Site icon TUNGATARANGA

ಇ-ತ್ಯಾಜ್ಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಪರಿಸರ ತಜ್ಞ ನಿವೃತ್ತ ಪ್ರಾಧ್ಯಾಪಕಿ ಶ್ರೀಪತಿ

ಇ-ತ್ಯಾಜ್ಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪರಿಸರ ತಜ್ಞ ನಿವೃತ್ತ ಪ್ರಾಧ್ಯಾಪP ಶ್ರೀಪತಿ ಹೇಳಿದರು.


ಅವರು ಇಂದು ಸಹ್ಯಾದ್ರಿ ಕಾಲೇಜು, ರೋಟರಿ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಇ-ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯಮುಕ್ತ ಆಂದೋಲನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಜಗತ್ತು ಇಂದು ಕಸದತೊಟ್ಟಿಯಾಗುತ್ತಿದೆ. ಈ ತೊಟ್ಟಿಗೆ ಈಗ ಇ-ತ್ಯಾಜ್ಯ ಸೇರಿಕೊಂಡಿದೆ. ನಮ್ಮ ದಿನನಿತ್ಯದಲ್ಲಿ ಎಲೆಕ್ಟ್ರಾನಿಕ್ ಹಾಗೂ ಎಲೆPಕ್ಟ್ರಿಕಲ್ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಜೊತೆಗೆ ಪ್ಲಾಸ್ಟಿಕ್ ಬಳಕೆ ಕೂಡ ಮಿತಿ ಮೀರಿದೆ. ಉಪಯುಕ್ತತೆ ಮೀರಿದ ಈ ಉಪಕರಣಗಳ ಕಸ ಅಪಾಯಕಾರಿಯಾಗಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ನೆರ ಪರಿಣಾಮ ಬೀರುತ್ತದೆ ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ದುರಂತ ತಂದೊಡ್ಡುವುದರಲ್ಲಿ ಸಂಶಯವಿಲ್ಲ ಎಂದರು.


ಇದಕ್ಕೆ ಪರಿಹಾರ ಎಂದರೆ ಇ-ತ್ಯಾಜ್ಯದ ವಸ್ತುಗಳನ್ನು ಕಡಿಮೆ ಬಳಸುವುದೇ ಆಗಿದೆ. ಜೊತೆಗೆ ಪುನರ್ ಬಳಕೆ ಹೆಚ್ಚಾಗಬೇಕು. ಮುಖ್ಯವಾಗಿ ತೆಳು ಪ್ಲಾಸ್ಟಿಕ್ ತುಂಬಾ ಸಮಸ್ಯೆ ಒಡ್ಡುತ್ತಿದೆ. ನಾವು ಮಿತಿಮೀರಿ ಪ್ಲಾಸ್ಟಿಕ್ ಬಳಸುತ್ತಿದ್ದೇವೆ. ಇದರಿಂದ ಪರಿಸರದ ಮೇಲೆ ಹಾನಿಯಾಗುವುದಂತೂ ನಿಜ. ಮತ್ತು ಇ-ತ್ಯಾಜ್ಯದ ವಿಲೇವಾರಿ ಕಷ್ಟವಾಗಿದೆ. ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ತ್ಯಾಜ್ಯದ ಸೃಷ್ಟಿಯನ್ನು ಕಡಿಮೆ ಮಾಡಬೇಕು ಎಂದರು.


ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡೂವೈಂಡ್ಸ್ ರೀಜನ್ ಲ್ಯಾಬ್‌ನ ಡಿ. ವೆಂಕಟೇಶ್ ಇ-ತ್ಯಾಜ್ಯ ಸಂಗ್ರಹಣೆಯಲ್ಲಿ ಭಾರತ ಜಗತಿನಲ್ಲಿಯೇ ೫ನೇ ಸ್ಥಾನದಲ್ಲಿದೆ. ರಾಜ್ಯ ಮೂರನೇ ಸ್ಥಾನದಲ್ಲಿದೆ. ತ್ಯಾಜ್ಯ ಹೆಚ್ಚು ಮಾಡುತ್ತೇವೆಯೇ ಹೊರತು ಅದರ ಮರುಬಳಕೆಯಾಗುತ್ತಿಲ್ಲ. ಭಾರತದಲ್ಲಿ ಶೇ.೨೦ರಷ್ಟು ಮಾತ್ರ ಮರುಬಳಕೆ ಯಾಗುತ್ತಿದೆ. ಇನ್ನೂ ಶೇ೮೦ರಷ್ಟು ಮರುಬಳಕೆ ಆಗುತ್ತಿಲ್ಲವಾದ್ದರಿಂದ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಅಪಾಯಕಾರಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.. ನೆನಪಿನ ಶಕ್ತಿ ಸೇರಿದಂತೆ ನರದೌರ್ಬಲ್ಯ, ಹೃದಯದ ಕಾಯಿಲೆಗಳು, ಸೇರಿ ಮನುಷ್ಯನ ಆಯುಷ್ಯವನ್ನೇ ಕಡಿಮೆ ಮಾಡುತ್ತದೆ ಎಂದರು.


ಡಸ್ಟ್‌ಬಿನ್‌ಗೆ ಇ-ತ್ಯಾಜ್ಯ ಹಾಕುವ ಮೂಲಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್‌ನ ಸಹಾಯಕ ಗೌರ್ನರ್ ಸುನೀತಾ ಶ್ರೀಧರ್ ಎಲೆಕ್ಟ್ರಾನಿಕ್ ವಸ್ತುಗಳನ್ನು ನಾವು ರಿಪೇರಿ ಮಾಡಿಸುವುದೇ ಇಲ್ಲ. ಮತ್ತೆ ಹೊಸದನ್ನು ಕೊಳ್ಳುತ್ತೇವೆ.ಇದರಿಂದ ತ್ಯಾಜ್ಯ ಹೆಚ್ಚಾಗುತ್ತದೆ. ಮರುಬಳಕೆಗೆ ಹೆಚ್ಚು ಆದ್ಯತೆ ಕೊಡಬೇಕು ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಬಿ. ಧನಂಜಯ, ಪ್ರಮುಖರಾದ ಎನ್.ವಿ. ಭಟ್, ಡಾ. ಕಾಂಚನಾ ಕುಲಕರ್ಣಿ, ಶ್ರೀಧರ್, ಜಿ. ವಿಜಯಕುಮಾರ್, ನವೀನ್ ಮುಂತಾದವರಿದ್ದರು.

Exit mobile version