ಶ್ರೀ ಆದಿಚುಂಚನಗಿರಿ ಕ್ಷೆತ್ರದ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಶಾಖಾ ಮಠದ ಶ್ರೀ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಭದ್ರಾವತಿ ತಾಲೂಕಿನ ಎಲ್ಲ ಖಾಸಗಿ ಶಾಲೆ ವಿದ್ಯಾರ್ಥಿಗಳು ಪೋಷಕರು ಶಿಕ್ಷಣ ಸಂಸ್ಥೆಯು ಗುರುಗಳ ಆಡಳಿತ ಮಂಡಳಿ ನೇತೃತ್ವದಲ್ಲಿ ಬೆಳಿಗ್ಗೆ ೯:೩೦ ಗಂಟೆಗೆ ವಿ ಐ ಎಸ್ ಎಲ್ ಕಾರ್ಖಾನೆ ಮುಂಭಾಗದಿಂದ ತಾಲೋಕು ಆಡಳಿತ ಕಚೇರಿವರೆಗೂ ವಿ ಐ ಎಸ್ ಎಲ್ ಕಾರ್ಖಾನೆ ಸೆಲ್ ಆಡಳಿತದಲ್ಲಿ ಉಳಿಯಬೇಕೆಂದು ಬೃಹತ್ ಪ್ರತಿಭಟನೆ ನೆಡೆಸಿದ್ದರು ಈ ಕಾರ್ಯಕ್ರಮಕ್ಕೆ ಎಲ್ಲ ನಾಗರಿಕರು ಸಂಘ ಸಂಸ್ಥೆಯವರು ಕೈ ಜೋಡಿಸಿ ಗುತ್ತಿಗೆ ಕಾರ್ಮಿಕರ ಕುಟುಂಬದವರನ್ನ ಕಾಪಾಡಬೇಕೆಂದು ಮನವಿ ಮಾಡಿಕೊಂಡರು
ಈ ಸಮಯದಲ್ಲಿ ಮಾತನಾಡಿದ ಶ್ರೀ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಉಕ್ಕಿನ ನಗರ ಉಕ್ಕಿನ ನಗರ ಹಾಗೆ ಉಳಿಯಬೇಕು ಸ್ಥಗಿತವಾಗಿ ತುಕ್ಕಿನ ನಗರ ಹಾಗಿ ಉಳಿಯೋದು ಬೇಡ
ಈ ದಿನ ನಮ್ಮ ಖಾಸಗಿ ವಿದ್ಯಾಸಂಸ್ಥೆಯ ಎಲ್ಲ ಮಕ್ಕಳು ಏಕೆ ಬಂದಿದ್ದಾರೆ ಎಂದರೆ ನಾವೆಲ್ಲ ವಿ ಐ ಎಸ್ ಎಲ್ ಋಣದಲ್ಲಿ ಇದ್ದೇವೆ ಎಲ್ಲ ಸಂಸ್ಥೆಗಳು ಏನಾದರು ವಿ ಐ ಎಸ್ ಎಲ್ ಮುಚ್ಚಿದರೆ ನಮ್ಮ ಮುಂದಿನ ಮಕ್ಕಳಾ ಭವಿಷ್ಯದ ಬಗ್ಗೆ ಚಿಂತಿಸಬೇಕಾಗುತ್ತದೆ ನಮ್ಮ ಮುಂದಿನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾದರೆ ನಮ್ಮ ಮಕ್ಕಳ ಭವಿಷ್ಯ ಕಾಪಾಡಿಕೊಳ್ಳಬೇಕಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಂಡಿತಾವಾಗಿ ಈ ಮನವಿಯನ್ನು ಮಾಡಿಕೊಡುತ್ತಾರೆ ಕೊಡಲೇಬೇಕು ರಾಜ್ಯ ಮತ್ತು ಕೇಂದ್ರ ಸರ್ಕಾರ ಮನಸು ಮಾಡಿ ಭದ್ರಾನದಿಯ ದಡದಲ್ಲಿ ಇರುವ ವಿ ಐ ಎಸ್ ಎಲ್ ಉಳಿಸಿ ಕೋಡಿ.
ಇದು ಮಾತ್ರ ನಮ್ಮೆಲ್ಲ ಖಾಸಗಿ ವಿದ್ಯಾ ಸಂಸ್ಥೆ ಮತ್ತು ಎಲ್ಲ ಭದ್ರಾವತಿ ಜನತೆಯ ಅಪೇಕ್ಷೆಯು ಹೌದು ಎಂದು ಹೇಳಿದರು
ವಿ ಐ ಎಸ್ ಎಲ್ ನ್ನು ಉಳಿಸಿಕೊಡಿ ಎಂದು ಖಾಸಗಿ ವಿದ್ಯಾಸಂಸ್ಥೆಯು ಮನವಿಯನ್ನು ತಹಸೀಲ್ದಾರ್ ಕೊಟ್ಟಿದ್ದಾರೆ ಅವರು ಮನಸು ಮಾಡಿ ಇದನ್ನ ಜಿಲ್ಲಾಧಿಕಾರಿಗಳಿಗೆ ರಾಜ್ಯಕ್ಕೆ ರಾಷ್ಟ್ರಕ್ಕೆ ತಕ್ಷಣ ರವಾನೆ ಮಾಡಿ. ಖಂಡಿತವಾಗಿ ೩೧ ನೇ ತಾರೀಕು ಮುಚ್ಚುವ ಯೋಚನೆ ಮಾಡಿದ್ದರೋ ಅದು ಖಂಡಿತವಾಗಿಯು ಸಾಧ್ಯವಿಲ್ಲ ಮಾಡಿದ್ದಾರೆ ಕೆಲವು ಜನಗಳಿಗೆ ಮಾತ್ರವಲ್ಲ ಇಡಿ ಭದ್ರಾವತಿ ಆಪತ್ತು ಕಾದಿದೆ ಎಂದರು