೨ ತಿಂಗಳ ಹಿಂದೆ ನಗರದ ಪ್ರತಿಷ್ಟಿತ ರೆಸಾರ್ಟ್‌ನಲ್ಲಿ ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸಾವಿತ್ರಿ (೪೫) ವರ್ಷ ಮಹಿಳೆಯ ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.
ಈ ಸಾವನ್ನು ಅಸಹಜ ಸಾವೆಂದು ಪೊಲೀಸರು ದಾಖಲಿಸಿದ್ದರು. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಇದು ಕೊಲೆ ಎಂಬುದು ಮಾಹಿತಿ ಬಂದಿತ್ತು. ಈ ಸಂಬಂಧ ತುಂಗಾ ನಗರ ಪೊಲೀಸರು ಅದೇ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಜೋಗಿಂಧರ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದ್ದಾರೆ.
ಜೋಗಿಂಧರ್ ಉತ್ತರ ಪ್ರದೇಶ ರಾಜ್ಯದವನಾಗಿದ್ದು, ರೆಸಾರ್ಟ್‌ನಲ್ಲಿ ಟೈಲ್ಸ್ ಕೆಲಸ ಮಾಡುತ್ತಿರುತ್ತಾನೆ. ಆಗ ಸಾವಿತ್ರಿ ಪರಿಚಯವಾಗಿ ಅವರಿಬ್ಬರ ನಡುವೆ ದೈಹಿಕ ಸಂಬಂಧ ಕೂಡ ಇರುತ್ತದೆ. ಆಕೆ ಮೃತಪಟ್ಟ ದಿನ ಕೂಡ ಆಕೆಯೊಂದಿಗೆ ದೈಹಿಕ ಸಂಪರ್ಕ ಆತ ಬೆಳೆಸಿರುತ್ತಾನೆ. ಆಕೆ ದುಡ್ಡಿಗಾಗಿ ಡಿಮ್ಯಾಂಡ್ ಮಾಡಿದಾಗ ಈ ಹಿಂದೆ ೨ ಸಾವಿರ ನೀಡಿದ್ದೇನೆ ಮತ್ತೆ ದುಡ್ಡು ಕೇಳುತ್ತಿಯ ಎಂದು ಸಿಟ್ಟಿನಲ್ಲಿ ಆಕೆಯ ಕುತ್ತಿಗೆ ಹಿಚುಕಿ ಅಲ್ಲಿಯೇ ಹರಿಯುತ್ತಿರುವ ತೊರೆಯ ಬಳಿ ಆಕೆಯನ್ನು ಅದುಮಿ ಹಿಡಿದು ಸಾಯಿಸಿರುತ್ತಾನೆ. ಮೂಗು ಮತ್ತು ಬಾಯಲ್ಲಿ ಮಣ್ಣು ಹೋಗಿ ಆಕೆ ಮೃತಪಟ್ಟಿರುವುದು ದೃಡಪಟ್ಟಿದ್ದು, ಆರೋಪಿ ಕೂಡ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ತುಂಗಾ ನಗರ ಪೊಲೀಸರು ಉತ್ತರ ಪ್ರದೇಶಕ್ಕೆ ಹೋಗಿ ಕರೆದುಕೊಂಡು ಬಂದು ಆತನಿಂದ ಸಂಪೂರ್ಣ ಮಾಹಿತಿ ಪಡೆದಿದ್ದು, ಅಸಹಜ ಸಾವೆಂದು ದಾಖಲಾದ ಈ ಪ್ರಕರಣ ಕೊಲೆಯೆಂದು ಸಾಬೀತಾಗಿದೆ ಎಂದರು.
ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.