Site icon TUNGATARANGA

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷರಾಗಿ ಪವಿತ್ರ ರಾಮಯ್ಯ ಪದಗ್ರಹಣ


ರೈತರ ಪರ ಹೋರಾಟಕ್ಕೆ ಸಂದ ಗೌರವ | ಅಧಿಕಾರ ಸ್ವೀಕಾರ
ಶಿವಮೊಗ್ಗ, ಸೆ.23:
ಕಳೆದ 30ವರ್ಷದಿಂದ ರೈತ ಸಂಘಟನೆಯಲ್ಲಿ ಸಕ್ರಿಯ ಹೋರಾಟಗಳನ್ನು ನಡೆಸಿದ ಪರಿಣಾಮ ಇಂದು ಕಾಡಾದ ಅಧ್ಯಕ್ಷಳಾಗಿದ್ದೇನೆ ಇದು ಸಂತಸದ ಸಂಗತಿ ಎಂದು ನೂತನ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಅವರು, ಯಾವ ಕಛೇರಿ ಎದುರು ಅತಿ ಹೆಚ್ಚು ಪ್ರತಿಭಟನೆ ಮಾಡಲಾಗಿತ್ತೋ ಆ ಕಛೇರಿಗೆ ಅಧ್ಯಕ್ಷರಾಗಿರುವುದು ವಿಶೇಷ ಎಂದರು.
ಇಂದು ಬೆಳಿಗ್ಗೆ ಕ್ಧ್ಕ್ ಕೊಠಡಿಯಲ್ಲಿ ರಿಜಿಸ್ಟರ್ ಪುಸ್ತಕಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದ ಪವಿತ್ರಾ ರಾಮಯ್ಯರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರೈತರು ಮತ್ತು ರೈತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪವಿತ್ರ ರಾಮಯ್ಯನವರಿಗೆ ರೈತರೊಂದಿಗಿನ ಹಳೆಯ ನಂಟು ಇದ್ದು, ಕಾಡಾದಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಾರಣವಾಗಿದೆ. ರೈತ ಸಂಘದ ಮುಖಂಡ ಎಚ್.ಆರ್ ಬಸವರಾಜಪ್ಪ ಹಸಿರು ಶಾಲು ಹೊದಿಸಿ ಪವಿತ್ರ ರಾಮಯ್ಯನವರಿಗೆ ಗೌರವ ಸೂಚಿಸಿ ಶುಭಕೋರಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್, ರೈತ ಮೋರ್ಚಾದ ಮುಖಂಡ ದತ್ತಾತ್ರಿ, ಗಿರೀಶ್ ಪಟೇಲ್, ಬಳ್ಳಕೆರೆ ಸಂತೋಷ್, ಷಡಾಕ್ಷರಪ್ಪ ಮೊದಲಾದವರು ಪವಿತ್ರ ರಾಮಯ್ಯರವರಿಗೆ ಹೂಗುಚ್ಚ ನೀಡಿ ಶುಭಕೋರಿದರು.

Exit mobile version