Site icon TUNGATARANGA

ಎನ್‍ಯುಹೆಚ್‍ಎಂ/ಆರ್‍ಬಿಎಸ್‍ಕೆ ಹುದ್ದೆಗಳ ನೇಮಕಕ್ಕೆ ನೇರ ಸಂದರ್ಶನ


ಶಿವಮೊಗ್ಗ,
        ಎನ್.ಯು.ಹೆಚ್.ಎಂ ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಶಿರಾಳಕೊಪ್ಪ, ಆನವಟ್ಟಿ, ಹೊಳೆಹೊನ್ನೂರು ಇಲ್ಲಿ ನಮ್ಮ ಕ್ಲಿನಿಕ್‍ನ್ನು ಹೊಸದಾಗಿ ಪ್ರಾರಂಭಿಸುವ ಸಂಬಂಧ ವೈದ್ಯಕೀಯ/ಅರೆ ವೈದ್ಯಕೀಯ ಸಿಬ್ಬಂದಿಗಳ ಆಯ್ಕೆಗೆ ನೇರ ಸಂದರ್ಶನ ಹಾಗೂ ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲ್ಲೂಕಿಗೆ ಆರ್.ಬಿ.ಎಸ್.ಕೆ ಕಾರ್ಯಕ್ರಮದಡಿ ವೈದ್ಯಾಧಿಕಾರಿಗಳನ್ನು ಆಯ್ಕೆ ಮಾಡಲು ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.


          ಎನ್.ಯು.ಹೆಚ್.ಎಂ ಕಾರ್ಯಕ್ರಮದಡಿ ವೈದ್ಯಾಧಿಕಾರಿ 03 ಹುದ್ದೆಗಳಿದ್ದು ಎಂಬಿಬಿಎಸ್, ಕೆಎಂಸಿ ನೋಂದಣಿ, ಪದವಿ ಪ್ರಮಾಣ ಪತ್ರ ಸಲ್ಲಿಸಬೇಕು. ಶುಶೂಷಕಿಯರು(ಮಹಿಳೆ) 03 ಹುದ್ದೆಗಳಿದ್ದು ಮಾನ್ಯತೆ ಪಡೆದಿರುವ ನರ್ಸಿಂಗ್ ಸಂಸ್ಥೆಯಿಂದ  ಜಿ.ಎನ್.ಎಂ/ಬಿ.ಎಸ್ಸಿ ನರ್ಸಿಂಗ್/ ಡಿಪ್ಲೋಮೋ  ನರ್ಸಿಂಗ್ ಪದವಿ ಪಡೆದಿರಬೇಕು, ಎಂ.ಎಸ್ಸಿ ಅಥವಾ ಬಿ.ಎಸ್ಸಿ ಪದವಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಓರ್ವ ಎಂಬಿಬಿಎಸ್ ಮತ್ತು 02 ಆಯುಷ್ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಬಿ.ಎ.ಎಂ.ಎಸ್/ಎಂ.ಬಿ.ಬಿ.ಎಸ್ ವೈದ್ಯ ಪದ್ದತಿಯನ್ನು ಅಂಗೀಕೃತ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪಡೆದಿರಬೇಕು. ಹಾಗೂ ಕಿರಿಯ ಪ್ರಯೋಗಶಾಲಾ ತಂತ್ರಜÐರ 03 ಹುದ್ದೆಗಳಿದ್ದು ದ್ವಿತೀಂiÀi ಪಿ.ಯು.ಸಿ ಯಲ್ಲಿ ವಿಜ್ಞಾನ ವಿಷಯದಲ್ಲಿ ಉತೀರ್ಣ ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ  ಎರಡು ವರ್ಷದ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಪಡೆದಿರಬೇಕು. ಕಂಪ್ಯೂಟರ್ (ಬೇಸಿಕ್ ) ಮತ್ತು ಅಂತರ್ಜಾಲ, ಇತ್ಯಾದಿಗಳ ಬಳಕೆಗೆ ಬೇಕಾಗುವ  ಕಂಪ್ಯೂಟರ್ (ಬೇಸಿಕ್ ) ತರಬೇತಿ ಕಡ್ಡಾಯವಾಗಿ ಉತ್ತಿರ್ಣರಾಗಿರಬೇಕು.


   ನೇರ ಸಂದರ್ಶನವನ್ನು ಮಾರ್ಚ್ 13 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಆವರಣ, ಬಿ.ಹೆಚ್. ರಸ್ತೆ, ಶಿವಮೊಗ್ಗ ಇಲ್ಲಿ ನಡೆಸಲಾಗುವುದು. 12 ಗಂಟೆಯಿಂದ ಸಂಜೆ 5.30ರವರೆಗೆ ನಡೆಸಲಾಗುವುದು.  


      ಎನ್.ಹೆಚ್.ಎಂ/ಎನ್.ಯು.ಹೆಚ್.ಎಂ ಮಾರ್ಗಸೂಚಿಯಂತೆ ವೇತನ ಹಾಗೂ ನೇಮಕಾತಿಯು ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಮೇಲಿನ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2 ರಿಂದ 5 ವರ್ಷಗಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ ,ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:08182-200337 ಹಾಗೂ ಕಚೇರಿಯನ್ನು ಸಂಪರ್ಕಿಸಬಹುದೆಂದು ಆರ್‍ಸಿಹೆಚ್‍ಓ ತಿಳಿಸಿದ್ದಾರೆ.

Exit mobile version