Site icon TUNGATARANGA

ಈ ನಾಡಿನ ಜನರಿಗೆ ನಾನು ಋಣಿ| ನನ್ನ ರಾಜಕೀಯ ಜೀವನದಲ್ಲಿ ಇದೊಂದು ಮಹತ್ವದ ದಿನ ಭಾವನಾತ್ಮಕ ನುಡಿಗಳೊಂದಿಗೆ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ಈ ನಾಡಿನ ಜನರಿಗೆ ನಾನು ಋಣಿಯಾಗಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇದೊಂದು ಮಹತ್ವದ ದಿನವಾಗಿದೆ. ವಿಶ್ವನಾಯಕ ಮೋದಿಜೀಯವರೇ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭಾವನಾತ್ಮಕವಾಗಿ ನುಡಿದರು.


ಅವರು ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿಯವರಿಂದ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿ, ನನ್ನ ಹುಟ್ಟು ಹಬ್ಬದ ದಿನದಂದೇ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿರುವುದು ನನಗೆ ಅತ್ಯಂತ ಸಂಭ್ರಮ ತಂದಿದೆ. ನನ್ನ ಜೀವನ ಸಾರ್ಥಕಗೊಂಡಿದೆ ಎಂದರು.


ಕಟ್ಟುವೆವು ನಾವು ಕನ್ನಡ ನಾಡೊಂದನ್ನು ಎಂಬ ಕವಿವಾಣಿಯಂತೆ ಜಿಲ್ಲೆಯ ಮತ್ತು ರಾಜ್ಯದ ಅಭಿವೃದ್ಧಿಯನ್ನು ನಾನು ಮಾಡದ್ದೇನೆ ಎಂಬ ತೃಪ್ತಿ ನನಗಿದೆ ಜಿಲ್ಲೆಯ ಜನರು ನನಗೆ ಧೈರ್ಯ ತುಂಬು ಶಾಸಕನನ್ನಾಗಿ ಮಾಡಿ, ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಶಿಕಾರಿಪುರದ ಜನರು ಸೇರಿದಂತೆ ಈ ನಾಡಿನ ಜನರಿಗೆ ನಾನು ಋಣಿಯಾಗಿದ್ದೇನೆ. ಶಾಸಕನಾಗಿ

, ಸಂಸದನಾಗಿ, ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ನನಗೆ ಎಲ್ಲರೂ ಧೈರ್ಯ ತುಂಬಿದ್ದಾರೆ. ಈ ಅವಕಾಶ ನೀಡಿದ ಎಲ್ಲರಿಗೂ ಕೃತಜ್ಞತೆಗಳು ಎಂದರು. ಮಲೆನಾಡಿನ ಕನಸುಗಳು ತೆರೆದುಕೊಳ್ಳತೊಡಗಿವೆ ಎಂದರು.


ಮೋದಿಯವರು ಇಡೀ ವಿಶ್ವವೇ ಮೆಚ್ಚಿದ ಆದರ್ಶ ನಾಯಕರಾಗಿದ್ದಾರೆ. ನಾನು ಸಂಸದನಾಗಲು ಅವರೇ ಪ್ರೇರಣೆಯಾಗಿದ್ದಾರೆ. ಶಿವಮೊಗ್ಗ ಶರಣರ ನಾಡಾಗಿದೆ. ಶರಣರ ಕಾಯಕತತ್ವವೇ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ.

ಮೋದಿಯವರು ಕೂಡ ಬಸವಣ್ಣನವರ ಕಾಯಕತತ್ವವನ್ನೇ ಅಭವೃದ್ಧಿಯ ಮಂತ್ರವನ್ನಾಗಿ ಇಟ್ಟುಕೊಂಡಿದ್ದಾರೆ. ರಾಷ್ಟ್ರಕವಿ ವಿಶ್ವಮಾನವ ಕುವೆಂಪು ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವಂತೆ ಪ್ರಧಾನಿಯವರಿಗೆ ಮನವಿ ಮಾಡಿದ್ದೇನೆ ಎಂದರು.

Exit mobile version