Site icon TUNGATARANGA

ರೈತನಿಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದ / ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಾರ್ಯಾಲಯದ ಪೀಠೋಪಕರಣ ಜಪ್ತಿ

ಶಿವಮೊಗ್ಗ,
ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಾರ್ಯಾಲಯದ ಪೀಠೋಪಕರಣ ಹಾಗೂ ಕಂಪ್ಯೂಟರ್‌ಗಳನ್ನು ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಇಂದು ಜಪ್ತಿ ಮಾಡಲಾಯಿತು.
ಗಾಡಿಕೊಪ್ಪದ ವೆಂಕಟೇಶ್ ಎಂಬುವರ ಅನುಪಿನಕಟ್ಟೆ ಸರ್ವೆ ನಂಬರ್ ೭೫ರಲ್ಲಿನ ೫.೧೯ ಎಕರೆ ಜಮೀನು ತುಂಗಾ ಮೇಲ್ದಂಡೆ ಯೋಜನೆಗಾಗಿ ೧೯೯೭ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅಂದು ಎಕರೆಗೆ ೩ ಲಕ್ಷದಂತೆ ಪರಿಹಾರ ನೀಡಲಾಗಿದ್ದು, ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.


ಪರಿಹಾರದ ಮೊತ್ತ ಹೆಚ್ಚಿಸಿದ್ದ ನ್ಯಾಯಾಲಯ ೨.೪೫ ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ ಇದುವರೆಗೂ ಪರಿಹಾರವನ್ನು ನೀಡಿರಲಿಲ್ಲ. ಹೀಗಾಗಿ ಜಮೀನು ಮಾಲೀಕ ವೆಂಕಟೇಶ್ ಪುನಃ ನ್ಯಾಯಾಲಯದ ಮೊರೆಹೋಗಿದ್ದರು.

ಇದನ್ನು ಪುರಸ್ಕರಿಸಿದ ನ್ಯಾಯಾಲಯ ೧೯ ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಆಗಲೂ ಪರಿಹಾರ ನೀಡದಿದ್ದರಿಂದ ನ್ಯಾಯಾಲಯ ಕಚೇರಿಯ ಪೀಠೋಪಕರಣ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡುವಂತೆಯೂ ಆದೇಶಿಸಿತ್ತು. ಇದರಿಂದಾಗಿ ನ್ಯಾಯಾಲಯದ ಅಮೀನರ ನೆರವಿನೊಂದಿಗೆ ೫ ಕಂಪ್ಯೂಟರ್, ೫ ಖುರ್ಚಿ, ೨ ಟೇಬಲ್ ಸೇರಿದಂತೆ ಸುಮಾರು ೧ಲಕ್ಷ ರೂ. ವೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ

Exit mobile version