Site icon TUNGATARANGA

ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಗೋಧಿ ಸರಬರಾಜು: ಪೋಷಕರ ಆಕ್ರೋಶ

ಹೊಸನಗರ,
ರಾಜ್ಯ ಸರ್ಕಾರ ಅನುಷ್ಟಾನಗೊಳಿಸಿರುವ ಮಹತ್ವಾ ಕಾಂಕ್ಷಿ ಯೋಜನೆಯಾದ ಬಿಸಿಯೂಟ ಯೋಜನೆಗೆ ಸರಬರಾಜು ಮಾಡಲಾದ ಗೋಧಿ ಕಳಪೆ ಮಟ್ಟದಿಂದ ಕೂಡಿದೆ ಎಂದು ಎಸ್.ಡಿ.ಎಂ.ಸಿ ಯವರು ತೀವ್ರ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಈಗಾಗಲೇ ಕೋಡೂರು ಗ್ರಾಪಂ ವ್ಯಾಪ್ತಿ ಸೇರಿದಂತೆ ಹಾಗೂ ತಾಲ್ಲೂಕಿನ ಹಲವು ಸರ್ಕಾರಿ ಹಿರಿಯ, ಕಿರಿಯ ಮತ್ತು ಪ್ರೌಢಶಾಲೆಗಳಿಗೆ ಸರಬರಾಜು ಮಾಡಲಾದ ಬಿಸಿಯೂಟದ ಯೋಜನೆಯ ಗೋಧಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಕಲ್ಲು, ಮಣ್ಣು, ಹಾಳಾದ ಹಾಗೂ ಹುಳು ಹಿಡಿದ ಗೋಧಿ ಯನ್ನು ವಿತರಿಸಲಾಗುತ್ತಿದ್ದು ತಕ್ಷಣ ಈ ಗೋಧಿಯನ್ನು ವಾಪಾಸ್ಸು ಪಡೆಯುವಂತೆ ಸಹ ಎಸ್.ಡಿ.ಎಂ.ಸಿ. ಸಮಿತಿಯವರು ತಮ್ಮ ಅಕ್ರೊಶವನ್ನು ಹೊರಹಾಕಿ ಮಾಧ್ಯಮದವರ ಮುಂದೆ ಕಳಪೆ ಗೋಧಿಯನ್ನು ಹಿಡಿದು ಪ್ರದರ್ಶನ ಮಾಡಿದರು.


ಆಯಾ ಶಾಲೆಗಳಿಗೆ ಆಹಾರ ನಾಗರಿಕ ಸರಬರಾಜು ನಿಗಮದಿಂದ ಪೂರೈಕೆಯಾಗಿದ್ದ ಗೋಧಿ ಗುಣಮಟ್ಟ ಸರಿಯಿಲ್ಲವೆಂದು ಆರೋಪಿಸಿ ಅದನ್ನು ವಾಪಸ್ ಪಡೆದು ಬೇರೆ ಗೋಧಿಯನ್ನು ಆಹಾರ ನಿಗಮದವರು ಕೂಡಲೇ ವರ್ಗಾಯಿಸಿ ಕೊಡಬೇಕೆಂದು ಆಗ್ರಹಿಸಿದರು.

Exit mobile version