Site icon TUNGATARANGA

ಪ್ರಧಾನಿಗಳೇ “VISL” ನಿಮಗೇ ಕಾಣಲಿಲ್ಲವೇ, ಆ ಕಾರ್ಖಾನೆ ಗೊತ್ತಿಲ್ವೇ? ಸ್ಥಳೀಯ ಮುಖಂಡರು ಹೇಳಲಿಲ್ಲವೇ?: ಬಹುಜನರ ಒಕ್ಕೊರಲ ಪ್ರಶ್ನೆ

ಶಿವಮೊಗ್ಗ, ಫೆ.28:
ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಬಂದು ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆ ಮಾಡಿದ್ದು ಸರಿಯಷ್ಟೇ. ಜಿಲ್ಲೆಯ ನೈಜ ಸಮಸ್ಯೆಗಳ ಬಗ್ಗೆ, ಜಿಲ್ಲೆಯ ಅತಿ ಮುಖ್ಯ ವಿಷಯಗಳ ಬಗ್ಗೆ ಅದರಲ್ಲೂ ಮುಚ್ಚಿರುವ ವಿಐಎಸ್ಎಲ್ ಕಾರ್ಖಾನೆ ಬಗ್ಗೆ ಒಂದೂ ಮಾತನಾಡದಿರುವುದು ಶಿವಮೊಗ್ಗ ಜಿಲ್ಲೆಯ ಅಪಾರ ಜನರ ಖಂಡಿನೆಗೆ ಕಾರಣವಾಗಿದೆ.

ನಿನ್ನೆ ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಹಳ ದೊಡ್ಡ ಜನಸ್ತೋಮದ ನಡುವೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಗೊಳಿಸಿದ ಪ್ರಧಾನಮಂತ್ರಿಗಳಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವಿಐಎಸ್ಎಲ್ ಕಾರ್ಖಾನೆಯದ ಯಾವುದೇ ಸಮಾಚಾರ, ಸಮಜಾಯಿಸಿ ಆಗಲಿ ಸಿಗಲೇ ಇಲ್ಲ. ಇಲ್ಲಿ ಕಾರ್ಖಾನೆ ಲೆಕ್ಕಕ್ಕಿಲ್ಲದ ವಸ್ತುವಾಗಿತ್ತು.
ಕಾರ್ಖಾನೆಯ ಉಳಿವಿನ ಬಗ್ಗೆ ಮೋದಿ ಮಾತನಾಡುತ್ತಾರೆ ಎನ್ನುವ ಬಹುದೊಡ್ಡ ಆಕಾಂಕ್ಷೆ ಜಿಲ್ಲೆಯ ಜನರಲ್ಲಿ ಇತ್ತು.

ಶಿವಮೊಗ್ಗ ಜಿಲ್ಲೆಯನ್ನು ಹಾಡಿ ಹೊಗಳಿದ ಮೋದಿಯವರು ಜಿಲ್ಲೆಯ ಉದ್ಯೋಗಾವಕಾಶ ಹೆಚ್ಚಿಸುವ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರಗಳ ಹೆಸರು ಹಿಡಿದು ವಿಮಾನ ನಿಲ್ದಾಣ ಆರಂಭ ಜಿಲ್ಲೆಯ ಅಭಿವೃದ್ಧಿಗೆ ಮೈಲಿಗಲ್ಲಾಗಲಿದೆ ಎಂದಿದ್ದರು ಅಷ್ಟೆ.
ಕಳೆದ ಫೆಬ್ರವರಿ 24ರಂದು ಇಡೀ ಭದ್ರಾವತಿ ಕಾರ್ಖಾನೆಯನ್ನು ಉಳಿಸಲು ಬಂದ್ ಆಚರಿಸಿತ್ತು. ಈ ವಿಷಯವನ್ನು ಮೋದಿಯವರ ಗಮನಕ್ಕೆ ತರುವ ಕೆಲಸವನ್ನು ಸ್ಥಳೀಯ ಜನಪ್ರತಿನಿಧಿಗಳು ಅದರಲ್ಲೂ ಸಂಸದರು ಮಾಡಬೇಕಿತ್ತು. ಆದರೆ ಆ ಕಾರ್ಯ ಆಗಿರುವಂತಿಲ್ಲ. ಮೋದಿ ಆಗಮಿಸುತ್ತಾರೆ ಎಂಬ ಕಾರಣಕ್ಕೆ ವಿ ಎಸ್ ಎಲ್ ಕಾರ್ಖಾನೆಯನ್ನು ಉಳಿಸಲು ಮೋದಿ ಅವರಿಗೆ ಮನವಿ ಸಲ್ಲಿಸಲು ಕಾರ್ಮಿಕರು ನಿರ್ಧರಿಸಿದ್ದರೆ ಅವರನ್ನು ಏಕಾಏಕಿ ಬೆಳಗಿನ ಹೊತ್ತಿನಲ್ಲೇ ಬಂಧಿಸಿದ್ದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ಅತಿ ಮುಖ್ಯವಾದ ಗಂಭೀರವಾದ ಭದ್ರಾವತಿಯ ಕಾರ್ಖಾನೆಯನ್ನು ಉಳಿಸುವ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಾತನಾಡಬಹುದಿತ್ತು.
ಇದೇ ಹೊತ್ತಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಲವು ಬೇಡಿಕೆಗಳ ಒತ್ತಾಯಿಸಿ ಮಾ. ಒಂದರಿಂದ ಹಮ್ಮಿಕೊಂಡಿರುವ ಪ್ರತಿಭಟನೆಯ ಬಗ್ಗೆ ಮಾತನಾಡಿ ಸಮಜಾಯಿಸಿ ಅಥವಾ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಹೇಳಬಹುದಿತ್ತು. ಆದರೆ ಆ ವಿಷಯವನ್ನು ಅವರು ಹೊರ ಬಿಡಲೇ ಇಲ್ಲ. ಪುಕ್ಕಟ್ಟೆಯಾಗಿ ಚುನಾವಣೆ ಹೊತ್ತಿನಲ್ಲಿ ತಾವು ಬೆಳೆಯುವ ಉದ್ದೇಶದಿಂದ 7ನೇ ವೇತನ ಆಯೋಗ ಜಾರಿಗೊಳಿಸುವುದಾಗಿ ಬಿಲ್ಡಪ್ ತೆಗೆದುಕೊಂಡಿದ್ದ ಮುಖ್ಯಮಂತ್ರಿಗಳು ಈಗ ಏಕಾಏಕೀ ಆದರಿಂದ ದೂರ ಸರಿದಿದ್ದು ಏಕೆ? ಶಿವಮೊಗ್ಗದ ನೈಜ ಸಮಸ್ಯೆಗಳ ಕುರಿತು ಯಾವುದೇ ಮಾತನಾಡಲಿರುವುದು ಈ ಬಗ್ಗೆ ಬಹುದೊಡ್ಡ ವರ್ಗದ ಆಕ್ರೋಶವಿದೆ

Exit mobile version