ಅಲ್ಲೊಂದು ಭಾವುಕ ಲೋಕ ಸೃಷ್ಟಿಯಾಗಿತ್ತು, ಎಲ್ಲರ ಮುಖದಲ್ಲಿಯೂ ಒಂದು ಧನ್ಯತಾಭಾವ, ೨೭ ವರ್ಷಗಳ ನಂತರ ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾದ ಮಧುರ ಕ್ಷಣ, ಎಷ್ಟೋ ವರ್ಷಗಳ ಬಳಿಕ ಸಹೋದ್ಯೋಗಿಗಳ ಭೇಟಿ. ಕಲಿಯುವಾಗ ತರಲೆಯಾಗಿದ್ದ ಶಿಷ್ಯರ ವಿನೀತ ಭಾವ, ಕುಚುಕು ಗೆಳೆಯರ ಆಲಿಂಗನ, ಗೆಳತಿಯರ ಸಂಭ್ರಮ, ಮಕ್ಕಳ ಕಲರವ.
ಇದು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ೧೯೯೩-೯೬ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಗಾಜನೂರಿನ ತುಂತುರು ಫಾರಂನಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಕಂಡು ಬಂದು ಅವಿಸ್ಮರಣೀಯ ದೃಶ್ಯ. ಸಹ್ಯಾದ್ರಿ ಕಾಲೇಜಿನಲ್ಲಿ ಕಲಿತು ಈಗ ತಮ್ಮದೇ ಜೀವನ ಕಟ್ಟಿಕೊಂಡಿರುವ ಶಿಷ್ಯವರ್ಗ ತಮಗೆ ಶಿಕ್ಷಣ ನೀಡಿದ್ದ ಗುರುವರ್ಯರನ್ನು ನೆನೆದು ಅವರಿಗೆ ಗೌರವ ಸರ್ಮರ್ಪಣೆ ಮಾಡುವ ಮಾದರಿ ಕಾರ್ಯಕ್ರಮ ಅದಾಗಿತ್ತು.
ರಾಜ್ಯದ ಬೇರೆ ಬೇರೆ ಭಾಗದಲ್ಲಿ ವಿಶ್ರಾಂತ ಜೀವನ ಕಳೆಯುತ್ತಿದ್ದ ಗುರುಗಳನ್ನು ಒಂದು ಕಡೆ ಸೇರಿಸಿದ್ದ ಶಿಷ್ಯವರ್ಗ ಗುರುಗಳ ಪಾದಪೂಜೆ ಮಾಡುವ ಮೂಲಕ ಗುರುನಮನ ಸಲ್ಲಿಸಿದರು. ಈ ಸಂದರ್ಭ ಭಾವುಕರಾದ ಗುರು -ಶಿಷ್ಯರ ಕಣ್ಣಾಲಿಗಳು ತೇವವಾಗಿದ್ದವು. ಶಿಷ್ಯವರ್ಗದ ಪ್ರೀತಿಗೆ ಪ್ರಸನ್ನರಾದ ಗುರುಗಳು ಶಿಷ್ಯರೊಂದಿಗೆ ಮಕ್ಕಳಂತೆ ಬೆರೆತು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ೫೭ ಗುರುಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ೧೯೯೩-೯೬ ನೇ ಸಾಲಿನಲ್ಲಿ ಪ್ರಾಚಾರ್ಯರಾಗಿದ್ದ ಪ್ರೊ.ಎ.ಎಸ್.ಚಂದ್ರಶೇಖರ್ ಅವರು, ನನಗೆ ಮತ್ತೆ ಕಾಲೇಜಿಗೆ ಬಂದ ಅನುಭವ ಆಗಿದೆ. ಸಂಬಂಧಗಳು ಮೌಲ್ಯ ಕಳೆದುಕೊಳ್ಳು ತ್ತಿರುವ ಈ ದಿನಗಳಲ್ಲಿ ಎಲ್ಲಾ ನನ್ನ ಸಹೋ ದ್ಯೋಗಿಗಳನ್ನು ಒಂದೆಡೆ ಸೇರಿಸಿದ್ದೀರಿ. ಇದೊಂದು ಮಾದರಿ ಮತ್ತು ಎಂದೂ ಮರೆಯ ಲಾರದ ಕಾರ್ಯಕ್ರಮ. ಗುರು-ಶಿಷ್ಯ ಪರಂಪರೆ ಇದೇ ರೀತಿ ಮುಂದುವರಿಯಲಿ. ಮುಂದಿನ ಅಲ್ಲೊಂದು ಭಾವುಕ ಲೋಕ ಸೃಷ್ಟಿಯಾಗಿತ್ತು, ಎಲ್ಲರ ಮುಖದಲ್ಲಿಯೂ ಒಂದು ಧನ್ಯತಾಭಾವ, ೨೭ ವರ್ಷಗಳ ನಂತರ ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾದ ಮಧುರ ಕ್ಷಣ, ಎಷ್ಟೋ ವರ್ಷಗಳ ಬಳಿಕ ಸಹೋದ್ಯೋಗಿಗಳ ಭೇಟಿ. ಕಲಿಯುವಾಗ ತರಲೆಯಾಗಿದ್ದ ಶಿಷ್ಯರ ವಿನೀತ ಭಾವ, ಕುಚುಕು ಗೆಳೆಯರ ಆಲಿಂಗನ, ಗೆಳತಿಯರ ಸಂಭ್ರಮ, ಮಕ್ಕಳ ಕಲರವ.
ಇದು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ೧೯೯೩-೯೬ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಗಾಜನೂರಿನ ತುಂತುರು ಫಾರಂನಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಕಂಡು ಬಂದು ಅವಿಸ್ಮರಣೀಯ ದೃಶ್ಯ. ಸಹ್ಯಾದ್ರಿ ಕಾಲೇಜಿನಲ್ಲಿ ಕಲಿತು ಈಗ ತಮ್ಮದೇ ಜೀವನ ಕಟ್ಟಿಕೊಂಡಿರುವ ಶಿಷ್ಯವರ್ಗ ತಮಗೆ ಶಿಕ್ಷಣ ನೀಡಿದ್ದ ಗುರುವರ್ಯರನ್ನು ನೆನೆದು ಅವರಿಗೆ ಗೌರವ ಸರ್ಮರ್ಪಣೆ ಮಾಡುವ ಮಾದರಿ ಕಾರ್ಯಕ್ರಮ ಅದಾಗಿತ್ತು.
ರಾಜ್ಯದ ಬೇರೆ ಬೇರೆ ಭಾಗದಲ್ಲಿ ವಿಶ್ರಾಂತ ಜೀವನ ಕಳೆಯುತ್ತಿದ್ದ ಗುರುಗಳನ್ನು ಒಂದು ಕಡೆ ಸೇರಿಸಿದ್ದ ಶಿಷ್ಯವರ್ಗ ಗುರುಗಳ ಪಾದಪೂಜೆ ಮಾಡುವ ಮೂಲಕ ಗುರುನಮನ ಸಲ್ಲಿಸಿದರು. ಈ ಸಂದರ್ಭ ಭಾವುಕರಾದ ಗುರು -ಶಿಷ್ಯರ ಕಣ್ಣಾಲಿಗಳು ತೇವವಾಗಿದ್ದವು. ಶಿಷ್ಯವರ್ಗದ ಪ್ರೀತಿಗೆ ಪ್ರಸನ್ನರಾದ ಗುರುಗಳು ಶಿಷ್ಯರೊಂದಿಗೆ ಮಕ್ಕಳಂತೆ ಬೆರೆತು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ೫೭ ಗುರುಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ೧೯೯೩-೯೬ ನೇ ಸಾಲಿನಲ್ಲಿ ಪ್ರಾಚಾರ್ಯರಾಗಿದ್ದ ಪ್ರೊ.ಎ.ಎಸ್.ಚಂದ್ರಶೇಖರ್ ಅವರು, ನನಗೆ ಮತ್ತೆ ಕಾಲೇಜಿಗೆ ಬಂದ ಅನುಭವ ಆಗಿದೆ. ಸಂಬಂಧಗಳು ಮೌಲ್ಯ ಕಳೆದುಕೊಳ್ಳು ತ್ತಿರುವ ಈ ದಿನಗಳಲ್ಲಿ ಎಲ್ಲಾ ನನ್ನ ಸಹೋ ದ್ಯೋಗಿಗಳನ್ನು ಒಂದೆಡೆ ಸೇರಿಸಿದ್ದೀರಿ. ಇದೊಂದು ಮಾದರಿ ಮತ್ತು ಎಂದೂ ಮರೆಯ ಲಾರದ ಕಾರ್ಯಕ್ರಮ. ಗುರು-ಶಿಷ್ಯ ಪರಂಪರೆ ಇದೇ ರೀತಿ ಮುಂದುವರಿಯಲಿ. ಮುಂದಿನ