Site icon TUNGATARANGA

ಆಟ-ಪಾಠ ಎರಡನ್ನು ಸಮನಾಗಿ ಪ್ರೋತ್ಸಾಹಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ

ವಿದ್ಯಾರ್ಥಿ ಗಳನ್ನು ಆಟ-ಪಾಠ ಎರಡೂ ವಿಷಯಗಳಲ್ಲಿ ಸಮನಾಗಿ ಪ್ರೋತ್ಸಾಹಿಸಬೇ ಕೆಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನ ನಾಥ ಸ್ವಾಮೀಜಿ ಹೇಳಿದರು.


ನಗರದ ಗುರುಪುರ ಬಡಾವಣೆ ಯಲ್ಲಿರುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಬಿಜಿ ಎಸ್ ಶಾಲೆಯ ಕ್ರೀಡಾಂಗಣ ದಲ್ಲಿ ನಡೆದ ಪೋಷಕರ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಕೇವಲ ಒಂದು ವಿಷಯದಲ್ಲಿ ಮಾತ್ರ ಮಕ್ಕಳನ್ನು ಪ್ರೋತ್ಸಾಹಿಸಿದರೆ ಸಾಲದು, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಆಟ-ಪಾಠ ಎರಡೂ ಕೂಡ ಸಮನಾಗಿ ಬೇಕಾಗುತ್ತದೆ ಎಂದು ಹೇಳಿದರು.
ಮಗು ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತದೆಯೋ, ಆ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ಕೊಡಬೇಕು.
ದುರಂತವೆಂದರೆ ನಮ್ಮ ಪೋಷಕರು ತಮ್ಮ ಮನದ ಆಸೆಯನ್ನು ಮಗುವಿನ ಮೇಲೆ ಹೇರುತ್ತಿ ದ್ದಾರೆ. ಇದರಿಂದ ಮಗು ತನ್ನ ಆಸಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಶಿಕ್ಷಕರೂ ಕೂಡ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ರ‍್ಯಾಂಕ್ ಬರುವುದರಿಂದ ಮಗು ತನ್ನ ಜೀವನವನ್ನು ಭದ್ರ ಮಾಡಿಕೊಂಡಂತಾಗುತ್ತದೆ. ಆದರೆ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೇರಿದರೆ ನಿಮ್ಮ ಮಕ್ಕಳು ವಿಶ್ವದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ. ಅದರ ಹಿರಿಮೆ ನಿಮಗೆ ಸಲ್ಲುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ, ಆ ಮೂಲಕ ವಿಶ್ವದಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರಿಸಲು ಕೈಜೋಡಿಸಿ ಎಂದು ಕಿವಿ ಮಾತು ಹೇಳಿದರು.


ಪ್ರಧಾನ ಮಂತ್ರಿಯಾದರೂ ಸಹ ದೇಶಕ್ಕೆ ಸೀಮಿತರಾಗುತ್ತಾರೆ. ಒಬ್ಬ ಕ್ರೀಡಾಪಟು ವಿಶ್ವದ ಆಸ್ತಿ ಯಾಗುತ್ತಾನೆಇದರ ಸೂಕ್ಷ್ಮತೆಯನ್ನು ಪ್ರತಿಯೊಬ್ಬರೂ ಕೂಡ ಅರಿಂii ಬೇಕಾಗಿದೆ ಎಂದ ಅವರು, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಭಾರತ ರತ್ನ ಪ್ರಶಸ್ತಿಗೂ ಕೂಡ ಭಾಜನರಾಗುವ ಅವಕಾಶವಿದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯ ದರ್ಶಿಗಳಾದ ಸದ್ಗುರು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕರಗಳಾದ ಹಿರಣ್ಣಯ್ಯ ಹೆಗಡೆ ಅವರು, ವಾಸಪ್ಪ ಗೌಡ ಅವರು, ಸತೀಶ್ ಡಿ.ವಿ ಅವರು, ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮುಖ್ಯೋ ಪಾಧ್ಯರಾದ ರಮೇಶ್ ರವರು, ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗುರುಪುರ ಪ್ರಾಂಶು ಪಾಲರಾದ ಸುರೇಶ್ ರವರು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

Exit mobile version