Site icon TUNGATARANGA

ಅಗ್ನಿಶಾಮಕ ದಳದ ವೈಫಲ್ಯದಿಂದಲೇ ಶರತ್ ಭೂಪಾಳಂ ಸಾವು| ವಿರುದ್ದ ಕ್ರಮಕ್ಕೆ ಪ್ರತಿಭಟನೆ

ಶಿವಮೊಗ್ಗ,
ಅಗ್ನಿಶಾಮಕ ದಳದ ವೈಫಲ್ಯದಿಂದಲೇ ಶರತ್ ಭೂಪಾಳಂ ಮೃತಪಟ್ಟಿದ್ದು, ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶರತ್ ಭೂಪಾಳಂ ಕುಟುಂಬ ವರ್ಗ, ನಗರದ ವಿವಿಧ ಸಂಘಟನೆಗಳು ಇಂದು ಕುವೆಂಪು ರಸ್ತೆಯ ಶರತ್ ಭೂಪಾಳಂ ಅವರ ಮನೆಯಿಂದ ಮೆರವಣಿಗೆಯಲ್ಲಿ ಸಾಗಿ ಗೋಪಿ ಸರ್ಕಲ್ನಲ್ಲಿ ಮಾನವ ಸರಪಳಿ ನಡೆಸಿ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಖಂಡನಾ ಸಭೆ ನಡೆಸಿ ಮನವಿ ಸಲ್ಲಿಸಿದರು.


ಜ.೮ರ ಬೆಳಗಿನ ಜಾವ ಕುವೆಂಪು ರಸ್ತೆಯಲ್ಲಿರುವ ಶುಭಶ್ರೀ ನಿವಾಸದಲ್ಲಿ ನಡೆದ ಘೋರ ಅಗ್ನಿ ದುರಂತದಲ್ಲಿ ಶರತ್ ಭೂಪಾಳಂ ಅನ್ಯಾಯವಾಗಿ ಜೀವ ತೆತ್ತಿದ್ದಾರೆ. ಘಟನೆ ನಡೆದಾಗ ಅಗ್ನಿಶಾಮಕ ದಳದವರು ಸರಿಯಾದ ಸಮಯಕ್ಕೆ ಬರಲಿಲ್ಲ. ಬಂದರೂ ಕೂಡ ಅವರ ಬಳಿ ಸುರಕ್ಷತಾ ಉಪಕರ ಣಗಳು ಇರಲಿಲ್ಲ. ಇದರಿಂದ ತೊಂದರೆಯಾಯಿತು. ಮೊದಲ ಅಗ್ನಿಶಾಮಕ ವಾಹನ ಬಂದಾಗ ಅದರಲ್ಲಿ ಯಾವ ಸಲಕರಣೆಗಳು ಇರಲಿಲ್ಲ. ಎರಡನೇ ವಾಹನದಲ್ಲಿ ಎಲ್ಲಾ ಉಪಕರಣಗಳು ಇದ್ದವು. ಆದರೆ ಆ ವಾಹನ ಬುರುವುದು ತಡವಾದ್ದರಿಂದ ಶರತ್ ಭೂಪಾಳಂ ಜೀವ ಬಿಡಬೇಕಾಯಿತು ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.


ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಾತನಾಡಿ, ಇಲಾಖೆಯವರು ತಪ್ಪುಮಾಡಿದ್ದರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇನೆ. ಸೆಪ್ಟೆಂಬರ್ ತಿಂಗಳಲ್ಲಿ ಇಲಾಖೆಗೆ ಸುಮಾರು ೪೦ ಲಕ್ಷರೂ ಬಿಡುಗಡೆ ಮಾಡಿ ಅಗತ್ಯ ಉಪಕರಣಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಅಗ್ನಿಶಾಮಕ ದಳದವರು ಇನ್ನೂ ಹೆಚ್ಚಿನ ಸುರಕ್ಷತಾ ಉಪಕರಣಗಳನ್ನು ಕೇಳೀದರೆ ಕೊಡುತ್ತೇನೆ. ಘಟನೆ ಬಗ್ಗೆ ವಿಷಾದವಿದೆ. ಇಲಾಖೆಯ ತಪ್ಪಾಗಿದ್ದರೆ ಖಂಡಿತಾ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವೆ ಎಂದರು.


ಪ್ರತಿಭಟನೆಯಲ್ಲಿ ಭೂಪಾಳಂ ಕುಟುಂಬವರ್ಗ ದವರು, ಐಕ್ಯ ಸಂಸ್ಥೆ, ಮಾಚೇನಹಳ್ಳಿ, ಸಾಗರ, ಇಂಡಸ್ಟ್ರಿಯಲ್ ಎಸ್ಟೇಟ್ ಪದಾಧಿ ಪದಾಧಿಕಾರಿಗಳು ಆರ್ಯವೈಶ್ಯ ಸಂಘಟನೆಗಳು, ಗಾಂಧಿಬಜಾರ್ ವರ್ತಕರ ಸಂಘ, ಜಿಲ್ಲಾ ಒಕ್ಕಲಿಗರ ಸಂಘ, ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶರತ್ ಭೂಪಾಳಂ ಅಭಿಮಾನಿಗಳು ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಚೇನಹಳ್ಳಿ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗ್ಡೆ, ಡಾ. ಸತೀಶ್ ಕುಮಾರ್ ಶೆಟ್ಟಿ ಮುಂತಾದವರು ಇದ್ದರು.

Exit mobile version