Site icon TUNGATARANGA

ಫೆ.20 ಮತ್ತು 21ರಂದು ಕರ್ನಾಟಕ ಸಂಘದಲ್ಲಿ ಮಲೆನಾಡು ಸಾಂಸ್ಕøತಿಕ ಕಲಾ ಉತ್ಸವ

ಶಿವಮೊಗ್ಗ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಫೆ.20 ಮತ್ತು 21ರಂದು ಮಲೆನಾಡು ಕರ್ನಾಟಕ ಪ್ರಾದೇಶಿಕ ಸಾಂಸ್ಕøತಿಕ ಕಲಾ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ರಮೇಶ್ ಸುರ್ವೆ ಹೇಳಿದರು.

ಅವರು ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾದೇಶಿಕ, ಸಾಂಸ್ಕøತಿಕ ಕಲಾ ಉತ್ಸವವು ನಮ್ಮ ಅಕಾಡೆಮಿಯ ಸಾಂಸ್ಕøತಿಕ ಪಯಣದಲ್ಲಿ 66ನೇ ಕಾರ್ಯಕ್ರಮವಾಗಿದೆ. ಇಡೀ ರಾಜ್ಯ ಮತ್ತುರಾಷ್ಟ್ರ ಮಟ್ಟದ ಪ್ರತಿಭೆಗಳನ್ನು ಗುರುತಿಸಿ ಸಾಂಸ್ಕøತಿಕ ಪರಂಪರೆಯನ್ನು ನಾಡಿನ ಮೂಲೆಮೂಲೆಗೆ ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಸಂಸ್ಥೆ ಇದುವರೆಗೂ ಸುಮಾರು 1ಲಕ್ಷಕ್ಕೂ ಹೆಚ್ಚು ಪ್ರತಿಭೆಗಳನ್ನು, ಸಾಧಕರನ್ನುಗುರುತಿಸಿ ಗೌರವ ನೀಡಿದೆ ಎಂದರು.

ಈ ಬಾರಿ ಶಿವಮೊಗ್ಗದಲ್ಲಿ ಈ ಕಲಾ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ರಾಷ್ಟ್ರೀಯ ಕಿನ್ನರ ಹಬ್ಬ ರಾಷ್ಟ್ರೀಯ ನೃತ್ಯ ಕಲಾಮೇಳ, ನಾಟಕಗಳ ಪ್ರದರ್ಶನ, ಉಪನ್ಯಾಸ ಮಾಲಿಕೆ, ಸಂವಾದ, ಕವಿಗೋಷ್ಠಿ, ಸುಗಮ ಸಂಗೀತ, ಚಿತ್ರಕಲಾ ಪ್ರದರ್ಶನ, ಜ್ಞಾಪಕ ಶಕ್ತಿ, ಪುಟಾಣಿಗಳ ಭಾಷಣ, ಮಕ್ಕಳ ಯಕ್ಷಗಾನ ನೃತ್ಯ, ಭರತನಾಟ್ಯ, ಡ್ಯಾನ್ಸ್, ಹಿಂದೂಸ್ಥಾನಿ ಗಾಯನ ವಿಚಾರ ಸಂಕಿರಣ ಮುಂತಾದ ಹಲವು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಫೆ.20ರಂದು ಬೆಳಿಗ್ಗೆ 9-30ಕ್ಕೆ ಬೆಳಗಾವಿ ಜಿಲ್ಲೆ ಹಿರೇಮಠದ ಡಾ. ಕಲ್ಮೇಶ್ವರ ಸ್ವಾಮಿಗಳು ಸಾಂಸ್ಕøತಿಕ ಪ್ರತಿಭೋತ್ಸವವನ್ನು ಉದ್ಘಾಟಿಸಲಿದ್ದಾರೆ. ಉಡುಪಿಯ ದುರ್ಗಾ ಆದಿಶಕ್ತಿ ಕ್ಷೇತ್ರದ ಪೀಠಾಧ್ಯಕ್ಷ ರಮಾನಂದ ಗುರೂಜಿ ಸಾನಿಧ್ಯ ವಹಿಸಲಿದ್ದು, ಪತ್ರಕರ್ತ ಬಿ. ಗಣಪತಿ ಕಾರ್ಯಕ್ರಮ ಉದ್ಘಟಿಸುವರು ಎಂದರು.

ನಂತರ ಬದರೀನಾರಾಣ ಪುರೋಹಿತ್ ಅವರಿಂದ ವ್ಯಂಗ್ಯಚಿತ್ರ ಪ್ರದರ್ಶನ, ಛಾಯಾಗ್ರಾಹಕ ಸುಹಾಸ್ ಅವರಿಂದ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ `ಕುದುರೆ ಬಂತು ಕುದುರೆ’ ನಾಟಕ ಪ್ರದರ್ಶನ ಹಾಗೂ ಸಂಜೆ 7 ಗಂಟೆಗೆ `ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ ನಡೆಯಲಿದೆ. ಈ ಮಧ್ಯದಲ್ಲಿ ಕರ್ನಾಟಕ ಆರ್ಯಭಟ ಪ್ರಶಸ್ತಿ ಪಡೆದ ಸಂಖ್ಯಾ ಶಾಸ್ತ್ರ ಪ್ರವೀಣ ಬಸವರಾಜ್ ಉಮ್ರಾಣಿ ಅವರೊಂದಿಗೆ ಸಂವಾದ ನಡೆಯಲಿದ್ದು, ಉಪನ್ಯಾಸ ಮಾಲಿಕೆ, ಕವಿಗಳ ಕಣ್ಣಲ್ಲಿ ಮಲೆನಾಡು ಕರ್ನಾಟಕ ಎಂಬ ಹೆಸರಿನಲ್ಲಿ ಕವಿಗೋಷ್ಠಿ ನಡೆಯಲಿದೆ ಎಂದರು.

21ರಂದು ಬೆಳಿಗ್ಗೆ 9-30ಕ್ಕೆ ವಿವಿಧ ಜಿಲ್ಲೆಯ ಗಾಯಕರಿಂದ ಜಾನಪದ, ತತ್ವಪದ,ಲಂಬಾಣಿ ಗಾಯನ, ಸುಗಮ ಸಂಗೀತ, ಕಾರ್ಯಕ್ರಮ ನಡೆಯಲಿದ್ದು, ಯಾಕೂಬ್ ಖಾನ್ ಅವರ ಚಿತ್ರಕಲಾ ಪ್ರದರ್ಶನ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ಅರ್ಜುನ ಇಟಗಿ ಅವರಿಂದ ಚಲನಚಿತ್ರ ಗೀತೆಗಳ ವಿಶೇಷ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಜ್ಞಾಪಕ ಶಕ್ತಿ, ಪುಟಾಣಿಗಳಿಂದ ಕುವೆಂಪು ಹಾಗೂ ಸ್ವಾಮಿ ವಿವೇಕಾನಂದರ ಕುರಿತು ಭಾಷಣ ನಡೆಯಲಿದೆ ಎಂದರು.

ಹಾವೇರಿಯ ಗುರು ಮಹಾಂತಯ್ಯ ಶಾಸ್ತ್ರಿಗಳಿಂದ ಹಿಂದಸ್ಥಾನಿ ಗಾಯನ, ಶಿವಮೊಗ್ಗ ಜಿಲ್ಲೆಯ ಅಭಿನವ ಕಲಾ ಕೇಂದ್ರದ ಮಕ್ಕಳಿಂದ ಚಲನಚಿತ್ರ ನೃತ್ಯ ಪ್ರದರ್ಶನ, ಹಾಸನದ ರಾಮನಾಥಪುರದ ಡ್ಯಾನ್ಸ್ ಅಕಾಡೆಮಿ ಮಕ್ಕಳಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.

ಸಂಜೆ 5ಕ್ಕೆ ಮಲೆನಾಡು ಕರ್ನಾಟಕ ಪ್ರಾದೇಶಿಕ ಅಸಮತೋಲನ ಒಂದು ಚಿಂತನೆ(ಹಾಸನ, ಚಿಕ್ಕಮಗಳೂರು, ಶಿವಮೊಗ್ಗ) ವಿಶೇಷ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಉದಯರವಿ, ಮಂಜುನಾಥ ಬೆಳವಾಡಿ, ಶುಭಾ ಮರವಂತೆ ಮುಂತಾದವರು ವಿಷಯ ಮಂಡನೆ ಮಾಡುವರು. ಸಂಜೆ 6ಕ್ಕೆ ವಿಚಾರ ಸಂಕಿರಣ ಮುಂದುವರಿಯಲಿದ್ದು, ವಿರಕ್ತ ಮಠದ ಗುರುಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಇದರಲ್ಲಿ ಭಾಗವಹಿಸುವರು ಎಂದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಸಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಬಿ. ಗಣಪತಿ ಇದ್ದರು.

Exit mobile version