ಶಿವಮೊಗ್ಗ,
ಇಂದಿಗೂ ಪತ್ರಿಕೆಗಳು ಜನರಲ್ಲಿ ವಿಶ್ವಾಸವನ್ನು ಉಳಿಸಿಕೊಂಡಿವೆ. ನಿಖರ ಮತ್ತು ಸ್ಪಷ್ಟ ಸುದ್ದಿ ನೀಡುವಲ್ಲಿ ಪತ್ರಿಕೆಗಳ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ ಹೇಳಿದರು.
ಹೊಳೆಹೊನ್ನೂರು ಪಟ್ಟಣದ ವಿವೇಕಾನಂದ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ, ಸುದ್ದಿಕೊಡುವ ಭರದಲ್ಲಿ ಅಪೂರ್ಣ ಮತ್ತು ಅಸತ್ಯವಾದ ಮಾಹಿತಿ ಜನತೆಗೆ ತಲುಪಬಾರದು. ಇದರಿಂದ ಜನರ ಮೇಲಷ್ಟೇ ಅಲ್ಲದೇ,
ಸಮಾ ಜದ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸುದ್ದಿಯ ಸತ್ಯಾಸತ್ಯತೆ ಅರಿತು ಪ್ರಕಟಿಸಿದಾಗ ಮಾತ್ರ ಸಮಾಜಕ್ಕೂ ಹಾಗೂ ಮಾಧ್ಯಮಗಳ ವಿಶ್ವಾಸರ್ಹತೆಗೂ ಅನುಕೂಲವಾಗಲಿದೆ. ಇಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಮತ್ತು ಸೌಲಭ್ಯಗಳನ್ನು ನೀಡುವ ಮೂಲಕ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದರು.
ಘಟಕವನ್ನು ಉದ್ಘಾಟಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವ ರಾಜಪ್ಪ ಮಾತನಾಡಿ, ದೃಶ್ಯ ಮಾಧ್ಯಮದ ಪೈಪೋಟಿಯ ನಡುವೆ ಪತ್ರಿಕೆಗಳ ಸಾಧನೆ ಶ್ಲಾಘನೀಯ. ಪ್ರಸ್ತುತ ಪತ್ರಕರ್ತರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಈಗಿ ರುವಾಗ ಪತ್ರಕರ್ತರಿಗೆ ಸಂಘಟನೆ ಅನಿವಾ ರ್ಯ. ಅದರಲ್ಲೂ ನಮ್ಮ ಹೊಳೆಹೊನ್ನೂ ರಿನಲ್ಲಿ ಹೋಬಳಿ ಘಟಕ ಅಸ್ಥಿತ್ವಕ್ಕೆ ಬಂದದ್ದು ಸಂತಸದ ಸಂಗತಿ ಎಂದರು.
ಹೊಳೆಹೊನ್ನೂರು ಠಾಣೆಯ ಸಿಪಿಐ ಆರ್.ಎಲ್.ಲಕ್ಷ್ಮೀಪತಿ ಮಾತನಾಡಿ, ಪತ್ರಿಕೆಗಳಿಂದ ಸಮಾಜದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತವೆ. ಪತ್ರಿಕೆ ಓದುವ ಹವ್ಯಾಸ ಯಾರಲ್ಲಿ ಹೆಚ್ಚಾಗಿರುವು ದೋ ಅವರಿಗೆ ತಾವು ಬಳಸುವ ಭಾಷೆಯ ಮೇಲೆ ಹಿಡಿತ ಇರುತ್ತದೆ. ಸರ್ಕಾರದ ನಾಲ್ಕನೇ ಅಂಗವಾಗಿ ಮಾದ್ಯಮಗಳು ಕಾರ್ಯನಿರ್ವಹಿಸುತ್ತವೆ. ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಮಾಡದ ಕೆಲವು ಕೆಲಸಗಳು ಸುದ್ದಿ ಮಾದ್ಯಮಗಳಿಂದ ಆಗಿರುವ ಉದಾಹರಣೆಗಳಿವೆ ಎಂದರು.
ಕಾರ್ಯಕ್ರಮದಲಿ ಪ್ರೆಸ್‌ಟ್ರಸ್ಟ್‌ನ ಅಧ್ಯಕ್ಷ ಎನ್.ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಮಾಜಿ ಶಾಸಕಿ ಶಾರದಾ ಪೂರ‍್ಯಾನಾಯ್ಕ್, ಮಾಜಿ ಶಾಸಕ ಕೆ.ಜಿ.ಕುಮಾರ ಸ್ವಾಮಿ, ಕಾಂಗ್ರಸ್ ಮುಖಂಡ ಡಾ ಶ್ರೀನಿವಾಸ್ ಕರಿಯಣ್ಣ, ಕಾರ್ಯನಿರತ ಪರ್ತಕರ್ತರ ಸಂಘದ ಹೊಳೆಹೊನ್ನೂರು ಘಟಕದ ಅಧ್ಯಕ್ಷ ಹೆಚ್.ಜಿ.ವಿಜಯರಾಜ್, ಉಪಾಧ್ಯಕ್ಷ ರವಿಕುಮಾರ್, ಸಂಘದ ಕಾರ್ಯದರ್ಶಿ ಕೆ.ರಂಗನಾಥ್, ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.