Site icon TUNGATARANGA

ಕ್ರೀಡಾ ಸಂಕೀರ್ಣ ಬದಲು “ಸೈನ್ಸ್ ಮ್ಯೂಸಿಯಂ” ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಆರಂಭ | ವಿಮಾನ ನಿಲ್ದಾಣ ಉದ್ಘಾಟನೆಗೆ ಅಂತಿಮ ಸಿದ್ಧತೆ | ವಿಮಾನ ನಿಲ್ದಾಣ ಸಂತ್ರಸ್ತರಿಗೆ ನಿವೇಶನ | ಭದ್ರಾವತಿ ವಿಐಎಸ್‌ಎಲ್ ಉಳಿಸಲು ಯತ್ನ | ಸಂಸದ ಬಿ.ವೈ.ರಾಘವೇಂದ್ರ

:ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನ್ಯಾಷನಲ್ ಸೈನ್ಸ್ ಮ್ಯೂಸಿಯಂ(ಎನ್‌ಎಸ್‌ಸಿಎಂ) ಆರಂಭಿಸಲಾಗುತ್ತಿದ್ದು, ಇದಕ್ಕೆ ೧೧.೭೦ ಕೋಟಿ ರೂ. ವೆಚ್ಚವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.


ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಖೇಲೋ ಇಂಡಿಯಾ ವತಿಯಿಂದ ಕ್ರೀಡಾ ಸಂಕಿರಣ ಇಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ ಇದಕ್ಕೆ ಪರ ಹಾಗೂವಿರೋಧ ವ್ಯಕ್ತವಾಗಿದ್ದರಿಂದಾಗಿ ಕ್ರೀಡಾ ಸಂಕಿರಣವನ್ನು ಕೈ ಬಿಡಲಾಗಿದೆ. ಆಕಾಡೆಮಿಕ್ ಉದ್ದೇಶದಿಂದ ಸೈನ್ಸ್ ಮ್ಯೂಸಿಯಂ ಆರಂಭಿಸಲಾಗುತ್ತದೆ ಎಂದರು.


ಇದಕ್ಕಾಗಿ ಮೊದಲಿನಿಂದಲೂ ಯತ್ನ ನಡೆಸಲಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ೨ನೇ ವರ್ಗದ ಮ್ಯೂಸಿಯಂ ಆರಂಭಕ್ಕೆ ಅನುಮತಿ ನೀಡಿದೆ. ೧೧.೭೦ ಕೋಟಿ ಸ್ಥಾಪನಾ ವೆಚ್ಚ ಹಾಗೂ ೩.೫೦ ಕೋಟಿ ಒಟ್ಟು ೧೫.೨೦ ಕೋಟಿ ರೂ. ಸರ್ಕಾರ ಮಂಜೂರು ಮಾಡಿದೆ. ಮೊಬೈಲ್ ಆಪ್‌ಮಾಡಲು, ಸಂಶೋಧನಾ ಚಟುವಟಿಕೆ ಕೈಗೊಳ್ಳಲು ಇದು ಸಹಾಯವಾಗಲಿದೆ. ವರ್ಗ ೧ ಕ್ಕೆ ಇದನ್ನು ಉನ್ನತೀಕರಿಸಲು ಯತ್ನಿಸಲಾಗುತ್ತದೆ ಎಂದರು.
ಖೇಲೋ ಇಂಡಿಯಾ ವತಿಯಿಂದ ಕ್ರೀಡಾ ಸಂಕಿರಣವನ್ನು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಪಕ್ಕದಲ್ಲಿ ಸುಮಾರು ೨೫ ಎಕರೆ ಜಾಗವಿದ್ದು, ಅಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ. ಇದು ಸುಮಾರು ೭೦ ಕೋಟಿ ರೂ. ವೆಚ್ಚದ ಯೋಜನೆಯಾಗಿದೆ ಎಂದರು.
ಅಂತಿಮ ಸಿದ್ಧತೆ : ವಿಮಾನ ನಿಲ್ದಾಣ ಉದ್ಘಾಟನೆಗೆ ಸಂತಿಮ ಸಿದ್ಧತೆ ನಡೆದಿದ್ದು, ನಿಲ್ದಾಣಕ್ಕೆ ಪರವಾನಿಗೆ ನೀಡುವ ಡಿಜಿಸಿಎ ಸಂಸ್ಥೆಯವರು ಮುಂದಿನ ವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಫೆ.೨೭ ಕ್ಕೆ ಲೋಕಾರ್ಪಣೆ ಸಂಬಂಧ ಇನ್ನೂ
ಕೇಂದ್ರದಿಂದ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ ಎಂದರು.


ವಿಮಾನ ನಿಲ್ದಾಣ ಸಂಪೂರ್ಣ ನಿರ್ವಹಣೆಯನ್ನು ರಾಜ್ಯ ಸರ್ಕಾರವೇ ಮಾಡಲಿದೆ. ವಿಮಾನ ಮಾರ್ಗಗಳನ್ನು ಇಂಡಿಗೋ ಮತ್ತು ಸ್ಟಾರ್ ಏರ್‌ಲೈನ್ಸ್ ನಿರ್ವಹಿಸಲಿದೆ ಎಂದ ಅವರು, ವಿಮಾನ ನಿಲ್ದಾಣದಲ್ಲಿ ಉದ್ಯೋಗವೆಂದು ಜಾಲತಾಣಗಳಲ್ಲಿ ನಕಲಿ ಜಾಹೀರಾತು ನೀಡಿರುವುದು ಗಮನಕ್ಕೆ ಬಂದಿದೆ. ಇದನ್ನು ನಂಬಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಯುವ ಸಮೂಹ ಮೋಸ ಹೋಗಬಾರದು. ನಕಲಿ ಜಾಹೀರಾತು ನೀಡಿದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದರು.


ವಿಮಾನ ನಿಲ್ದಾಣ ಮುನ್ನ ಸಂತ್ರಸ್ತರಿಗೆ ನಿವೇಶನ ನೀಡಲಾಗುತ್ತದೆ. ನಿವೇಶನಕ್ಕಾಗಿ ಸಂತ್ರಸ್ತರು ಅನಗತ್ಯವಾಗಿ ಪ್ರತಿಭಟನೆ ನಡೆಸುವುದು ಬೇಡ. ನಿವೇಶನ ನೀಡಿಕೆ ಸರ್ಕಾರದಿಂದ ವಿಳಂಬವಾಗಿಲ್ಲ. ಬದಲಾಗಿ ನ್ಯಾಯಾಲಯಕ್ಕೆ ಹೋಗಿರುವುದರಿಂದ ತಡವಾಗಿದೆ ಉದ್ಘಾಟನೆಗು ಮುನ್ನಾ ಎಲ್ಲಾ ಸಂತ್ರಸ್ತರಿಗು ನಿವೇಶನ ಒದಗಿಸಲಾಗುವುದು ಎಂದರು.
ಭದ್ರಾವತಿ ವಿಐಎಸ್‌ಎಲ್ ಉಳಿಸಲು ಯತ್ನ ಮುಂದುವರಿದಿದೆ. ಕಾರ್ಮಿಕರೊಂದಿಗೆ ನಾವಿದ್ದೇವೆ. ಸಂಬಂಸಿದ ಸಚಿವರು ಹಾಗೂ ಅಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದರು. ಶರಾವತಿ ಸಂತ್ರಸ್ತರಿಗು ಕೂಡ ಭೂ ಹಕ್ಕು ನೀಡುವ ವಿಚಾರದಲ್ಲಿ ಎಲ್ಲಾ ಕ್ರಮಕೈಗೊಳ್ಳಲಾಗಿದೆ ಎಂದರು.
ಕಾಯಕವೇ ಕೈಲಾಸ ನಮ್ಮ ಮಂತ್ರವಾಗಿದ್ದು, ವಿಶ್ವದೆ

ಲ್ಲೆಡೆ ಆರ್ಥಿಕ ಸಂಕಷ್ಟ ಇದ್ದರೂ ಆರ್ಥಿಕ ಸಮಚಿತ್ತದ ಬಜೆಟ್‌ನ್ನು ಮಂಡಿಸಲಾಗಿದೆ. ಅಭಿವೃದ್ಧಿಯಲ್ಲಿ ೫ನೇ ಸ್ಥಾನಕ್ಕೇರಿದ್ದೇವೆ. ಯುರೋಪ್ ರಾಷ್ಟ್ರಗಳನ್ನು ಭಾರತ ಹಿಂದಕ್ಕೆ ತಳ್ಳಿದೆ. ಇದೆಲ್ಲ ಪ್ರಧಾನಿಯವರ ದೂರದೃಷ್ಟಿ ಕಾರಣ ಎಂದರು.
ಪಿ.ಎಂ. ಕಲ್ಯಾಣ ಯೋಜನೆಗೆ ೩.೫ ಲಕ್ಷ ಕೋಟಿ ಕಾಯ್ದಿರಿಸಲಾಗಿದೆ. ೧೧ ಕೋಟಿ ಮನೆ ಕಟ್ಟಲು ಸಂಕಲ್ಪ ಮಾಡಲಾಗಿದೆ. ಆಹಾರ ಕ್ಷೇತ್ರಕ್ಕೆ, ಕೃಷಿ ಕ್ಷೇತ್ರಕ್ಕೆ, ಉದ್ಯೋಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಲಾಗಿದ್ದು, ಮುಂದಿನ ೨೫ ವರ್ಷಗಳಲ್ಲಿ ಭಾರತ ಉಜ್ವಲ ನಕ್ಷತ್ರದಂತೆ ಹೊಳೆಯುವ ಗುರಿಯಿಟ್ಟುಕೊಂಡು ಮಧ್ಯಮ, ಬಡವರ್ಗ ಹಾಗೂ ಪರಿಶಿಷ್ಟ ಜಾತಿ ಪಂಗಡಗಳು ಹಾಗೂ ರೈತರಿಗೆ ಅನುಕೂಲವಾಗುವಂತೆ ಬಜೆಟ್ ಮಂಡಿಸಲಾಗಿದ್ದು, ಜಿಡಿಪಿ ೩.೩ ಆಗಲಿದೆ. ಪರಿಸರ ಕಾಳಜಿ ತಂತ್ರಜ್ಞಾನಕ್ಕೆ ಆಧ್ಯತೆ ಹಸಿರು ಉದ್ಯೋಗ, ಸಿರಿಧಾನ್ಯಕ್ಕೆ ಆಧ್ಯತೆ, ಸಾವಯವ ಗೊಬ್ಬರ ಕೃಷಿ, ಶ್ರೀ ಅನ್ನ ಯೋಜನೆ, ಸ್ವಯಂ ಉದ್ಯೋಗಕ್ಕೆ ಆಧ್ಯತೆ, ೮೭ ಲಕ್ಷ ಸ್ತ್ರೀ ಶಕ್ತಿ ಸಂಘಗಳಿಗೆ ೨ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ, ಸಹಕಾರಿ ಕ್ಷೇತ್ರಕ್ಕೆ ಆಧ್ಯತೆ, ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರೂ. ಹಾಗೂ ರೈಲ್ವೆಗೆ ೨.೫ ಲಕ್ಷ ಕೋಟಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ಅನುದಾನ ನೀಡಿದ ಕೇಂದ್ರ ಸರ್ಕಾರಕ್ಕೆ ಮತ್ತು ವಿತ್ತ ಸಚಿವೆ ನಿರ್ಮಲ ಸೀತಾರಾಮ್, ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಶಿವರಾಜ್, ಅಣ್ಣಪ್ಪ, ಬಿ.ಕೆ. ಶ್ರೀನಾಥ್, ಹರಿಕೃಷ್ಣ, ಚಂದ್ರಶೇಖರ್ ಮತ್ತಿತರರು ಇದ್ದರು.

Exit mobile version