Site icon TUNGATARANGA

ಸಮುದಾಯ ಅಭಿವೃದ್ದಿ ಸಂಸ್ಥೆಗಳಿಂದ ಅರ್ಜಿ ಆಹ್ವಾನ


        ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆಯು ‘ಯುವ ಸಂವಾದ ಇಂಡಿಯಾ@ 2047 ‘ ಎನ್ನುವ ಹೊಸ ಕಾರ್ಯಕ್ರಮವನ್ನು ಹೊರ ತಂದಿದ್ದು,  ಈ ಕಾರ್ಯಕ್ರಮವನ್ನು ಸಮುದಾಯ ಆಧಾರಿತ ಸಂಸ್ಥೆಗಳ ಸಹಯೋಗದಲ್ಲಿ ಭಾರತದ ಎಲ್ಲಾ ಜಿಲ್ಲೆಗಳಲ್ಲಿ  ಏ.01 ರಿಂದ ಮೇ.31 ರವರೆಗೆ ಆಚರಿಸಲು ನಿರ್ಧರಿಸಿದೆ.

        ಪ್ರಧಾನ ಮಂತ್ರಿಗಳ ಮಾರ್ಗದರ್ಶನ ಮತ್ತು ಸ್ಫೂರ್ತಿಯಿಂದ ಭಾರತ 75ನೇ ವರ್ಷದ ಸ್ಮರಣಾರ್ಥವಾಗಿ ‘ಅಜಾದೀ ಕಾ ಅಮೃತ ಮಹೋತ್ಸವ’ ವನ್ನು ಆಚರಿಸುತ್ತಿದೆ. ಭಾರತದ ಇತಿಹಾಸದಲ್ಲಿ ಖ್ಯಾತಿ ಪಡೆದ ಗಣ್ಯರ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನದೊಂದಿಗೆ, ನರೇಂದ್ರ ಮೋದಿಜಿ ರವರು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ‘ಪಂಚ ಪ್ರಾಣ್’ ಎನ್ನುವ ಮಂತ್ರವನ್ನು ಘೋಷಿಸಿದ್ದಾರೆ. ಅಮೃತ ಕಾಲ ಇಂಡಿಯಾ@ 2047 ಎನ್ನುವ ದೃಷ್ಠಿಕೋನವನ್ನು ಜನತೆಯ ಮುಂದಿಟ್ಟಿದ್ದಾರೆ.


            ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಸಮುದಾಯ ಅಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಆಚರಿಸಲು ಯೋಜನೆ ರೂಪಿಸಿದ್ದು, ಜಿಲ್ಲಾ ನೆಹರು ಯುವ ಕೇಂದ್ರಗಳು ಕೈಜೋಡಿಸಿ ದೇಶದ ಭವಿಷ್ಯದ ಬಗ್ಗೆ ಸಕರಾತ್ಮಕವಾಗಿ ಚಿಂತಿಸಿ, ಪ್ರಧಾನ ಮಂತ್ರಿಗಳ ಆಶಯದಂತೆ ಪಂಚ ಪ್ರಾಣ್ ಯೋಜನೆಯನ್ನು ವ್ಯವಸ್ಥಿತ ಗುರಿಯೊಂದಿಗೆ ಸಾಧಿಸಬೇಕಿದೆ.


     ಸುಮಾರು 500 ಕ್ಕೂ ಹೆಚ್ಚು ಯುವಜನರೊಡನೆ ಪ್ರಶ್ನೋತ್ತರ ಮೂಲಕ ಸಂವಾದ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿದೆ. ಮತ್ತು ಪ್ರತಿ ಜಿಲ್ಲೆಯಲ್ಲಿ ಸಮುದಾಯ ಅಭಿವೃದ್ದಿ ಸಂಸ್ಥೆಗಳ ಮೂಲಕ ಮೂರು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಪ್ರತಿ ಕಾರ್ಯಕ್ರಮಕ್ಕೆ ರೂ.20 ಸಾವಿರ ಅನುದಾನ ನಿಗದಿಪಡಿಸಲಾಗಿದೆ. ಈ ಅನುದಾನವನ್ನು ಸಮುದಾಯ ಅಭಿವೃದ್ದಿ ಸಂಸ್ಥೆಗಳಿಗೆ ಕೊಡಲಾಗುವುದು.


      ಆದ್ದರಿಂದ ಜಿಲ್ಲೆಯ ಸಮುದಾಯ ಅಭಿವೃದ್ದಿ ಸಂಸ್ಥೆಗಳು ಈ ಯುವ ಸಂವಾದ ಕಾರ್ಯಕ್ರಮ ನಡೆಸಲು ಮುಂದೆ ಬರಬಹುದು. ಅರ್ಹ 03 ಸಂಸ್ಥೆಗಳನ್ನು ಜಿಲ್ಲೆಯಿಂದ ಆಯ್ಕೆ ಮಾಡಲಾಗುವುದು. ನಿಗದಿತ ಅರ್ಜಿ ನಮೂನೆ ಜಿಲ್ಲಾ ನೆಹರು ಯುವ ಕೇಂದ್ರ ಶಿವಮೊಗ್ಗ ಇಲ್ಲಿ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 12 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಬಾಲರಾಜ್ ಅರಸ್ ರಸ್ತೆ ಶಿವಮೊಗ್ಗ, ದೂ.ಸಂ: 08182-220883, ಮೊ.ಸಂ: 9961332968 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Exit mobile version