Site icon TUNGATARANGA

“ಚುಂಚನಗಿರಿಯ ದಿವ್ಯಚೇತನ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ” ಜನುಮದಿನದ ನಿಮಿತ್ತ ವಿಶೇಷ ಬರಹ: ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

ಶ್ರೀ ಡಾ. ಬಾಲಗಂಗಾಧನಾಥ ಮಹಾಸ್ವಾಮೀಜಿ ಕರ್ಮ ಯೋಗಿ ಯಾಗಿ, ಧರ್ಮೋಪದೇಶಕರಾಗಿ, ಲೋಕದ ಸುಖ-ಶಾಂತಿಗಾಗಿ, ಜನರ ಉದ್ದಾರಕ್ಕಾಗಿ, ಆಹಾರ ನಿದ್ರೆಗಳ, ಹಗಲು ರಾತ್ರಿ ಪರಿವೆ ಯಿಲ್ಲದೆ ಪರಿಸರಮಿಸಿದವರು ಪೂಜ್ಯರು. ಪುರಾಣ ಪ್ರಸಿದ್ಧ ಪವಿತ್ರ ಶ್ರೀ ಆದಿಚುಂಚನಗಿರಿ ಸುಕ್ಷೇತ್ರವೂ, ನಿಸರ್ಗ ರಮಣೀಯ ಸುಂದರ ತಾಣವಾಗಿದೆ.


ಸುಮಾರು ೨೦೦೦ ವರ್ಷಗಳ ಪ್ರಾಚೀನ ಗುರು ಪರಂಪರೆಯನ್ನು ಹೊಂದಿರುವ ಶ್ರೀಕ್ಷೇತ್ರವು ಮಯೂರಗಳ ತಾಣವಾಗಿದ್ದು, “ಮಯೂರ ವನ” ಎಂದು ಕರೆಯು ವರು. ಪ್ರಶಾಂತ ವಾತಾವರಣದಿಂದ ಕೂಡಿದೆ. ಪುರಾಣದಲ್ಲಿ ಉಲ್ಲೇಖ ವಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದದು ತ್ರೇತ್ರಾ ಯುಗದಲ್ಲಿ, ಪರಮೇಶ್ವರನೇ ಈ ಪೀಠದ ಸ್ಥಾಪಕನು. ಇಲ್ಲಿ ಸಾಕ್ಷಾತ್ ಪರಶಿವನೇ ಶ್ರೀ ಗಂಗಾಧರೇಶ್ವರನಾಗಿ ನೆಲೆ ನಿಂತಿದ್ದಾನೆ. ನಾಥ ಸಂಪ್ರದಾ ಯದ ದ್ವಾದಶ ಪೀಠಗಲ್ಲಿ ಆದಿ ಪೀಠವೇ ಶ್ರೀ ಆದಿಚುಂಚನಗಿರಿ ಪೀಠ.ಈ ಮಠದ ಗುರು ಪರಂಪರೆಯು ಸುದೀರ್ಘ ವಾದುದು, ಇದುವರೆಗೂ ೭೨ ಧರ್ಮ ಗುರುಗಳು ಮಠಾಧಿಪತಿ ಗಳಾಗಿದ್ದಾರೆ. ಆ ಅಮೃತಗಳಿಗೆ ಶ್ರೀ ಮಠದ ಇತಿಹಾಸದಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಯಿತು.
ಪೂರ್ವಾಶ್ರಮದಲ್ಲಿ ಬಾಲ್ಯದ ಬಾಲಗಂಗಾಧರರು: ರಾಮನಗರ ಜಿಲ್ಲೆ ಬಿಡದಿ ಸಮೀಪದ ಬಾನಂ ದೂರು ಗ್ರಾಮ ಸ್ವಾಮೀಜಿಯವರ ಹುಟ್ಟೂರು. ಶ್ರೀ ಚಿಕ್ಕಲಿಂಗಪ್ಪ, ಶ್ರೀಮತಿ ಬೋರಮ್ಮ ದಂಪತಿಯ ಮೂರನೇ ಮಗುವಾಗಿ ೧೯೪೫ ಜನವರಿ ೧೮ರಂದು ಜನ್ಮ ತಾಳಿದರು. ಬಾಲ ಗಂಗಾಧರ ಪೂರ್ವಾಶ್ರಮದ ಹೆಸರು ಶ್ರೀ ಗಂಗಾಧರಯ್ಯ. ಪುಟ್ಟಲಿಂಗಮ್ಮ, ಶಿವಮ್ಮ ಶ್ರೀಗಳ ಹಿರಿಯ ಸೋದರಿಯರು. ಮರಿ ಸ್ವಾಮಯ್ಯ ಕಿರಿಯ ಸೋದರರಾಗಿ ಶ್ರೀಗಳ ಜೊತೆ ಬಾಲ್ಯದ ಜೀವನ ವನ್ನು ಕಳೆದರು. ಬಾನಂದೂರಿನಲ್ಲಿ ಪ್ರಾಥಮಿಕ, ಬಿಡದಿಯಲ್ಲಿ ಮಾಧ್ಯ (ಮುಂದಿನ ಪುಟಕ್ಕೆ)


ಮಿಕ ಶಾಲಾ ಶಿಕ್ಷಣ. ರಾಮನಗರದ ವಿವಿಧೋ ದ್ದೇಶ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು . ಬೆಂಗಳೂರಿನ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ತರಗತಿಗೆ ಪ್ರವೇಶ. ನಂತರ ಬಿ.ಎಸ್ಸಿ. ಮುಗಿಸಿದರು. ರಾಮನಗರದ ಹತ್ತಿರದ ಚಿದ್ದಗಾನಂದಾಶ್ರಮದಲ್ಲಿ ಕೆಲವು ವರ್ಷ ವಾಸವಿದ್ದರು. ಚಿಕ್ಕಂದಿನಿಂದಲೇ ಅಧ್ಯಯನ, ಅಧ್ಯಾತ್ಮ, ವೈದ್ಯಕೀಯ ವಿಷಯಗಳಲ್ಲಿ ಅತೀವ ಆಸಕ್ತಿಯುಳ್ಳವರಾಗಿದ್ದರು.
ಸನ್ಯಾಸ ದೀಕ್ಷೆ : ೧೯೬೮ರ ಫೆ.೧೨ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.ಅಂದಿನ ಪೀಠಾಧಿಪತಿ ಶ್ರೀ ರಮಾನಂದನಾಥ ಸ್ವಾಮೀಜಿಗಳು ಗಂಗಾ ಧರಯ್ಯನಿಗೆ ಮಂತ್ರೋಪದೇಶದೊಂದಿಗೆ ಸನ್ಯಾಸಿ ದೀಕ್ಷೆ ನೀಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀ ಜಿ ಎಂದು ಮರು ನಾಮಕರಣ ಮಾಡಿದರು. ಆ ಬಳಿಕ ಬೆಂಗಳೂರಿನ ಕೈಲಾಸಾಶ್ರಮದಲ್ಲಿ ಇದ್ದುಕೊಂಡು ಅದ್ವೈತ ವೇದಾಂತ ಸಂಸ್ಕೃತ ಪದವಿ ಪಡೆದರು. ಕೈಲಾಸಾಶ್ರಮದ ಶ್ರೀ ತಿರುಚ್ಚಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ತತ್ವ ವಿಚಾರಗಳ ಅಧ್ಯಯನ. ನಂತರ ಗುರುಗಳ ಶುಶ್ರೂಷೆಗೆ ವಾಪಾ ಸ್ಸಾದ ಬಾಲಗಂಗಾಧನಾಥ ಸ್ವಾಮೀಜಿ ಅವರು ಶ್ರೀ ರಮಾನಂದನಾಥ ಸ್ವಾಮೀಜಿಯ ನಿಧನದ ನಂತರ ೧೯೭೪ ಸೆಪ್ಟೆಂಬರ್ ೨೫ ರಂದು ಶ್ರೀ ಮಹಾ ಸಂಸ್ಥಾನ ಮಠದ ೭೧ನೇ ಪೀಠಾಧಿಪತಿ ಗಳಾಗಿ ಪಟ್ಟಕ್ಕೇರಿದರು.


ಶಿಕ್ಷಣ ಕ್ರಾಂತಿ ಮತ್ತು ಸಮಾಜ ಧರ್ಮವನ್ನೂ ಪಾಲಿಸಿದರು!
ಒಂದು ಕಾಲಕ್ಕೆ ಸಂನ್ಯಾಸಿಗಳಿಗೆ “ಸನ್ಯಾಸ ಧರ್ಮ”ವೇ ಪ್ರಧಾನವಾಗಿತ್ತು. ಆದರೆ ಬಾಲ ಗಂಗಾಧರನಾಥ ಸ್ವಾಮಿಗಳವರಿಗೆ ಸಂನ್ಯಾಸ ಧರ್ಮ ದೊಂದಿಗೆ ಸಮಾಜ ಧರ್ಮವನ್ನು ಸೇರಿಸಿ, ಜೀವನ ನಡೆಸುತ್ತಿರುವವರು ಆಯಸ್ಕಾಂತ ದಂತೆ ನಾಡಿನ ಸಮಸ್ತ ಜನರನ್ನು ತಮ್ಮೆಡೆಗೆ ಆಕರ್ಷಿ ಸಿಕೊಂಡರು. ಶ್ರೀ ಕ್ಷೇತ್ರದ ಪ್ರಗತಿಗೆ ಯೋಜನೆಗಳನ್ನು ರೂಪಿಸಿ ಅವುಗಳಲ್ಲಿ ಬಹುತೇಕ ಕಾರ್ಯಗಳನ್ನು ಕಾರ್ಯರೂಪಕ್ಕೆ ತಂದರು. ಈ ಕ್ಷೇತ್ರ ದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ.


ಕಲಾರಾಧಕ ಶ್ರೀಗಳು: ಪರಮಪೂಜ್ಯರು ಶ್ರೀಮಠದ ಮೂಲಕ ಕೇವಲ ಒಂದು ಸಮಾಜವನ್ನು ಅಷ್ಟೇ ಉದ್ಧರಿಸಿದವರಲ್ಲ ಯಾವ ಹಿಂದುಳಿದ ಸಮಾಜಕ್ಕೆ ಸಂಘಟಿತ ಶಕ್ತಿ ಇರಲಿ ಲ್ಲವೋ, ಆಧುನಿಕ ಜ್ಞಾನದ ಅರಿವೂ ಇರಲಿ ಲ್ಲವೋ, ಯಾವ ಸಮಾಜ ಸಾಂಸ್ಕೃತಿಕ ವಾಗಿ ಪರಾವಲಂಬಿಯಾಗಿತ್ತೋ ಅಂತಹ ಸಮಾಜದ ಜನಮಾನಸಕ್ಕೆ ಚೇತನ ಶಕ್ತಿ ಯಾದವರು. ಮಾನವನ ಕುಲದ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು ಜಡವಾಗಿದ್ದ ಸಮಾಜವನ್ನು ಜಾಗೃತಗೊಳಿಸಿದ್ದು ಮಾತ್ರವಲ್ಲ, ಸಮಷ್ಟಿಯ ಉದ್ಧಾರ ಮಾಡಿದ ಮನು ಕುಲೋದ್ಧಾರಕರೆನಿಸಿದ್ದರು. ಸರ್ವ ಜನಾಂಗ ದವರನ್ನು ಸರ್ವ ಧರ್ಮೀಯರನ್ನು ಸಮಾನವಾಗಿ ಪ್ರೀತಿಸಿದ ಹೆಗ್ಗಳಿಕೆ ಸ್ವಾಮೀಜಿಯವರಿಗೆ ಸಲ್ಲುತ್ತದೆ. ೧೯೭೮ ರಲ್ಲಿ ೨೦೦ ಮಂದಿ ಜನಪದ ಕಲಾವಿದ ರಿಂದ ಆರಂಭಗೊಂಡ ಕಲಾಮೇಳ ಇಂದಿಗೂ ಮುಂದುವರೆದಿದೆ. ಇಂದು ನಾಡಿನಾದ್ಯಂತ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ೨೦ ಸಾವಿರಕ್ಕೂ ಹೆಚ್ಚು ಮಂದಿ ಜನಪದ ಕಲಾವಿದರು ವರ್ಷಕ್ಕೊಮ್ಮೆ ಆದಿಚುಂಚನಗಿರಿಗೆ ಆಗಮಿಸಿ, ಮೂರು ದಿನಗಳ ಕಾಲ ಇಲ್ಲಿಯೇ ಉಳಿದು ಜನಪದರ ಜಾತ್ರೆಯನ್ನು ನಡೆಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಿರುವ ಸಮಾಜದ ಸೇವಾ ಪರರನ್ನು ಗುರುತಿಸಿ ಗೌರವಿಸಲಾಗುತ್ತದೆ. ಇಂಥವರಿಗೆ ೨೦ ವರ್ಷದಿಂದ ಪ್ರತಿ ವರ್ಷ ೫ ಮಂದಿ ಗಣ್ಯರಿಗೆ ಚುಂಚಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದರು.
ಆರೋಗ್ಯ ಸೇವೆಯತ್ತಲೂ ಗಮನ :


ಅಪಾರ ಶಿಷ್ಯ ಕೋಟಿಯನ್ನು ಭಕ್ತವೃಂದವನ್ನು ಹೊಂದಿರುವ ಶ್ರೀಕ್ಷೇತ್ರ ಕನ್ನಡ ನಾಡಿನಲ್ಲಷ್ಟೇ ಅಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಭಾರತದಲ್ಲಿಯ ಮುಂತಾದ ರಾಜ್ಯಗಳಲ್ಲಿಯೂ ಹಾಗೂ ವಿದೇಶಗಳಲ್ಲಿಯೂ ಅಪಾರ ಭಕ್ತವೃಂದವನ್ನು ಹೊಂದಿದೆ. ಪೂಜ್ಯಶ್ರೀ ಗುರೂಜಿಯವರು ಗ್ರಾಮೀಣ ಪ್ರದೇಶದಲ್ಲಿ ಬೃಹತ್ತಾದ ಸುಸಜ್ಜಿತವಾದ ಆಸ್ಪತ್ರೆಗಳನ್ನು ತೆರೆದು ಬಡಜನರ ಆರೋಗ್ಯ ಸಂರಕ್ಷಣೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಂದರೆ ಮಂಡ್ಯ ಜಿಲ್ಲೆಯ ಬಿ. ಜಿ. ನಗರ, ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರಲ್ಲಿ ಅತ್ಯಾಧುನಿಕ ಆಸ್ಪತ್ರೆ ತೆರೆದು ಜನರ ಆರೋಗ್ಯ ರಕ್ಷಣೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಜೊತೆಗೆ ಭಾರತೀಯ ವೈದ್ಯ ಪದ್ಧತಿಯನ್ನು ಪುನರುಜ್ಜೀವನ ಗೊಳಿಸುವ ನಿಟ್ಟಿನಲ್ಲಿ ಚಿಂತಿಸಿ ಬೆಂಗಳೂರಿನ ವಿಜಯನಗರದಲ್ಲಿ ಜಯನಗರದಲ್ಲಿ ೧೯೯೬ ರಲ್ಲಿಯೇ ಹತ್ತು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ಆಯುರ್ವೇದ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯವನ್ನು ತೆರೆದು ಭಾರತೀಯ ವೈದ್ಯ ಪದ್ಧತಿಯಂತೆ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿದ್ದಾರೆ. ಸ್ವಾಮಿಗಳವರು ಶ್ರೀಮಠದ ವತಿಯಿಂದ ಶೈಕ್ಷಣಿಕ ಹಾಗು ಸಾಮಾಜಿಕ ಆಯಾಮಗಳಿಗೆ ಅದ್ಭುತ ಸಂಚಲನವನ್ನುಂಟು ಮಾಡಿ, ತಾವು ಪೀಠಾಧ್ಯಕ್ಷರಾಗಿದ್ದ ಕೇವಲ ೩೮ ವರ್ಷಗಳಲ್ಲಿ ಶತಮಾನಗಳ ಹೆಸರನ್ನು ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.


ಅಂಧ ಮಕ್ಕಳ ವಸತಿ ಶಾಲೆ, ಅನಾಥಾಲಯ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಿ ನಿರ್ಗತಿಕರ ಬಗ್ಗೆ ವಿಶೇಷ ಮಮತೆಯನ್ನು ತೋರಿದ್ದಾರೆ. ಪರಿಸರ ಮಾಲಿನ್ಯ ಗಿಡ-ಮರಗಳ ನಾಶವನ್ನು ಪರಿಹರಿಸಲು ಪರಮಪೂಜ್ಯರು ತಮ್ಮ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ವರ್ಗದ ಧರ್ಮಗುರುಗಳನ್ನು ಒಳಗೊಂಡ ಕರ್ನಾಟಕ ವನ ಸಂವರ್ಧನ ಟ್ರಸ್ಟನ್ನು ಪ್ರಾರಂಭಿಸಿ, ರಾಜ್ಯಾದ್ಯಂತ ೫ ಕೋಟಿ ಜನಸಂಖ್ಯೆಗೆ ಅನುಗುಣವಾಗಿ ೫ ಕೋಟಿ ಸಸಿಗಳನ್ನು ನೆಡುವ ಪವಿತ್ರ ಕಾರ್ಯಕ್ರಮವನ್ನು ಪೂರೈಸಿದ್ದಾರೆ. ಬರ ಪೀಡಿತ ಪ್ರದೇಶಗಳಿಂದ ಜಾನುವಾರುಗಳು ಕಸಾಯಿಖಾನೆಗೆ ಹೋಗುತ್ತಿರುವುದು ತಪ್ಪಿಸಲು ಮಂಡ್ಯ, ಬೆಂಗಳೂರು ಮತ್ತು ಚಿತ್ರದುರ್ಗ, ಶಿವಮೊಗ್ಗ ಹಾಗೂ ಇನ್ನಿತರ ಶಾಖಾಮಠಗಳ ವ್ಯಾಪ್ತಿಗಳಲ್ಲಿ ಅತ್ಯಾಧುನಿಕ ಗೋಶಾಲೆಗಳನ್ನು ತೆರೆದಿದ್ದಾರೆ. ಸ್ವಾಮಿಗಳವರು ವಿಶೇಷವಾಗಿ ನಾಡಿನ ಪರಿಸರ ಸಂರಕ್ಷಣೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಭೂಮಿಯ ಮೇಲಿನ ಪ್ರತಿಯೊಂದು ಜೀವರಾಶಿಯ ಬದುಕಿನಲ್ಲೂ ನೆಮ್ಮದಿ ತರುವ ಕನಸು ಕಂಡು, ಅದನ್ನೆಲ್ಲಾ ನನಸು ಮಾಡಿದ ಪರಮಪೂಜ್ಯರಿಗೆ ಮೂರು ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದರೆ, ಭಾರತ ಸರ್ಕಾರವು ಪೂಜ್ಯ ಗುರುಗಳಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದಿಗೂ ಪೂಜ್ಯ ಸ್ವಾಮಿಗಳವರ ಅನುಪಸ್ಥಿತಿಯಲ್ಲಿ ಆ ಎಲ್ಲಾ ಸೇವಾ ಕಾರ್ಯಗಳು ಮುಂದುವರೆಯುತ್ತಿವೆ. ಸ್ವಾಮೀಜಿಯವರು ಭೌತಿಕವಾಗಿ ಇಲ್ಲದಿರಬಹುದು, ಆದರೆ ಶ್ರೀ ಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯದ ಯಶಸ್ಸಿನ ಹಿಂದೆ ಸ್ವಾಮಿಗಳವರ ಉಪಸ್ಥಿತಿಯನ್ನು ಇಂದಿಗೂ ಕಾಣಬಹುದು.

Exit mobile version