Site icon TUNGATARANGA

ಮೋದಿಯಿಂದ ಕುವೆಂಪುರವರಿಗೆ ಅವಮಾನ: ಒ.ಬಿ.ಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಆರೋಪ

ಮೋದಿ ಶಿವಮೊಗ್ಗಕ್ಕೆ ಬಂದು ಕುವೆಂಪುರವರು ಬರೆದ ಸಾಲಗಳನ್ನು ಅಸ್ಪಷ್ಟವಾಗಿ ಉಚ್ಚರಿಸಿ ಕುವೆಂಪುರವರಿಗೆ ದೊಡ್ಡ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಒ.ಬಿ.ಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.


ಅವರು ಪಟ್ಟಣದ ಬ್ರಾಂತೇಶ್ ಭವನದಲ್ಲಿ ಮಧು ಬಂಗಾರಪ್ಪನವರ ಅಭಿಮಾನಿಗಳು ಹಮ್ಮಿಕೊಂಡಿದ್ದ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ, ಮೊದಲು ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟ ರೈತರಿಗೆ ಪರಿಹಾರ ಕೊಡಿ ಅದೇ ರೀತಿ ಉದ್ಘಾಟನೆಯಾದ ಶಿಕಾರಿಪುರದ ಏತ ನೀರಾವರಿಯಿಂದ ಇನ್ನೂ ಯಾಕೆ ಶೇಕಡ ೯೦/ ರಷ್ಟು ಕೆರೆಗಳನ್ನು ಯಾಕೆ ತುಂಬಿಸಿಲ್ಲ ಎಂದು ಪ್ರಶ್ನಿಸಿದರು.


ನಮ್ಮ ತಂದೆ ಸಿ.ಎಂ. ಆದಾಗ ಲೂಟಿ ಹೊಡೆದಿದ್ದರೂ ಅದು ಜನಗಳ ಹೃದಯ ವನ್ನು ಅವರ ಸ್ನೇಹವನ್ನು, ಪ್ರೀತಿಯನ್ನು, ಬಂಗಾರಪ್ಪನವರು ನಿಮ್ಮೆಲ್ಲರ ಹೃದಯದ ಲ್ಲಿದ್ದಾರೆ ಅದನ್ನು ಕಿತ್ತು ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.


ಪುರಸಭಾ ಸದಸ್ಯ ನಾಗರಾಜ್ ಗೌಡ, ಮಾಜಿ ವಿಧಾನಸಭಾ ಸದಸ್ಯ ಶಾಂತವೀರಪ್ಪ ಗೌಡರು ಮಾತನಾಡಿದರು. ಕೆಪಿಸಿಸಿ ಸದಸ್ಯ ಗೋಣೆ ಮಾಲತೇಶ್, ಚುನಾವಣಾ ವೀಕ್ಷಕ ರಮೇಶ್, ಭಾರತ್ ಜೋಡು ಸಂಯೋಜ ಕರಾದ ನಿರ್ಮಲ ಪಾಟೀಲ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಮಾರ್ವಳ್ಳಿ ಉಮೇಶ್, ಮಾತನಾಡಿದರು ಈ ಸಂದರ್ಭ ಮಾಜಿ ಶಾಸಕ ಮಹಾಲಿಂಗಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಚ್. ಎಸ್ ರವೀಂದ್ರ, ಎಸ್. ಟಿ. ಮೋರ್ಚ ಘಟಕದ ಜಿಲ್ಲಾಧ್ಯಕ್ಷ ವೀರೇಶ್ ಇತರರಿದ್ದರು.

Exit mobile version