Site icon TUNGATARANGA

ಸಾಗರ / ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ/ ಹರ‍್ಯಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಕುಸ್ತಿಪಟುಗಳು ಭಾಗಿ/ ಸಾಗರದ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಆಯೋಜನೆ

ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರಾಪ್ರಯುಕ್ತ ಸಮಿತಿ ವತಿಯಿಂದ ಆಯೋಜಿಸಿರುವ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ನಡೆಯಲಿದೆ.
ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ದೇಶದ ವಿವಿಧರಾಜ್ಯದ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದು, ನುರಿತತೀರ್ಪುಗಾರರ ನೇತೃತ್ವದಲ್ಲಿ ಘಟಾನುಘಟಿಗಳ ಕುಸ್ತಿ ಪಂದ್ಯಗಳು ನಡೆಯಲಿವೆ. ಮೊದಲ ದಿನವೇ ನೂರಾರು ಕುಸ್ತಿಪಟುಗಳು ಭಾಗವಹಿಸಿದ್ದರು.ಮೊದಲ ದಿನದ ಪಂದ್ಯಗಳು ರೋಚಕ ಹಣಾಹಣಿಯಿಂದ ನಡೆದವು.


ಫೆ.೧೦ರಿಂದ ಕುಸ್ತಿ ಪಂದ್ಯಾವಳಿ ಆರಂಭವಾಗಿದ್ದು, ಶನಿವಾರ ಹಾಗೂ ಭಾನುವಾರ ಸಹ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಕುಸ್ತಿಪಟುಗಳ ಪಂದ್ಯಗಳು ನಡೆಯಲಿವೆ. ಎರಡು ದಿನ ಮಧ್ಯಾಹ್ನ ೩ರಿಂದ ರಾತ್ರಿ ೯ರವರೆಗೂ ಕುಸ್ತಿ ಪಂದ್ಯಗಳು ನಡೆಯಲಿವೆ. ವಿವಿಧ ರಾಜ್ಯಗಳಿಂದ ಆಗಮಿಸಿರುವ ಕುಸ್ತಿಪಟುಗಳಿಗೆ ಜಾತ್ರಾ ಸಮಿತಿ ವತಿಯಿಂದ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
ಹರ‍್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಸ್ತಿ ಪಂದ್ಯಗಳಲ್ಲಿ ಗಮನ ಸೆಳೆದಿದ್ದ ಕುಸ್ತಿಪಟುಗಳು ಆಗಮಿಸಿದ್ದರು. ಮಹಾರಾಷ್ಟ್ರದರಾಮ್, ಓಮಾಂಕ್ಷ್, ಹರ‍್ಯಾಣದ ಬಂಟಿ, ತೇಜು ಸೇರಿದಂತೆ ವಿವಿಧ ಕುಸ್ತಿಪಟುಗಳು ಆಗಮಿಸಿದ್ದರು.


ಮೊದಲ ದಿನದಂದುಶಿಕಾರಿಪುರದ ರಾಘು, ಚಂದ್ರು, ದಾವಣಗೆರೆರಾಕಿ, ಲಕ್ಷ್ಮಣ್ ಬೊಮ್ಮನಕಟ್ಟೆ, ಮಧು ಭದ್ರಾವತಿ, ಶಿವಮೊಗ್ಗ ವಿನಯ ಭಗತ್ ಸೇರಿದಂತೆ ಶಿವಮೊಗ್ಗ ಜಿಲ್ಲೆ, ದಾವಣಗೆರೆಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಕುಸ್ತಿಪಟುಗಳು ಭಾಗವಹಿಸಿದ್ದರು.
ವಿಜೇತರಿಗೆ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿಯ ಗದೆ ಸೇರಿದಂತೆ ವಿಶೇಷ ನಗದು ಬಹುಮಾನಹಾಗೂ ಪ್ರಶಸ್ತಿ ಪತ್ರನೀಡಲಾಗುತ್ತಿದೆ. ಶ್ರೀ ಮಾರಿಕಾಂಬ ಜಾತ್ರಾಸಮಿತಿ ಕುಸ್ತಿ ಸಂಚಾಲಕರಾಗಿಎಸ್.ಅಶೋಕ್, ಸಹಸಂಚಾಲಕರಾಗಿ ಎಂ.ಎಸ್.ಶಶಿಕಾಂತ್ ಮತ್ತುಜಗನ್ನಾಥ್‌ಜೇಡಿಕುಣಿಕಾರ್ಯ ನಿರ್ವಹಿಸುತ್ತಿದ್ದಾರೆ.


ಸಾಗರದ ಮಾರಿಕಾಂಬ ಜಾತ್ರೆ ವೇಳೆಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಮೊದಲ ದಿನವೇ ಸಾವಿರಾರುಜನರು ಆಗಮಿಸಿದ್ದರು.ರಾಜ್ಯದ ವಿವಿಧಕಡೆಯಿಂದ ಕುಸ್ತಿಪ್ರೇಮಿಗಳು ಆಗಮಿಸಿದ್ದರು.
ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತ ಕುಸ್ತಿಪಟುಗಳಿಗೆ ಬೆಳ್ಳಿ ಬಹುಮಾನ ಹಾಗೂ ವಿಶೇಷ ನಗದು ಬಹುಮಾನ ನೀಡಲಾಗುತ್ತಿದೆ.೨೦೦ ಬೆಳ್ಳಿ ಪದಕ, ಬೆಳ್ಳಿ ಬಳೆ,ಬೆಳ್ಳಿ ಗದೆ ಪಂದ್ಯಗಳು ನಡೆಯಲಿವೆ. ಒಂದು ಸಾವಿರರೂ.೨೫-೫೦ ಸಾವಿರರೂ.ವರೆಗಿನ ಪಂದ್ಯಗಳು ನಡೆಯಲಿವೆ.
ಕೋಟ್
ಸಾಗರದಶ್ರೀ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿಆಯೋಜಿಸುವ ಕುಸ್ತಿ ಪಂದ್ಯಾವಳಿಗೆ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಆಗಮಿಸಿದ್ದಾರೆ.ಮೂರು ದಿನಗಳ ಕುಸ್ತಿ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆಯಲುಜಾತ್ರಾ ಸಮಿತಿಅಗತ್ಯ ವ್ಯವಸ್ಥೆ ಕಲ್ಪಿಸಿರುವುದು ಅಭಿನಂದನೀಯ.
| ಕೆ.ಎನ್.ಗುರುಮೂರ್ತಿ, ಎಂಎಡಿಬಿ ಅಧ್ಯಕ್ಷ

Exit mobile version