Site icon TUNGATARANGA

ಗುಲ್ಬರ್ಗಾದ ಲಂಬಾಣಿ ತಾಂಡಾ ಜನರಿಗೆ ಮೋದಿ ಅವರು ಹಕ್ಕುಪತ್ರ ವಿತರಣೆ ಮಾಡಿರುವುದು ಬರೇ ಬೋಗಸ್ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೂರು

ಗುಲ್ಬರ್ಗಾದಲ್ಲಿ ಲಂಬಾಣಿ ತಾಂಡಾ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕುಪತ್ರ ವಿತರಣೆ ಮಾಡಿರುವುದು ಬರೇ ಬೋಗಸ್. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೂರಿದ್ದಾರೆ.


ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾವೇ ಅಲೆಮಾರಿ, ಅರೆ ಅಲೆಮಾರಿ ಸೇರಿದಂತೆ ಎಲ್ಲಾ ಜನರಿಗೆ ಹಕ್ಕುಪತ್ರ ಕೊಡಲು ಕಾನೂನು ತಿದ್ದುಪಡಿ ಮಾಡಿದ್ದು ನಾನು ಕಂದಾಯ ಸಚಿವನಾಗಿದ್ದಾಗಲೇ. ಇನ್ನು ಆರು ತಿಂಗಳ ಅಕಾರ ಸಿಕ್ಕಿದ್ದರೆ ಎಲ್ಲಾ ಪ್ರಕ್ರಿಯೆ ಮುಗಿದು ಹೋಗುತ್ತಿತ್ತು ಎಂದು ಹೇಳುತ್ತಿರುವುದು ಎಲ್ಲಾ ಸುಳ್ಳು ಎಂದರು.
ಎಲ್ಲಿ ಕೊಟ್ಟಿದ್ದಾರೆ ೫೦ ಸಾವಿರ ಹಕ್ಕುಪತ್ರ ಯಾವ ತಾಲೂಕು ಎಷ್ಟು ಕೊಟ್ಟಿದ್ದಾರೆ ದಾಖಲೆ ಕೊಡಲಿ. ಶಾಸನ ಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾವನೆ ಆಗಿದೆಯಾ? ಮೋದಿ ಅವರು ಬಂದು ಹಕ್ಕುಪತ್ರ ಕೊಟ್ಟಿದ್ದಾರೆ ಎಂಬುದು ಬರೇ ಸುಳ್ಳು. ಒಬ್ಬ ಪ್ರತಿನಿಧಿಯಾಗಿ ಹೀಗೆ ಸುಳ್ಳು ಹೇಳಬಾರದು. ಅಕಾರದ ಕೊನೇ ನಾಲ್ಕು ದಿನಗಳಲ್ಲಿ ಹಕ್ಕುಪತ್ರ ಕೊಟ್ಟಿರುವ ನಾಟಕ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಮನುಷ್ಯ ಹುಟ್ಟಿದ್ದಾನೆ. ಬೆಳೆದಿದ್ದಾನೆ. ಸಾಯ್ತಾನೆ. ಬೆಳೆದ ಜಾಗ ಹಕ್ಕಾಗಿ ಸಿಕ್ಕಾಗ ಮಾನಸಿಕ ನೆಮ್ಮದಿ, ಭದ್ರತೆ ಇರುತ್ತೆ. ಖಂಡಿತವಾಗಿ ಪ್ರತಿಯೊಬ್ಬರಿಗೂ ವಾಸ ಮಾಡುವ ಹಕ್ಕು, ಬೇರೆ ಜಾಗ ಇದ್ದರೆ ಅದನ್ನೂ ಕೊಡುವ, ಮನೆ ಕೊಡುವ ಕೆಲಸ ಮಾಡಬೇಕು. ಸಾಮಾಜಿಕ ಜೀವನದಲ್ಲಿ ಭದ್ರತೆ ಅಗತ್ಯ ಎಂದರು.


ಅರಣ್ಯ‘ಭೂಮಿಯಲ್ಲಿ ವಾಸ ಮಾಡುವವರಿಗೆ ಕೂಡ ಹಕ್ಕುಪತ್ರ ಕೊಡಲು ನಮ್ಮ ಸರ್ಕಾರದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅರಣ್ಯ‘ಭೂಮಿ ಮಂಜೂರಾತಿ ಮಾಡಲು ಕೇಂದ್ರ ಸರ್ಕಾರದ ಅನುಮತಿ ಬೇಕು ಅಂತ ತಿದ್ದುಪಡಿ ಮಾಡಿಟ್ಟಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸುವವರಿಗೆ ಇದರ ಬಗ್ಗೆ ಅರಿವು ಇರಬೇಕು. ಮನುಷ್ಯ ಕಾಡಿನಲ್ಲೇ ವಾಸ ಮಾಡುತ್ತಾ ಬಂದವನು. ಮನುಷ್ಯ ಇದ್ದರೆ ಕಾಡು. ಈಗ ಜನಸಂಖ್ಯೆ ಜಾಸ್ತಿ ಆಗಿದೆ. ಕರೂರು-ಬಾರಂಗಿ ಕಡೆ ಈಗಲೂ ಕಾಡಲ್ಲಿ ವಾಸವಾಗಿದ್ದಾರೆ ಎಂದರು.


ಹಾಗಾಗಿ ‘ಭೂಮಿ ಕೊಡುವುದು ಅನಿವಾರ್ಯ. ಇದರ ಬಗ್ಗೆ ಸಂಸದರು ಗಟ್ಟಿ ಧ್ವನಿಯಲ್ಲಿ ಲೋಕಸಭೆಯಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಇದನ್ನು ಯಾರೂ ಮಾಡುತ್ತಿಲ್ಲ. ಇದು ಕೇವಲ ಕರ್ನಾಟಕದ ಸಮಸ್ಯೆ ಮಾತ್ರ ಅಲ್ಲ. ಬಿಹಾರ ಸೇರಿದಂತೆ ಅನೇಕ ರಾಜ್ಯದಲ್ಲಿ ಸಮಸ್ಯೆ ಇದೆ. ದೇಶದ ಎಲ್ಲಾ ಸಂಸದರೂ ಈ ಬಗ್ಗೆ ಲೋಕಸ‘ಯಲ್ಲಿ ಮಾತನಾಡಬೇಕು. ರಾಜ್ಯ ಸರ್ಕಾರಕ್ಕೆ ಅಕಾರ ಕೊಡಿ ಎಂದು ಕೇಳಬೇಕು ಎಂದು ಒತ್ತಾಯಿಸಿದರು.


‘ಭೂ ಸುಧಾರಣಾ ಕಾಯಿದೆ ಬಗ್ಗೆ ದೇವರಾಜ ಅಸರು ಇದ್ದಾಗ ಹೃದಯ ಬಿಚ್ಚಿ ಮಾತಾಡಿದ್ದೆ. ಏನು ಮಾಡಬೇಕು ಹೇಳು ಎಂದು ಅರಸು ಕೇಳಿದ್ದರು. ಆಗ ಕಾಯಿದೆ ಜಾರಿಗೆ ಬಂತು. ಬದ್ಧತೆ ಇದ್ದರೆ ಮಾಡಲು ಸಾಧ್ಯ. ಈ ಶತಮಾನದಲ್ಲಿ ಕಾಡಾದರೇನು, ಬೀಡಾದರೇನು ಜನರು ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.
ಮಾಜಿ ಶಾಸಕ ಶಿವಮೂರ್ತಿ ನಾಯ್ಕ, ಡಾ.ರಾಜನಂದಿನಿ, ಅನಿತಾ ಕುಮಾರಿ, ಪ್ರಫುಲ್ಲಾ ಮಧುಕರ್ ಇದ್ದರು.

Exit mobile version