೇಷ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ಸಿಕ್ಕಿದೆ. ಈ ಮೂಲಕ ೨೮ ವರ್ಷಗಳ ದೀರ್ಘ ಕಾಲದ ಕಾನೂನು ಹೋರಾಟಕ್ಕೆ ತಾತ್ವಿಕ ಅಂತ್ಯ ಸಿಕ್ಕಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಮಸೀದಿ ಧ್ವಂಸ ಒಂದು ಪೂರ್ವ ನಿಯೋಜಿತ ಕೃತ್ಯವಲ್ಲ, ಉದ್ದೇಶಪೂ ರ್ವಕವಾಗಿ ಮಸೀದಿಯನ್ನು ಧ್ವಂಸ ಮಾಡಲಾ ಗಿದೆ ಎಂದು ಹೇಳಲು ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷಿಗಳಿಲ್ಲ ಎಂದು ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್ ಕೆ ಯಾದವ್ ತೀರ್ಪು ಪ್ರಕಟಿಸಿದ್ದಾರೆ.
ಈ ಮೂಲಕ ೩೨ ಮಂದಿ ಆರೋಪಿಗ ಳಿಗೆ ಇಂದು ಕೋರ್ಟ್ ನಿಂದ ಸಿಕ್ಕಿದ ತೀರ್ಪು ಮಹತ್ವದ ಜಯ ಎನ್ನಬಹುದು. ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಕೇಂದ್ರದ ಸಚಿವರು ಬಿಜೆಪಿಯ ಭೀಷ್ಣ ಎಲ್ ಕೆ ಅಡ್ವಾಣಿ ನಿವಾಸಕ್ಕೆ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಬಿಜೆಪಿ ನಾಯಕರಿಗೆ ಇಂದು ನಿರ್ಣಾಯಕ ದಿನವಾಗಿದ್ದು, ಬಹಳ ದೊಡ್ಡ ಜಯ ಸಿಕ್ಕಿದೆ ಎನ್ನಬಹುದು.
ವಿಚಾರಣೆಯ ಹಿನ್ನೆಲೆ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಸಿಬಿಐ ಕೋರ್ಟ್ ಗೆ ತೀರ್ಪು ನೀಡಲು ಸೆಪ್ಟೆಂಬರ್ ೩೦ರವರೆಗೆ ಕಾಲಾವ ಕಾಶ ನೀಡಿತ್ತು. ಈ ಹಿಂದೆ ಆಗಸ್ಟ್ ೩೧ರೊಳಗೆ ತೀರ್ಪು ನೀಡಬೇಕೆಂದು ಸೂಚಿ ಸಿತ್ತು. ಕಳೆದ ವರ್ಷ ಸುಪ್ರೀಂ ಕೋರ್ಟ್, ಅಂತಿಮ ತೀರ್ಪನ್ನು ಆರು ತಿಂಗಳೊಳಗೆ ನೀಡಬೇಕೆಂದು ಸೂಚಿಸಿತ್ತು, ಅದು ಕಳೆದ ಏಪ್ರಿಲ್ ೧೯ಕ್ಕೆ ಮುಕ್ತಾಯವಾಗಿ ನಂತರ ಆಗಸ್ಟ್ ೩೧ರವರೆಗೆ ಕೋವಿಡ್-೧೯ ಹಿನ್ನೆಲೆ ಯಲ್ಲಿ ವಿಸ್ತರಣೆಯಾಗಿತ್ತು.
೨೦೧೭ರ ಏಪ್ರಿಲ್ ೧೯ರಂದು ಸುಪ್ರೀಂ ಕೋರ್ಟ್ ವಿಶೇಷ ಸಿಬಿಐ ಕೋರ್ಟ್ ಗೆ ನಿರ್ದೇಶನ ನೀಡಿ ಪ್ರತಿನಿತ್ಯ ವಿಚಾರಣೆ ನಡೆಸಿ ಎರಡು ವರ್ಷಗಳೊಳಗೆ ತೀರ್ಪು ನೀಡು ವಂತೆ ಆದೇಶಿಸಿತ್ತು.
ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿ ಧ್ವಂಸ ಕುರಿತು ೨೦೦೧ರ ಫೆಬ್ರವರಿ ೧೨ರಂದು ತೀರ್ಪು ನೀಡಿ ಎಲ್ ಕೆ ಅಡ್ವಾಣಿ ಮತ್ತು ಇತರ ಆರೋಪಿಗಳ ವಿರುದ್ಧದ ಪಿತೂರಿ ಪ್ರಕ ರಣ ಕೈಬಿಟ್ಟಿತ್ತು. ಆದರೆ ಅಲಹಾ ಬಾದ್ ಹೈಕೋರ್ಟ್ ತೀರ್ಪಿನಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು.
೨೦೧೭ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಮೊದಲು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಲಖನೌ ಮತ್ತು ರಾಯ್ ಬರೇಲಿ ಕೋರ್ಟ್ ನಲ್ಲಿ ಎರಡು ಪ್ರತ್ಯೇಕ ವಿಚಾರಣೆಗಳು ನಡೆಯು ತ್ತಿದ್ದವು. ಮೊದಲ ಕೇಸು ಲಖನೌ ಕೋರ್ಟ್ ನಲ್ಲಿ ಕರ ಸೇವಕರ ವಿರುದ್ಧ ಮತ್ತು ಮತ್ತೊಂದು ಕೇಸು ರಾಯ್ ಬರೇಲಿ ಕೋರ್ಟ್ ನಲ್ಲಿ ೮ ಮಂದಿ ಅತಿ ಗಣ್ಯ ವ್ಯಕ್ತಿಗಳ ವಿರುದ್ಧವಾಗಿತ್ತು.
೨೦೧೭ರ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಕೇಸನ್ನು ರಾಯ್ ಬರೇಲಿ ಕೋರ್ಟ್‌ನಿಂದ ಸಂಪೂರ್ಣವಾಗಿ ಲಖನೌ ವಿಶೇಷ ಸಿಬಿಐ ಕೋರ್ಟ್ ವರ್ಗಾಯಿಸಿತ್ತು.
ಕೊರೋನಾ ಮತ್ತು ವಯಸ್ಸಿನ ಕಾರಣ ಹಿನ್ನೆಲೆಯಲ್ಲಿ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ವಿಚಾರ ಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿ ಯಾಗಿ ಹೇಳಿಕೆಗಳನ್ನು ನೀಡುತ್ತಿದ್ದರೆ ಉಳಿದ ಆರೋಪಿಗಳು ಲಖನೌ ಕೋರ್ಟ್ ಗೆ ಖುದ್ದಾಗಿ ಹಾಜರಾಗಿ ಹೇಳಿಕೆಗಳನ್ನು ನೀಡು ತ್ತಿದ್ದರು.
ತಮ್ಮ ವಿರುದ್ಧ ರಾಜಕೀಯ ಶತ್ರುಗಳು ಪಿತೂರಿ ನಡೆಸಿ ಬಾಬ್ರಿ ಮಸೀದಿ ಕೇಸಿನಲ್ಲಿ ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದೇ ಬಿಜೆಪಿ ನಾಯಕರು ಕೋರ್ಟ್ ನಲ್ಲಿ ವಾದಿಸಿಕೊಂಡು ಬಂದಿದ್ದರು
ಇಡೀ ದೇಶ ಸಂಭ್ರಮದಲ್ಲಿದೆ: ಡಿ.ಹೆಚ್.ಶಂಕರಮೂರ್ತಿ
ಶಿವಮೊಗ್ಗ, ಸೆ.೩೦:
ತೀರ್ಪು ನಿರೀಕ್ಷಿಸಿದ್ದೆ ಹಾಗಾಗಿ ನನಗೆ ತುಂಬಾ ಸಂತೋಷವಾಗಿದೆ. ನನಗೆ ಮಾತ್ರವಲ್ಲ ಇಡೀ ದೇಶವೇ ಸಂಭ್ರಮದಲ್ಲಿದೆ. ಇದು ಸ್ವಾಗತಾರ್ಹ ತೀರ್ಪು ಎಂದು ವಿಧಾನಪರಿಷತ್ ಮಾಜಿ ಅಧ್ಯಕ್ಷ ಹಾಗೂ ಸಂಘ ಪರಿವಾರದ ಹಿರಿಯ ಮುಖಂಡ ಡಿ.ಹೆಚ್.ಶಂಕರ ಮೂರ್ತಿ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಲಕ್ನೋ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ. ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿ ಸಿದಂತೆ ಆರೋಪಿತರಾಗಿದ್ದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸೇರಿದಂತೆ ೩೨ ಜನರನ್ನು ನಿರ್ದೋಷಿ ಎಂದು ಹೇಳಿದೆ. ಇದು ಸರಿಯಾದ ತೀರ್ಪು ಆಗಿದೆ ಎಂದರು.
ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಭಾರತೀಯರ ಭಾವನೆಗಳಿಗೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗದು. ಇನ್ನಾದರೂ ರಾಜ್ಯಾಂಗದ ಬಗ್ಗೆ ಮಾತನಾಡುವವರು ಎಚ್ಚರಿಕೆಯಿಂದ ಮಾತನಾಡಲಿ ಎಂದರು.
ರಾಷ್ಟ್ರೀಯವಾದಿಗಳಿಗೆ ಸಂತಸ ದಿನ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಸೆ.೩೦:
ಬಾಬ್ರಿ ಮಸೀದಿ ಪ್ರಕರಣದ ಹೋರಾಟದಲ್ಲಿದ್ದ ೩೨ ಜನರಿಗೆ ಕೋರ್ಟ್ ಖುಲಾಸೆ ಮಾಡಿರುವುದು ರಾಷ್ಟ್ರೀಯವಾದಿಗಳಿಗೆ ಸಂತಸದ ದಿನವಾಗಿದೆ. ಸ್ವತಂತ್ರ ಭಾರತದಲ್ಲಿ ನಮ್ಮ ಶ್ರದ್ಧಾ ಮಂದಿರಗಳ ಪರ ಹೋರಾಟ ಮಾಡಲು ಇಂದಿನ ತೀರ್ಪು ಸ್ಪೂರ್ತಿದಾಯಕವಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಯೋಧ್ಯೆಯ ಬಾಬರಿ ಮಸೀದಿ ಕೆಡವಲು ಸಿಬಿಐ ವಿಶೇಷ ನ್ಯಾಯಾಲಯ ೩೨ ಜನರನ್ನ ಖುಲಾಸೆಗೊಳಿಸಿ ತೀರ್ಫು ಮಥುರೆಯಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಪೂರ್ತಿಯಾಗಲಿದೆ. ಗುಲಾಮತನದ ಮನೋಭಾವನೆಯಿಂದ ಹೊರಬಂದು ರಾಷ್ಟ್ರಿಯವಾದಿಗಳಿಗೆ ಜಯ ನೀಡಿದ ತೀರ್ಪು ಇದು. ಈ ತೀರ್ಪು ಶ್ರೀಕೃಷ್ಣ ಜನ್ಮಸ್ಥಳವಾದ ಮಥುರೆಯಲ್ಲಿಯೂ ಶ್ರೀ ಕೃಷ್ಣಮಂದಿರ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದರು.