Site icon TUNGATARANGA

ಸಾಗರ / ಅದ್ದೂರಿಯಾಗಿ ವಿಜಂಭೃಣೆಯಿಂದ ನಡೆದ ತಾಯಿ ಮಾರಿಕಾಂಬೆ ಜಾತ್ರೆಗೆ ಎಲ್ಲರ ಪಾತ್ರ ಪ್ರಮುಖ

ಸಾಗರ : ಮಾರಿಕಾಂಬಾ ಜಾತ್ರೆ ಯಶಸ್ಸಿನಲ್ಲಿ ಎಲ್ಲರ ಪಾತ್ರ ಪ್ರಮುಖವಾಗಿದೆ. ಎಲ್ಲರ ಆಶಯಗಳ, ಪ್ರೀತಿಯ ದೇವಿ ಮಾರಿಕಾಂಬೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ತಿಳಿಸಿದರು.


ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಮಾರಿಕಾಂಬಾ ಜಾತ್ರೆ ಅಂಗವಾಗಿ ಹಮ್ಮಿಕೊಂಡಿರುವ ಅನ್ನ ಸಂತರ್ಪಣೆಗೆ ಕುಟುಂಬದ ಪರವಾಗಿ ೧.೫೦ ಲಕ್ಷ ರೂ. ದೇಣಿಗೆ ನೀಡಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರೆ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ ಉಚಿತವಾಗಿ ಅನ್ನ ಸಂತರ್ಪಣೆ ಮಾಡುವ ಮೂಲಕ ಹಸಿದವರ ನೆರವಿಗೆ ವ್ಯವಸ್ಥಾಪಕ ಸಮಿತಿ ಅರ್ಹನಿಶಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ವಾಸ ಮಾಡುತ್ತಿರುವ ನನ್ನ ಮಕ್ಕಳಾದ ಕವಿತಾ ಸುರಾನ ಮತ್ತು ಸಮತಾ ರಾವ್ ಅನ್ನಸಂತರ್ಪಣೆಗೆ ಒಂದೂವರೆ ಲಕ್ಷ ರೂ. ದೇಣಿಗೆ ನೀಡುವ ಮೂಲಕ ಒಂದು ದಿನದ ಸಂತರ್ಪಣೆ ಖರ್ಚುವೆಚ್ಚ ನಿಭಾಯಿಸಿದ್ದಾರೆ. ನನ್ನ ಮಕ್ಕಳಿಬ್ಬರು ಅಮೇರಿಕಾದಲ್ಲಿದ್ದರೂ ಜಾತ್ರೆ ಸಂದರ್ಭದಲ್ಲಿ

ಬಂದು ಅಮ್ಮನವರ ದರ್ಶನ ಮಾಡಿ ಹೋಗುತ್ತಾರೆ. ಅಂತಹ ಅವಿನಾವಭವ ಸಂಬಂಧ ಮಾರಿಕಾಂಬಾ ಜಾತ್ರೆಯೊಂದಿಗೆ ನಮ್ಮ ಕುಟುಂಬ ಹೊಂದಿದೆ ಎಂದರು.
ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷ ಸಹ ಒಂಬತ್ತು ದಿನಗಳ ಕಾಲ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಪ್ರತಿದಿನ ಸಾವಿರಾರು ಭಕ್ತಾದಿಗಳು ಊಟವನ್ನು ಮಾಡುತ್ತಿದ್ದಾರೆ. ಒಂದು ದಿನದ ಊಟದ ಖರ್ಚನ್ನು ವಿಧಾನ ಪರಿಷತ್ ಮಾಜಿ ಸದಸ್ಯರಾದ ಪ್ರಫುಲ್ಲಾ ಮಧುಕರ್ ವಹಿಸಿಕೊಳ್ಳುವ ಮೂಲಕ ಧಾರ್ಮಿಕ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.


ವ್ಯವಸ್ಥಾಪಕ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ಕವಿತಾ ಸುರಾನ, ಸಮತಾ ರಾವ್ ಮಾತನಾಡಿದರು.
ಅನ್ನ ಸಂತರ್ಪಣೆ ಸಮಿತಿಯ ವಿನಾಯಕ ಗುಡಿಗಾರ್, ನಿತ್ಯಾನಂದ ಶೆಟ್ಟಿ, ಜಾತ್ರಾ ಸಮಿತಿ ಉಪಾಧ್ಯಕ್ಷ ವಿ.ಶಂಕರ್, ಪ್ರಮುಖರಾದ ಕೆ.ವಿ.ಜಯರಾಮ್, ನಟರಾಜ್, ರಮೇಶ್ ಚಂದ್ರಗುತ್ತಿ, ಸಂಪತ್ ಇನ್ನಿತರರು ಹಾಜರಿದ್ದರು.

Exit mobile version