ವಿಶೇಷ ವರದಿ .ಎ.ರವಿ
ಶಿವಮೊಗ್ಗ,
ಇಲ್ಲಿನ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೌಚಾಲಯಗಳನ್ನು ಬಳಸುವುದಿರಲಿ.,ನೋಡಲು ಹಾಗೂ ಅದನ್ನು ಒಪ್ಪಲು ಸಾದ್ಯವಿಲ್ಲದಷ್ಟು ಅಸಹ್ಯ ಎನಿಸುತ್ತದೆ. ಯಾವುದೇ ರೀತಿಯಾಗಿ ಸ್ವಚ್ಛತೆ ಕಾಣದೇ ಅದೆಷ್ಷು ತಿಂಗಳು ಆಗಿದೆಯೋ ಏನೋ ಗೊತ್ತಿಲ್ಲ ಎಂದು ಇಲ್ಲಿನ ವಿಧ್ಯಾರ್ಥಿಗಳು ಅರೋಪಿಸಿದ್ದಾರೆ.
ಈ ನಗರದ ಪ್ರತಿಷ್ಠಿತ ಕಾಲೇಜು ಎಂದು ಹೆಸರು ಪಡೆದಿರುವ ಈ ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಓದುತ್ತಿದ್ದು, ವಿದ್ಯಾರ್ಥಿ ನಿಯರ ಗೋಳು ಹೇಳತೀರದಾಗಿದೆ.
ಇಲ್ಲಿನ ಶೌಚಾಲಯಗಳು ಯಾವುದೇ ರೀತಿಯ ಬಾಗಿಲು ಸಹ ಹೊಂದದೇ ಕನಿಷ್ಟ ಪಕ್ಷ ಸ್ವಚ್ಚತಾ ಕಾರ್ಯವನ್ನು ಪ್ರಾಂಶುಪಾಲರಾದ ವಿಷ್ಟುಮೂರ್ತಿ ರವರು ಮಾಡಿಸದೆ ಸುಮ್ಮನೇ ಕುಳಿತ್ತಿದ್ದಾರೆ. ಕೇಳಿದರೆ ನೆಪಮಾತ್ರದ ಹಾರಿಕೆ ಉತ್ತರ ನೀಡುತ್ತಾರೆಂದು ಆರೋಪಿಸಲಾಗಿದೆ.
ಇಲ್ಲಿಗೆ ಭೇಟಿ ನೀಡಿದ ಪತ್ರಿಕೆ ವರದಿಗಾರರು ಕೇಳಿದ ಪ್ರಶ್ನೆ ಗೆ
ಸರ್ಕಾರದಿಂದ ಯಾವುದೇ ರೀತಿಯ ಅನುದಾನವೂ ಸಹ ದೊರೆಯುತ್ತಿಲ್ಲ ಎಂದ ಪ್ರಾಂಶುಪಾಲರು ಸರ್ಕಾರಕ್ಕೆ ಮನವಿಯನ್ನು ಸಹ ಮಾಡದೆ ತಮಗೆ ಸಂಬಂಧವಿಲ್ಲದಂತೆ ಉತ್ತರ ನೀಡಿದರು. ಕನಿಷ್ಟ ಪಕ್ಷ ಕಾಲೇಜಿನ ಅಧ್ಯಕ್ಷರು ಹಾಗೂ ಶಿವಮೊಗ್ಗದ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇತ್ತ ಕಡೆ ಗಮನ ಹರಿಸಿ ಕಾಲೇಜಿನ ವಿಧ್ಯಾರ್ಥಿಗಳ ಅರೋಗ್ಯ ದೃಷ್ಟಿಯಿಂದ ಕೊಳೆತು ನಾರುತ್ತಿರುವ ಇಲ್ಲಿನ ಶೌಚಾಲಯದ ಸ್ವಚ್ಚತೆ ಮಾಡಿಸಲು ವಿದ್ಯಾರ್ಥಿಗಳು ವಿನಂತಿಸಿದರು. ಸರ್ಕಾರಿ ಶಾಲೆ ಕಾಲೇಜೆಂದರೆ ಹೀಗೇನಾ?