Site icon TUNGATARANGA

ಫೆ-2023 ರಿಂದ ಹೆಚ್ಚುವರಿ 1 ಕೆ.ಜಿ. ಪಡಿತರ ಅಕ್ಕಿ ವಿತರಣೆ


ಶಿವಮೊಗ್ಗ ಜನವರಿ ೧೨ (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ೨೦೨೩ರ ಜನವರಿಯಿಂದ ರಾಜ್ಯ ಎಲ್ಲಾ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭಿವಿಗೆ ಎನ್‌ಎಫ್‌ಎಸ್‌ಎ ಹಂಚುವ ೫ ಕೆ.ಜಿ. ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ ೧

ಕೆ.ಜಿ. ಅಕ್ಕಿಯನ್ನು ವಿತರಿಸಲು ಆದೇಶಿಸಿದ್ದು, ಸಕಾಲದಲ್ಲಿ ಅಕ್ಕಿ ಸರಬರಾಜು ಲಭ್ಯವಿಲ್ಲದ್ದರಿಂದ ಹಾಗೂ ನ್ಯಾಯಬೆಲೆ ಅಂಗಡಿಗಳ ಬಿಲ್ಲಿಂಗ್ ವ್ಯವಸ್ಥೆ ಮತ್ತು ಪಿಓಎಸ್ ಆರಂಭಗೊಂಡಿರುವ ಕಾರಣ ೨೦೨೩ರ ಫೆಬ್ರವರಿ ಮಾಹೆಯಿಂದ ೧ ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುವುದು. ಈಗಾಗಲೇ ಆನ್‌ಲೈನ್ ಹಂಚಿಕೆಯಂತೆ ಜನವರಿ-೨೦೨೩ರ ಮಾಹೆಯಲ್ಲಿ ಪ್ರತಿ ಫಲಾನುಭವಿಗೆ

ಎನ್‌ಎಫ್‌ಎಸ್‌ಎ ೫ ಕೆ.ಜಿ.ಅಕ್ಕಿಯನ್ನು ಮಾತ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version