Site icon TUNGATARANGA

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರಿಗೆ ಅಭಿವೃದ್ಧಿಗಿಂತ ಧರ್ಮವೇ ದೊಡ್ಡದು / ಯಾವುದಾದರೂ ಮಠದ ಧರ್ಮದರ್ಶಿಯಾಗಿ ಸೇರಿಕೊಳ್ಳಲಿ :ವೈ.ಎಚ್. ನಾಗರಾಜ್ ವ್ಯಂಗ್ಯ


ಅಭಿವೃದ್ಧಿಗಿಂತ ಧರ್ಮವೇ ದೊಡ್ಡದು ಎಂದು ಶಾಸಕ ಕೆ. ಎಸ್. ಈಶ್ವರಪ್ಪ ಹೇಳಿರು ವುದು ಖಂಡನೀಯ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಹೇಳಿದ್ದಾರೆ.


ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಬ್ರಿಟಿಷರ ಕಾಲದಿಂದಲೂ ನಡೆಯುತ್ತ ಬಂದಿದೆ. ಆದರೆ ಇಂದಿನ ಅಗತ್ಯತೆ ಧರ್ಮ ಉಳಿಸುವುದು ಎಂದಿದ್ದಾರೆ. ಧರ್ಮ ವನ್ನು ಉಳಿಸುವ ಅಷ್ಟೊಂದು ಕಾತರವಿದ್ದರೆ ಅವರು ಯಾವುದಾದರೊಂದು ಮಠದ ಧರ್ಮದರ್ಶಿಯಾಗಿ ಸೇರಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.


ಈಶ್ವರಪ್ಪನವರ ಪ್ರಕಾರ ಧರ್ಮದ ಉಳಿವು ಎಂದರೇನು ಎಂದು ಪಶ್ನಿಸಿದ ಅವರು, ಧಮ ವನ್ನು ಎಲ್ಲರೂ ಪರಿಪಾಲಿಸಿಕೊಂಡು ಬರುತ್ತಿ ದ್ದಾರೆ. ಬಿಜೆಪಿಗೆ ಯಾವ ಧರ್ಮ ಮುಖ್ಯ ಗುರಿ ಯಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದರ ಲ್ಲದೆ, ಅಭಿವೃದ್ಧಿ ಅವರಿಗೆ ಮುಖ್ಯವಲ್ಲ ಎಂದರು.
ಈಶ್ವರಪ್ಪ ಇತ್ತೀಚೆಗೆ ಭವಿಷ್ಯ ಹೇಳುವು ದನ್ನು ಕಲಿತಿದ್ದಾರೆ. ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧಿಸಿದರೂ ಸೋಲುತ್ತಾರೆಂದು ಭವಿಷ್ಯ ಹೇಳಿ ದ್ದಾರೆ. ಅವರು ರಾಜಕಾರಣ ಬಿಟ್ಟು ಪೂರ್ಣ ಕಾಲಿಕ ಜ್ಯೋತಿಷಿ ಆಗುವುದು ಒಳ್ಳೆಯದು. ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಾದರೂ ಸಿಕ್ಕಿದೆ.

ಈಶ್ವರಪ್ಪನವರಿಗೆ ಈಗ ಶಿವಮೊಗ್ಗ ಕ್ಷೇತ್ರವೇ ಗ್ಯಾರಂಟಿಯಾಗಿಲ್ಲ. ಕ್ಷೇತ್ರ ಕಳೆದುಕೊಳ್ಳುವ ಸೂಚನೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದರು.
ಬಿಜೆಪಿಯವರು ಈಶ್ವರಪ್ಪ ಅವರನ್ನು ಸಿದ್ದರಾಮಯ್ಯ ವಿರುದ್ಧ ಮಾತನಾಡಲಿಕ್ಕೆ ಇಟ್ಟುಕೊಂಡಿದ್ದಾರೆ ಎಂದರು.
ಅಧಿಕಾರ ಮತ್ತು ಮಂತ್ರಿಸ್ಥಾನದ ಹಪಾಹಪಿತನ ಈಶ್ವರಪ್ಪ ಅವರನ್ನು ಇನ್ನೂ ಬಿಟ್ಟಿಲ್ಲ. ಇರುವ ೨-೩ ತಿಂಗಳಲ್ಲೇ ಮತ್ತೊಮ್ಮೆ ಮಂತ್ರಿಯಾಗಬೇಕೆಂಬ ಹುನ್ನಾರ ನಡೆಸಿದ್ದಾರೆ. ಈಶ್ವರಪ್ಪ ೫ ವರ್ಷದ ಶಾಸಕತ್ವದಲ್ಲಿ ಧರ್ಮಗಳ, ಜಾತಿಗಳ ಬಗ್ಗೆ ಮಾತನಾಡುವುದರಲ್ಲೇ ಕಾಲಕಳೆದಿದ್ದಾರೆ. ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿಲ್ಲ. ಯಡಿಯೂರಪ್ಪ ಮಾಡಿರುವ ಅಭಿವೃದ್ಧಿಯನ್ನೇ ತನ್ನದು ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

Exit mobile version