Site icon TUNGATARANGA

ನಗರದ ಕೆಲ ಅಡ್ಡೆಗಳಲ್ಲಿ ಪುಂಡರ ಹಾವಳಿ: ಅನಗತ್ಯ ಗಲಭೆ, ಗೊಂದಲ!

ಶಿವಮೊಗ್ಗ,ಸೆ.24:
ನಗರದ ಕೆಲ ಸ್ಥಳಗಳು ಪುಡಾರಿಗಳ ವಾಸಸ್ಥಾನಗಳಾಗಿ, ದಾರಿಹೋಕರನ್ನು ಹಿಂಸಿಸುವ, ಅನಗತ್ಯ ಕಿರಿಕಿರಿ ಉಂಟು ಮಾಡುವ ಸ್ಥಳಗಳಾಗಿ ಪರಿವರ್ತನೆಯಾಗಿರುವುದು ದುರಂತ.
ಮೊನ್ನೆಯಷ್ಟೇ ದೊಡ್ಡಪೇಟೆ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸಿದ ಬೆನ್ನಲ್ಲೇ ಇನ್ನು ಹಲವು ಸ್ಥಳಗಳ ಬಗ್ಗೆ ಓದುಗರು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ನಗರದ ಆದಿಚುಂಚನಗಿರಿ ಶಾಲೆ ಎದುರಿನ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿಗಳ ಮನೆಗಳಿರುವ ಸ್ಥಳ, ವಿನೋಬನಗರ ದಿಂದ ಕಾಶಿಪುರಕ್ಕೆ ಹೋಗುವ ಡೆಕ್ಕನ್ ಎದುರಿನ ಸರ್ಕಲ್, ಆಲ್ಕೊಳ ಸರ್ಕಲ್ ಮುಂದಿನ ಒಂದೆರಡು ಅಡ್ಡೆಗಳು, ಶುಭಮಂಗಳ ಕಲ್ಯಾಣ ಮಂದಿರ ಪಕ್ಕ ಹಾಗೂ ವಿದ್ಯಾನಗರದ ಕಂಟ್ರಿ ಕ್ಲಬ್ ರಸ್ತೆಯ ರಸ್ತೆ ಪಕ್ಕದ ರಸ್ತೆಯ ಸರ್ಕಲ್ ಗಳಲ್ಲಿ ನಿತ್ಯ ನಿರಂತರ ಪುಡಾರಿಗಳ ಅಡ್ಡೆಗಳಾಗಿ ಪರಿವರ್ತನೆಯಾಗಿರುವುದು ದುರಂತದ ಸಂಗತಿ.

ಬುದ್ದಿವಂತರು ಕಸ ಹಾಕೋದಿಂಗೇನಾ?


ಶಿವಮೊಗ್ಗ ನಗರದ ಅತಿ ಮುಖ್ಯ ಸ್ಥಳಗಳಲ್ಲಿ ಒಂದಾಗಿರುವ ಈ ಜಾಗಗಳಲ್ಲಿ ಮದ್ಯಾಹ್ನ 3:00 ನಂತರ ಹಲವರು ಇಲ್ಲಿ ಬೀಡಿ ಸಿಗರೇಟ್ ನಿಂದ ದಿನ ಆರಂಭಿಸುತ್ತಾರೆ. ಹಾಗೆಯೇ ಮಧ್ಯರಾತ್ರಿ ಒಂದರವರೆಗೆ ಕುಡಿಯುವ ಮೂಲಕ ದಿನ ಮುಕ್ತಾಯ ಮಾಡುತ್ತಾರೆಂದರೆ ಅಲ್ಲಿನ ಅಕ್ಕಪಕ್ಕದ ಜನರ ಪರಿಸ್ಥಿತಿಯನ್ನು ಗಮನಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸರ್ವಕಾಲ ಸುಖೀನೋ …


ಮೆಗಾನ್ ಆಸ್ಪತ್ರೆಯ ಆವರಣದ ಮಗ್ಗುಲಲ್ಲಿರುವ ಸ್ಟಾಪ್ ನರ್ಸ್ ಹಾಗೂ ಇತರ ಸಿಬ್ಬಂದಿ ಮತ್ತು ಅಧಿಕಾರಿಗಳ ಮನೆಗಳ ಪರಿಸ್ಥಿತಿಯನ್ನು ಹೇಳುವುದೇ ಬೇಡ. ಕನಿಷ್ಠ ಕಸ ಹಾಕುವ ಸಂಸ್ಕೃತಿಯನ್ನು ಇಲ್ಲಿನ ಬಹಳಷ್ಟು ಜನರು ಕಲಿತಂತೆ ಕಾಣುತ್ತಿಲ್ಲ. ಎಲ್ಲೆಂದರಲ್ಲಿ ಕಸ ಹಾಕುತ್ತಾರೆ ಮನೆಯ ಮುಂದೆ ಮಾತ್ರ ಸ್ವಚ್ಛ ಮಾಡಿಕೊಳ್ಳುವ ಮನೆಯ ನಿವಾಸಿಗಳು ಅಕ್ಕಪಕ್ಕದ ರಸ್ತೆಯ ಒಂದೆಡೆ ಕಸದ ರಾಶಿಯನ್ನು ತುಂಬುತ್ತಾರೆ. ಈ ಭಾಗದಲ್ಲಿ ಸಂಜೆಯಾದರೆ ಸಾಕು ಪುಡಿ ರೌಡಿಗಳು ಇಲ್ಲಿ ಮೊಕ್ಕಾಂ ಹೂಡಿ ಮಧ್ಯರಾತ್ರಿಯವರೆಗೆ ದಾರಿಯಲ್ಲಿ ಓಡಾಡುವವರನ್ನು ಕಿಚಾಯಿಸುತ್ತಾ, ಬೆದರಿಸುತ್ತಾ, ಚುಡಾಯಿಸುತ್ತಾ ಭಯದ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇಲ್ಲಿನ ಸ್ವಚ್ಛದ ಬಗ್ಗೆ ಒಂದು ಸಮಸ್ಯೆಯಾದರೆ, ದಿನವಿಡೀ ಭಯದ ವಾತಾವರಣ ನಿರ್ಮಿಸುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕಿದೆ ಎಂದಿದ್ದಾರೆ.
ಕನಿಷ್ಟ ಆಸ್ಪತ್ರೆ ಸಿಬ್ಬಂದಿಗಳ ಮನೆ ಆವರಣದಲ್ಲಾದರೂ ಕಾಂಪೌಂಡ್ ನಿರ್ಮಿಸಿಕೊಡಲಿ ಎಂದಿದ್ದಾರೆ.
ಅಂತೆಯೇ ಕಾಶಿಪುರ ರಸ್ತೆಯ ಸರ್ಕಲ್ನಲ್ಲಿ ಕೆಲ ಆಟೋ ಚಾಲಕರು ಅನಗತ್ಯ ವಾಗಿ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆಂದು ಅಲ್ಲಿನ ಜನ ಆರೋಪಿಸಿದ್ದಾರೆ. ಕೆಲ ಆಟೋ ಚಾಲಕರ ಜೊತೆ ಒಂದಿಷ್ಟು ಮರಿ ಪುಢಾರಿಗಳು ಇಲ್ಲಿ ಮೊಕ್ಕಾಂ ಹೂಡುತ್ತಾರೆ ಎಂದು ಹೇಳುತ್ತಿದ್ದಾರೆ. ಇಲ್ಲಿನ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಬೇಕಿದೆ. ಈ ಎಲ್ಲಾ ಅಡ್ಡೆಗಳನ್ನು ಬಳಸಿಕೊಳ್ಳುವ ವಿಕೃತ ಮನಸ್ಸುಗಳನ್ನು ಹೊಡೆದೋಡಿಸುವ ಕೆಲಸ ಪೊಲೀಸರಿಂದ ಆಗಬೇಕಿದೆ ಎಂದು ವಿನಂತಿಸಿದ್ದಾರೆ

Exit mobile version