Site icon TUNGATARANGA

ದರೋಡೆಗೆ ಯತ್ನಿಸುತ್ತಿದ್ದ ಖದೀಮರನ್ನು ಹಿಡಿದ ದೊಡ್ಡಪೇಟೆ ಪೊಲೀಸರು

ಶಿವಮೊಗ್ಗ,ಸೆ.21:
ಇಲ್ಲಿನ ಶರಾವತಿ ನಗರ ತುಂಗಾ ಚಾನೆಲ್ ಪಕ್ಕದ ಖಾಲಿ ಜಾಗದಲ್ಲಿ ಮಚ್ಚು-ಲಾಂಗು ಹಿಡಿದುಕೊಂಡು ದಾರಿಯಲ್ಲಿ ಬರುವ ಜನರನ್ನು ಬೆದರಿಸಿ ಸುಲಿಗೆ ಮಾಡಲು ಹೆಚ್ಚಿಸುತ್ತಿದ್ದ ಐವರ ತಂಡವನ್ನು ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿದ್ದಾರೆ. ಅದರಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.
ನಗರದ ಕೆಲ ಬಡಾವಣೆಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರು ಹಾಗೂ ಜನರನ್ನು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಅವರ ಬಳಿ ಇರುವ ಆಭರಣಗಳನ್ನು ಹಾಗೂ ಹಣವನ್ನು ದೋಚಲು ವ್ಯವಸ್ಥಿತ ಸಂಚು ನಡೆಸುತ್ತಿದ್ದ ಕುಖ್ಯಾತ ತಂಡವನ್ನು ಪತ್ತೆ ಹಚ್ಚುವಲ್ಲಿ ಹಾಗೂ ಬಂಧಿಸುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಸಂತ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಶಂಕರಮೂರ್ತಿ, ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಮಂಜಮ್ಮ ಹಾಗೂ ತಂಡ ಈ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.


ಬೆಳಗಿನ ಜಾವ ನಾಲ್ಕೂಮುವ್ವತ್ತರ ಹೊತ್ತಿಗೆ ಕಾಯುತ್ತಾ ಕುಳಿತುಕೊಳ್ಳುತ್ತಿದ್ದ ಈ ತಂಡ ಬೆಳಗಿನ ವಾಕಿಂಗ್ ಬರುವವರನ್ನು ಗುರಿ ಮಾಡಿಕೊಂಡು ದರೋಡೆ ಮಾಡಲು ಮುಂದಾಗಿತ್ತು.


ಪತ್ತೆಯಾಗಿರುವ ಆರೋಪಿಗಳೆಲ್ಲರೂ ಇನ್ನು ಯುವಕರೇ ಆಗಿದ್ದಾರೆ. ಐವರಲ್ಲಿನಾಲ್ವರರು 19 ವರುಷದ ಯುವಕರಾಗಿದ್ದಾರೆ.


ಶಿವಮೊಗ್ಗದ ಮುರಾದ್ ನಗರದ ನಿವಾಸಿ, ಮಲ್ನಾಡ್ ಕಂಪ್ಯೂಟರ್ ನ ಕೆಲಸಗಾರ ಮಹಮದ್ ಫರ್ಧಿನ್ ಶೇಕ್ ಯಾನೆ ಫರ್ಧಿನ್, ಇದೇ ನಗೃದ ನಿವಾಸಿ, ವೆಲ್ಡಿಂಗ್ ಕೆಲಸಗಾರ ಮಹಮದ್ ರಾಹೀಲ್ ಯಾನೇ ರಾಹಿಲ್, ಉಂಬಳೇಬೈಲು ಆಲ್ದೂರಿನ ಆಕಾಶ್ ವಿ, ಲಿಯಾಸ್ ನಗರದ ವೆಲ್ಡಿಂಗ್ ಕೆಲಸಗಾರ ಫಯಾಜ್ ಖಾನ್ ಯಾನೆ ಫಯಾಜ್ ಎಂಬುವರನ್ನು ಬಂಧಿಸಲಾಗಿದೆ. ಈ ಸಮಯದಲ್ಲಿ ಅಲ್ಲಿದ್ದ ಹೊಸನಗರದ ಶೇಕ್ ಮಹಮ್ಮದ್ ಸೈಪ್ ಎಂಬಾತ ನಾಪತ್ತೆಯಾಗಿದ್ದಾನೆ.


ಆರೋಪಿಗಳಿಂದ ಮುಕ್ಕಾಲು ಅಡಿ ಉದ್ದದ ಸ್ಟೀಲ್ ಚಾಕು, ಅಷ್ಟೇ ಅಳತೆಯ ಫೋಲ್ಡಿಂಗ್ ಚಾಕು, ಎರಡೂವರೆ ಅಡಿ ಕಬ್ಬಿಣದ ರಾಡು ಹಾಗೂ ಸುಮಾರು 150 ಗ್ರಾಂ ತೂಕದ ಖಾರದಪುಡಿ ಯ ಪ್ಲಾಸ್ಟಿಕ್ ಕವರ್ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಕೆಎಂ ಶಾಂತರಾಜ್, ಡಿವೈಎಸ್ಪಿ ಈಶ್ವರಚಂದ್ರ ಉಮೇಶ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ

Exit mobile version