Site icon TUNGATARANGA

ಸರ್ಕಾರಿ ಶಾಲೆಗಳ ಉಳಿವು ಬಲವರ್ಧನೆಗೆ ಸಂಘ, ಸಂಸ್ಥೆಗಳು ನೆರವಾಗಬೇಕು: ಶಿಕ್ಷಣಾಧಿಕಾರಿ ನಾಗರಾಜ್

ಶಿವಮೊಗ್ಗ: ಸರ್ಕಾರಿ ಶಾಲೆಗಳ ಉಳಿವು ಹಾಗೂ ಬಲವರ್ಧನೆಗೆ ಸಂಘ, ಸಂಸ್ಥೆಗಳು ಇನ್ನಷ್ಟು ನೆರವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಹೇಳಿದರು.

ಆರ್.ಕೆ. ಫೌಂಡೇಶನ್ ಬೆಂಗಳೂರು ವತಿಯಿಂದ ನಗರದ ಬಿಬಿ ರಸ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗ ಜಿಲ್ಲೆಯ 9 ಶಾಲೆಗಳಿಗೆ ನಲಿ-ಕಲಿ ಟೇಬಲ್ ಗಳು ಹಾಗೂ ಮಕ್ಕಳಿಗೆ ಕುಳಿತುಕೊಳ್ಳುವ ಮ್ಯಾಟ್ ಗಳನ್ನು ವಿತರಿಸಿ ಮಾತನಾಡಿದರು.

 ಸಂಘ, ಸಂಸ್ಥೆಗಳ ಸಹಾಯದಂತಹ ಕಾರ್ಯಕ್ರಮಗಳು ಶಾಲೆಗಳ ಇನ್ನಷ್ಟು ಪ್ರೇರಣೆ, ಪ್ರೋತ್ಸಾಹವನ್ನು ನೀಡುತ್ತಿವೆ ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಇನ್ನಷ್ಟು ಶಾಲೆಗಳು ಇದರ ಫಲಾನುಭವವನ್ನು ಪಡೆಯುವಂತಾಗಲಿ ಎಂದು ಆಶಿಸಿದರು. ನಲಿಕಲಿ ಕ್ರಿಯಾಶೀಲ ತಾರೆಯರು ತಂಡದ ಸಹಕಾರ ಹಾಗೂ ಉತ್ತಮ ಕಾರ್ಯಗಳು ಇನ್ನಷ್ಟು ಮುಂದುವರೆಯಲಿ ಎಂದು ಪ್ರೋತ್ಸಾಹಿಸಿದರು.

ಆರ್.ಕೆ. ಫೌಂಡೇಶನ್ ಸಂಸ್ಥಾಪಕರಾದ ಸುಮತಿ ಅವರು, ನಾವು ನೀಡುತ್ತಿರುವ ಸಾಮಗ್ರಿಗಳು ಮಕ್ಕಳ ಕಲಿಕೆ ಹಾಗೂ ಕನ್ನಡ ಶಾಲೆಗಳ ಬಲವರ್ಧನೆಗಾಗಿ. ಸಾಮಗ್ರಿಗಳ ಸಮರ್ಪಕವಾದ ಬಳಕೆ ಆದಲ್ಲಿ ನಮ್ಮ ಉದ್ದೇಶ ಈಡೇರುತ್ತದೆ ಎಂದರು.

ಬೆಂಗಳೂರಿನ ಶಿಕ್ಷಕ ನಾರಾಯಣಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಇನ್ನಷ್ಟು ಶಾಲೆಗಳಿಗೆ ಇದರ ಫಲಾನುಭವವನ್ನು ಒದಗಿಸುವ ಭರವಸೆಯನ್ನು ನೀಡಿದರು.

ನಲಿ ಕಲಿ ಟೇಬಲ್ ಹಾಗೂ ಮ್ಯಾಟ್ ಗಳನ್ನು ಪಡೆದ ಶಿವಮೊಗ್ಗ ಜಿಲ್ಲೆಯ ಒಂಬತ್ತು ಶಾಲೆಗಳು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ರಮೇಶ್, ಚೈತ್ರಾ, ಬಸವರಾಜಪ್ಪ, ರವಿ, ಬೇಬಿ. ಬಿ.ಎಸ್., ಫೌಜಿಯ ಸರವತ್, ಭಾಗೀರಥಿ, ಪವಿತ್ರಾ, ಹಾಲಪ್ಪ ಮೊದಲಾದವರಿದ್ದರು.

Exit mobile version