ಶಿವಮೊಗ್ಗ,ಸೆ.21:
ನಗರದ ರಸ್ತೆಗಳು ಹದಗೆಟ್ಟು ಹೋಗಿವೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಶಿವಮೊಗ್ಗ ನಗರದ ಯಾವ ರಸ್ತೆಯಲ್ಲಿಯೂ ಸರಾಗ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ಇಡೀ ಶಿವಮೊಗ್ಗ ನಗರದ ರಸ್ತೆಗಳು ಗುಂಡಿಗಳಿಂದ ಮುಳುಗಿದ್ದು ವಾಹನ ಸಂಚಾರ ತುಂಬಾ ಕಷ್ಟವಾಗಿದೆ.
ಇಲ್ಲಿ ಸ್ಮಾರ್ಟ್ ಸಿಟಿ ಹೆಸರು ಕಾಮಗಾರಿಗಳ ಲೆಕ್ಕಾಚಾರ ಇಲ್ಲಿ ಮುಖ್ಯ ವಿಷಯವೇ ಅಲ್ಲ. ಇದರ ನಡುವೆ ತೆವಳುತ್ತಾ ಸಾಗುವ ವಾಹನ ಸವಾರರು ಪೊಲೀಸರ ಕಿರಿಕಿರಿಯನ್ನು ಎಲ್ಲೆಡೆ ಎದುರಿಸಬೇಕಾಗಿರುವುದು ದುರಂತವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೆಲ್ಮೆಟ್ ರಹಿತರನ್ನು ಹಿಡಿಯುವ ಲೆಕ್ಕಾಚಾರದಲ್ಲಿ ಪೊಲೀಸರು ಎಲ್ಲೆಂದರಲ್ಲಿ ಫೋಟೋ ತೆಗೆಯುವ, ಅಡ್ಡ ಕೈಹಾಕುವ, ಇಲ್ಲವೇ ಬೆದರಿಸಿ ಹಿಡಿಯುವ ಕಾಯಕವನ್ನು ಮಾಡುತ್ತಿದ್ದಾರೆ. ಹೆಲ್ಮೆಟ್ ರಹಿತ ಚಾಲನೆ ಅವರನ್ನು ಸವಾರರನ್ನು ಹಿಡಿಯುವುದು ಕಾನೂನು ಹಾಗೂ ಕಾನೂನು ಪ್ರಕಾರ ದಂಡ ವಿಧಿಸುವುದು ಸರಿಯಷ್ಟೇ. ಆದರೆ ಇರುವ ವ್ಯವಸ್ಥೆ ಗಮನಿಸಿ ಎಂದಿದ್ದಾರೆ.
ಈ ಕುಲಗೆಟ್ಟ ರಸ್ತೆಗಳ ವ್ಯವಸ್ಥೆಯಾದರೂ ಒಂದಿಷ್ಟು ಸರಿಯಾಗುವ ತನಕ ಸಲಹೆ ನೀಡುವ ಕಾರ್ಯವನ್ನು ಮಾತ್ರ ಪೊಲೀಸರು ಮಾಡಲಿ ಎಂದು ಇದೇ ಜನರು ಒತ್ತಾಯಿಸಿದ್ದಾರೆ.
ಗುಂಪು ಕಟ್ಟಿಕೊಂಡು ಪೊಲೀಸರು ಹೆಲ್ಮೆಟ್ ರಹಿತರ ಬೇಟಯಾಡುವ ಕಾರ್ಯ ಒಂದು ವಿಚಿತ್ರವೆಂಬಂತೆ ಕಾಣುತ್ತಿದೆ. ಇದು ಅಷ್ಟು ಸರಿಯಾಗಿ ಕಾಣುತ್ತಿಲ್ಲ ಇಂದು ಶಿವಮೊಗ್ಗ ನಗರದ ಮುಖ್ಯ ರಸ್ತೆ ಯಾದ ದುರ್ಗಿಗುಡಿ, ಎಲ್ ಎಲ್ ಆರ್ ರಸ್ತೆ ಹಾಗೂ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಬಳಿ ಅತ್ತ ಇತ್ತ ಚಲಿಸುವಂತಹ ದುಸ್ಥಿತಿ ಬಂದಿದೆ. ಕಾಮಗಾರಿಯ ಸದುದ್ದೇಶಕ್ಕೆ ಆಗಿದ್ದರೂ ಸಹ ಇಲ್ಲಿ ಪೊಲೀಸರು ಕ್ಯಾಮರಾಮನ್ ಗಳಾಗಿ ಸಂದಿಯಲ್ಲಿ ಪೋಟೋ ತಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.